ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ರವೀನಾ ಟಂಡನ್ ರವರ ಖಡಕ್ ರಮಿಕಾ ಸೆನ್ ಪಾತ್ರ, ಸಮಾಜಕ್ಕೆ ಒಳ್ಳೆಯದು ಮಾಡುವವರೇ?? ಅಥವಾ ವಿಲ್ಲನ್ ಹೇ??

ನಮಸ್ಕಾರ ಸ್ನೇಹಿತರೇ ನಾಲ್ಕು ವರ್ಷಗಳ ಕಠಿಣ ಪರಿಶ್ರಮದ ನಂತರ ಪ್ರಶಾಂತ್ ನಿರ್ದೇಶನದ ಹಾಗೂ ರಾಕಿಂಗ್ ಸ್ಟಾರ್ ಯಶ್ ನಾಯಕ ನಟನಾಗಿ ನಟಿಸಿರುವ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಕೆಜಿಎಫ್ ಚಾಪ್ಟರ್ 2 ಚಿತ್ರ ಜಗತ್ತಿನಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಂಡಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರ ಕೆಜಿಎಫ್ ಚಾಪ್ಟರ್ 1 ಚಿತ್ರಕ್ಕೆ ಹೋಲಿಸಿದರೆ ಭೂಮಿ ಆಕಾಶದ ನಂತರದ ವ್ಯತ್ಯಾಸದ ಸಿನಿಮಾ ಅನುಭವವನ್ನು ನೀಡಲಿದೆ.

ಇನ್ನು ಕೆಜಿಎಫ್ ಚಾಪ್ಟರ್ ಒಂದು ಚಿತ್ರಕ್ಕೆ ಹೋಲಿಸಿದರೆ ಕೆಜಿಎಫ್ ಚಾಪ್ಟರ್ 2 ಚಿತ್ರ ದೊಡ್ಡ ಮಟ್ಟದ ತಾರಾಬಳಗವನ್ನು ಹೊಂದಿದೆ ಎನ್ನುವುದು ಕೂಡ ತಿಳಿಯಲಿದೆ. ಅದಕ್ಕೂ ಮಿಗಿಲಾಗಿ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಪ್ರಶಾಂತ್ ನೀಲ್ ರವರು ರವೀನ ತಂಡನ್ ಹಾಗೂ ಸಂಜಯ್ ದತ್ತ್ ರವರನ್ನು ಸುಖಾಸುಮ್ಮನೆ ಆಯ್ಕೆ ಮಾಡಿಲ್ಲ ಎನ್ನುವುದಾಗಿ ಕೂಡ ತಿಳಿದುಬರುತ್ತದೆ. ಅಧೀರನ ಪಾತ್ರದಲ್ಲಿ ಸಂಜಯ್ ದತ್ ಹಾಗೂ ರಮಿಕ ಸೆನ್ ಪಾತ್ರದಲ್ಲಿ ರವೀನ ತಂಡನ್ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ರಮಿಕಾ ಸೆನ್ ಪಾತ್ರವನ್ನು ಚರ್ಚಿಸುವುದಾದರೆ ಇದನ್ನು ನಮ್ಮ ದೇಶದ ಮಾಜಿ ಪ್ರಧಾನಮಂತ್ರಿ ಆಗಿರುವ ಇಂದಿರಾಗಾಂಧಿ ರವರಿಗೆ ಅಭಿಮಾನಿಗಳು ಹೋಲಿಸುತ್ತಿದ್ದಾರೆ.

kgf 2 1 | ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ರವೀನಾ ಟಂಡನ್ ರವರ ಖಡಕ್ ರಮಿಕಾ ಸೆನ್ ಪಾತ್ರ, ಸಮಾಜಕ್ಕೆ ಒಳ್ಳೆಯದು ಮಾಡುವವರೇ?? ಅಥವಾ ವಿಲ್ಲನ್ ಹೇ??
ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ರವೀನಾ ಟಂಡನ್ ರವರ ಖಡಕ್ ರಮಿಕಾ ಸೆನ್ ಪಾತ್ರ, ಸಮಾಜಕ್ಕೆ ಒಳ್ಳೆಯದು ಮಾಡುವವರೇ?? ಅಥವಾ ವಿಲ್ಲನ್ ಹೇ?? 2

ರವೀನ ತಂಡನ್ ರವರು ರಮಿಕ ಸೆನ್ ಪಾತ್ರದ ಮೂಲಕ ತೋರಿಸುತ್ತಿರುವಂತಹ ಆಟಿಟ್ಯೂಡ್ ಹಾಗೂ ಸ್ಟೈಲ್ ಅನ್ನು ನೋಡಿದರೆ ಖಂಡಿತವಾಗಿ ಪ್ರತಿಯೊಬ್ಬ ಸಿನಿಮಾ ಪ್ರೇಕ್ಷಕರು ಕೂಡ ಇದು ಇಂದಿರಾಗಾಂಧಿಯವರ ಪಾತ್ರದ ರೆಫರೆನ್ಸ್ ಎನ್ನುವುದಾಗಿ ಹೇಳುತ್ತಾರೆ. ಮಹಿಳಾ ಪ್ರಧಾನಮಂತ್ರಿಯ ಪಾತ್ರದಲ್ಲಿ ರವೀನ ತಂಡನ್ ಪರಿಪಕ್ವವಾಗಿ ನಟಿಸಿದ್ದಾರೆ. ಇವರು ಚಿತ್ರದಲ್ಲಿ ವಿಲನ್ನಾ ಎಂಬುದಾಗಿ ಹಲವಾರು ಜನರು ಕೇಳುತ್ತಿದ್ದಾರೆ ಹಾಗೂ ಕುತೂಹಲ ಕೂಡ ಅವರ ಮನಸ್ಸಿನಲ್ಲಿದೆ.

ಅದಕ್ಕೆ ನೇರವಾದ ಉತ್ತರವನ್ನು ಹೇಳುವ ಪ್ರಯತ್ನವನ್ನು ನಾವು ಮಾಡುವುದಿಲ್ಲ ಯಾಕೆಂದರೆ ನೀವು ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಹೋಗಿ ನೋಡಬೇಕು. ಆದರೆ ಸಿನಿಮಾದಲ್ಲಿ ಏನಾದರೂ ಬದಲಾವಣೆ ಮಾಡಬೇಕು ಎನ್ನುವ ಕಾರಣಕ್ಕಾಗಿ ಜನರ ಬೆಂಬಲದಿಂದ ಪ್ರಧಾನಮಂತ್ರಿ ಆಗುತ್ತಾರೆ. ಹಾಗೂ ರಾಕಿ ಭಾಯ್ ಗೆ ದೊಡ್ಡ ಮಟ್ಟದ ತಡೆಗೋಡೆಯಾಗಿ ನಂತರ ಅವರಿಗೆ ಡೆ’ತ್ ವಾರೆಂಟ್ ನೀಡುತ್ತಾರೆ. ಇದರ ಮೂಲಕ ರಮಿಕ ಸೆನ್ ಪಾತ್ರ ವಿಲನ್ನಾ ಅಥವಾ ಏನು ಎನ್ನುವುದನ್ನು ನೀವು ಲೆಕ್ಕಾಚಾರ ಹಾಕಬಹುದಾಗಿದೆ.

Comments are closed.