ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಟಿಕೆಟ್ ಬುಕ್ ಮಾಡಿದ ಅಭಿಮಾನಿಗಳು; ಸಿನಿಮಾ ಥಿಯೇಟರ್ ಗೆ ಹೋದಾಗ ಯಾವ ಚಿತ್ರ ಪ್ರದರ್ಶನ ಮಾಡಿದ್ದಾರೆ ಗೊತ್ತೆ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕೇವಲ ನಮ್ಮ ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತ ಮಧ್ಯರಾತ್ರಿ 12 ಗಂಟೆಯಿಂದಲೇ ಕೆಜಿಎಫ್ ಚಾಪ್ಟರ್ 2 ಚಿತ್ರದ ಪ್ರದರ್ಶನಗಳು ಆರಂಭವಾಗಿದೆ. ಮುಂಬೈನಲ್ಲಿ ಕೂಡ ರಾಕಿ ಭಾಯ್ ನ 100 ಅಡಿ ಕಟೌಟ್ ತಲೆಯೆತ್ತಿ ನಿಂತಿದೆ ಎಂದರೆ ಕನ್ನಡ ಚಿತ್ರರಂಗದ ಹೆಮ್ಮೆ ಯಾವ ಮಟ್ಟಿಗೆ ಸದ್ದು ಮಾಡುತ್ತಿದೆ ಎಂಬುದನ್ನು ನೀವೇ ಅಂದಾಜು ಹಾಕಬಹುದಾಗಿದೆ. ಇನ್ನು ಬೆಂಗಳೂರಿನಲ್ಲಿ ಕೂಡ ಸಾವಿರಾರು ಪ್ರದರ್ಶನಗಳು ಮೊದಲ ದಿನದಿಂದಲೇ ಆರಂಭವಾಗಿದ್ದವು.

ದಾಖಲೆಯ ಮಟ್ಟದಲ್ಲಿ ಕಿಂಗ್ ಕೂಡ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಕೂಡ ಆಗಿದ್ದವು. ಬಹುತೇಕ ದೇಶದಾದ್ಯಂತ ಕೇವಲ ಅಡ್ವಾನ್ಸ್ ಬುಕಿಂಗ್ ನಿಂದಲೇ ದೊಡ್ಡ ದೊಡ್ಡ ಸ್ಟಾರ್ ಸಿನಿಮಾಗಳ ಲೈಫ್ ಟೈಮ್ ಕಲೆಕ್ಷನ್ ಅನ್ನು ಕೆಜಿಎಫ್ ಚಾಪ್ಟರ್ 2 ಚಿತ್ರ ಪೂರೈಸಿದೆ ಎಂದರೆ ತಪ್ಪಾಗಲಾರದು. ಕೆಜಿಎಫ್ ಚಾಪ್ಟರ್ 2 ಚಿತ್ರ ಹುಟ್ಟುಹಾಕಿರುವ ಜನಪ್ರಿಯತೆ ಹಾಗೂ ಮಾರುಕಟ್ಟೆಯನ್ನು ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲೇ ಇನ್ನೊಂದು ಸಿನಿಮಾ ಹುಟ್ಟುಹಾಕುತ್ತದೆ ಎಂದರೆ ಅದು ಖಂಡಿತವಾಗಿ ಭ್ರಮೆ ಎಂದರೂ ಕೂಡ ತಪ್ಪಾಗಲಾರದು. ಈಗಾಗಲೇ ದಂಗಲ್ ಬಾಹುಬಲಿ2 ಹಾಗೂ ಆರ್ ಆರ್ ಆರ್ ಸಿನಿಮಾಗಳ ದಾಖಲೆಯನ್ನು ಗಾಳಿಗೆ ತೂರಿರುವ ಕೆಜಿಎಫ್ ಚಾಪ್ಟರ್ 2 ಚಿತ್ರ ಮೊದಲ ದಿನವೇ ಇಡೀ ಭಾರತದಲ್ಲಿ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾದ ಪಟ್ಟಿಗಳಲ್ಲಿ ನಂಬರ್ ಒನ್ ಸ್ಥಾನವನ್ನು ದೊಡ್ಡ ಮಾರ್ಜಿನ ನಲ್ಲಿ ಪಡೆಯುವ ಸಾಧ್ಯತೆ ದಟ್ಟವಾಗಿ ಕಂಡು ಬರುತ್ತಿದೆ.

