ಒಂದು ಕಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಶಾಕ್ ನೀಡಿದ ದೀಪಕ್ ಚಾಹರ್, ಆದರೆ ಅದೇ ಸಮಯದಲ್ಲಿ ಭಾರತ ತಂಡಕ್ಕೆ ಕೂಡ ಕಹಿ ಸುದ್ದಿ, ಯಾಕೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ತಂಡದ ಪ್ರಮುಖ ಆಟಗಾರ ಆಗಿರುವ ದೀಪಕ್ ಚಹಾರ್ ರವರು ಈ ತಿಂಗಳ ಒಳಗಾಗಿ ಸೇರಿ ಕೊಳ್ಳಬೇಕಾಗಿತ್ತು. ಆದರೆ ಸ್ನಾಯು ಸೆಳೆತದಿಂದಾಗಿ ದೀಪಕ್ ಚಹಾರ್ ಅವರು ತಂಡದಿಂದ ಹೊರಗುಳಿಯಬೇಕಾಯಿತು.
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಾಲ್ಕು ಬಾರಿಯ ಚಾಂಪಿಯನ್ ತಂಡವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಈ ಬಾರಿ ಹೇಳಿಕೊಳ್ಳುವಷ್ಟು ಖ್ಯಾತನಾಮರು ಹೊಸಬರು ಯಾರು ಬಂದಿಲ್ಲ. ಅದರಲ್ಲೂ ಪ್ರಮುಖವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ವಿಭಾಗ ಸಾಕಷ್ಟು ಕೊರತೆಯನ್ನು ಅನುಭವಿಸುತ್ತಿದೆ.

ಯಾಕೆಂದರೆ ಕಳೆದ ಬಾರಿಯ ಪ್ರಮುಖ ಆಟಗಾರರಾಗಿರುವ ಶಾರ್ದುಲ್ ಠಾಕೂರ್ ಡೆಲ್ಲಿ ತಂಡದಲ್ಲಿದ್ದಾರೆ ಹಾಗೂ ಈ ಬಾರಿ 14 ಕೋಟಿ ರೂಪಾಯಿ ಖರೀದಿ ಯಾಗಿರುವ ದೀಪಕ್ ಚಹಾರ್ ಅವರು ಪ್ರಾರಂಭದಿಂದಲೂ ಕೂಡ ತಂಡದಲ್ಲಿಲ್ಲ. ಯಾಕೆಂದರೆ ಬೆಂಗಳೂರಿನ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸಕ್ಕೆ ಒಳಗಾಗಿದ್ದ ಸಂದರ್ಭದಲ್ಲಿ ಸ್ನಾಯು ಸೆಳೆತದಿಂದ ಕೊಂಚಮಟ್ಟಿಗೆ ವಿಶ್ರಾಂತಿಯನ್ನು ಪಡೆಯುತ್ತಿದ್ದ ದೀಪಕ್ ಚಹಾರ್ ಅವರು ಈಗ ಬೆನ್ನು ನೋ’ವಿನಿಂದ ಬಳಲುತ್ತಿದ್ದಾರೆ. ಈಗಾಗಲೇ ಅವರ ಅನುಪಸ್ಥಿತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 9ನೇ ಸ್ಥಾನದಲ್ಲಿದ್ದು ಪ್ಲೇ ಆಫ್ ನಿಂದ ಹೊರ ಹೋಗುವಂತಹ ಪರಿಸ್ಥಿತಿಯನ್ನು ಎದುರಿಸುತ್ತಿದೆ.

deepak chahar bhuvi | ಒಂದು ಕಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಶಾಕ್ ನೀಡಿದ ದೀಪಕ್ ಚಾಹರ್, ಆದರೆ ಅದೇ ಸಮಯದಲ್ಲಿ ಭಾರತ ತಂಡಕ್ಕೆ ಕೂಡ ಕಹಿ ಸುದ್ದಿ, ಯಾಕೆ ಗೊತ್ತೇ?
ಒಂದು ಕಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಶಾಕ್ ನೀಡಿದ ದೀಪಕ್ ಚಾಹರ್, ಆದರೆ ಅದೇ ಸಮಯದಲ್ಲಿ ಭಾರತ ತಂಡಕ್ಕೆ ಕೂಡ ಕಹಿ ಸುದ್ದಿ, ಯಾಕೆ ಗೊತ್ತೇ? 2

ಆದರೆ ದೀಪಕ್ ಚಹಾರ್ ಅವರ ಹೊಸ ಆರೋಗ್ಯ ಸಮಸ್ಯೆ ಕೇವಲ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಾತ್ರವಲ್ಲದೆ ಭಾರತೀಯ ಕ್ರಿಕೆಟ್ ತಂಡಕ್ಕೆ ಕೂಡ ಸಮಸ್ಯೆಯಾಗಿ ಪರಿಣಮಿಸಿದೆ. ಹೌದು ಕೇವಲ ಬೌಲಿಂಗ್ನಲ್ಲಿ ಮಾತ್ರವಲ್ಲದೆ ಟೈಲ್ ಎಂಡ್ ಬ್ಯಾಟ್ಸ್ಮನ್ ಆಗಿ ಕೂಡ ದೊಡ್ಡ ಹೊಡೆತಗಳನ್ನು ಬಾರಿ ಸುವಂತಹ ಕ್ಷಮತೆಯನ್ನು ದೀಪಕ್ ಚಹಾರ್ ಅವರು ಹೊಂದಿದ್ದರು. ಹೀಗಾಗಿ ಭಾರತೀಯ ಕ್ರಿಕೆಟ್ ತಂಡದ ಭರವಸೆಯ ಆಟಗಾರ ರಲ್ಲಿ ಅವರು ಕೂಡ ಒಬ್ಬರಾಗಿದ್ದರು. ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ t20 ವರ್ಲ್ಡ್ ಕಪ್ ನಲ್ಲಿ ದೀಪಕ್ ಚಹಾರ್ ಅವರು ಭಾಗವಹಿಸುವುದು 90% ಅನುಮಾನವೇ ಸರಿ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. ಹೌದು ದೀಪಕ್ ಚಹಾರ್ ಅವರಿಗೆ ಈಗಾಗಲೇ ನಾಲ್ಕು ತಿಂಗಳ ವಿಶ್ರಾಂತಿಯನ್ನು ಪಡೆಯಲೇಬೇಕು ಎನ್ನುವುದಾಗಿ ವೈದ್ಯರು ಸೂಚಿಸಿದ್ದು ಈ ಹಿನ್ನೆಲೆಯಲ್ಲಿ ದೀಪಕ್ ಚಹರ್ ಖಂಡಿತವಾಗಿ ವಿಶ್ವಕಪ್ಗೆ ಆಯ್ಕೆಯಾಗುವುದು ಅಥವಾ ಆಡುವುದು ಅನುಮಾನವೇ ಸರಿ ಎಂಬುದಾಗಿ ಊಹಿಸಲಾಗಿದೆ. ಮುಂದಿನ ದಿನಗಳಲ್ಲಿ ಇದರ ಕುರಿತಂತೆ ಅಧಿಕೃತ ಸ್ಪಷ್ಟೀಕರಣವನ್ನು ಪಡೆದುಕೊಳ್ಳಬಹುದಾಗಿದೆ.

Comments are closed.