kgf 2 | ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಟಿಕೆಟ್ ಬುಕ್ ಮಾಡಿದ ಅಭಿಮಾನಿಗಳು; ಸಿನಿಮಾ ಥಿಯೇಟರ್ ಗೆ ಹೋದಾಗ ಯಾವ ಚಿತ್ರ ಪ್ರದರ್ಶನ ಮಾಡಿದ್ದಾರೆ ಗೊತ್ತೆ??
ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಟಿಕೆಟ್ ಬುಕ್ ಮಾಡಿದ ಅಭಿಮಾನಿಗಳು; ಸಿನಿಮಾ ಥಿಯೇಟರ್ ಗೆ ಹೋದಾಗ ಯಾವ ಚಿತ್ರ ಪ್ರದರ್ಶನ ಮಾಡಿದ್ದಾರೆ ಗೊತ್ತೆ?? 2

ಇನ್ನು ಬೆಂಗಳೂರಿನ ಸಿನಿಮಾ ಥಿಯೇಟರ್ ಒಂದು ಮಾಡಿರುವಂತಹ ಅವಾಂತರ ಈಗ ಬೆಳಕಿಗೆ ಬಂದಿದೆ. ಹೌದು ಮಾಗಡಿ ರೋಡ್ ನಲ್ಲಿರುವ ವೀರೇಶ್ ಚಿತ್ರಮಂದಿರದಲ್ಲಿ ಎರಡು ಪರದೆಗಳಿವೆ. ಟಿಕೆಟ್ ಹೌಸ್ಫುಲ್ ಆಗಿ ಎರಡನೇ ಪರದೆಯ ಮೇಲೆ ಬೆಳಗಿನ ಜಾವ 5ಕ್ಕೆ ಚಿತ್ರ ಪ್ರದರ್ಶನ ಕೂಡ ಆರಂಭವಾಗಿತ್ತು. ಆದರೆ ಚಿತ್ರದ ಪ್ರೊಜೆಕ್ಟರ್ ಟೆಕ್ನಿಷಿಯನ್ ಮಾಡಿದ ಎಡವಟ್ಟಿನಿಂದಾಗಿ ಮೊದಲ 20 ನಿಮಿಷಗಳ ಕಾಲ ಕೆಜಿಎಫ್ ಚಾಪ್ಟರ್ ಒಂದು ಚಿತ್ರವನ್ನು ಪ್ರದರ್ಶನವನ್ನು ಮಾಡಿದ್ದರು. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಥಿಯೇಟರ್ ಗೆ ಸಂಬಂಧಪಟ್ಟವರೊಂದಿಗೆ ಗಲಾಟೆಗೆ ಇಳಿದಿದ್ದರು. ನಂತರ ತನ್ನ ತಪ್ಪನ್ನು ಅರಿತಂತಹ ಪ್ರೊಜೆಕ್ಷನಿಷ್ಟ್ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಆರಂಭಿಸುತ್ತಾರೆ. ಪ್ರಪಂಚದಾದ್ಯಂತ ತನ್ನ ವಿಶ್ವರೂಪವನ್ನು ಪ್ರದರ್ಶಿಸುತ್ತಿರುವ ಕೆಜಿಎಫ್ ಚಾಪ್ಟರ್ 2 ಚಿತ್ರ ನಿರೀಕ್ಷೆಗೆ ತಕ್ಕಂತೆ ತನ್ನ ಮಾತನ್ನು ಉಳಿಸಿಕೊಂಡಿದೆ ಎಂಬುದಾಗಿ ಎಲ್ಲರೂ ಕೂಡ ಹೇಳುತ್ತಿದ್ದಾರೆ.

Comments are closed.