ಪ್ರೀತಿಸಿ ಮದುವೆಯಾಗಿರುವ ರಣಬೀರ್, ಆಲಿಯಾ ಭಟ್ ರವರ ದಾಂಪತ್ಯ ಜೀವನ ಹೇಗಿರಲಿದೆ ಎಂದು ಭವಿಷ್ಯ ನುಡಿದ ಜ್ಯೋತಿಷಿ. ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಬಾಲಿವುಡ್ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ಸತತವಾಗಿ ಮದುವೆಯಾಗುತ್ತಿದ್ದಾರೆ. ಕಾಕತಾಳೀಯ ಎನ್ನುವಂತೆ ಒಬ್ಬರಾದ ಮೇಲೆ ಒಬ್ಬರು ಬಾಲಿವುಡ್ ಸೆಲೆಬ್ರಿಟಿಗಳು ಮದುವೆಯಾಗುತ್ತಿರುವುದು ಮುಂದಿನ ಮದುವೆ ಯಾರದ್ದು ಎನ್ನುವಂತೆ ಎಲ್ಲರೂ ಕಾಯುವಂತಾಗಿದೆ. ಈ ವರ್ಷದ ಆರಂಭದಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಇಬ್ಬರು ಕೂಡ ರಾಜಸ್ಥಾನದಲ್ಲಿ ಸದ್ದಿಲ್ಲದೆ ಮದುವೆಯಾಗಿದ್ದರು.

ಏಪ್ರಿಲ್ 14ರಂದು ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆಯಾದ ದಿನದಂದು ಐದು ವರ್ಷಗಳಿಂದ ಜೊತೆಯಾಗಿ ಸುತ್ತಾಡಿ ಕೊಂಡಿದ್ದ ಪ್ರೇಮ ಪಕ್ಷಗಳಾಗಿರುವ ರಣಬೀರ್ ಕಪೂರ್ ಹಾಗೂ ಅಲಿಯ ಭಟ್ ಅವರು ಕೂಡ ನಿವಾಸದಲ್ಲಿಯೇ ಸರಳವಾಗಿ ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಲವಾರು ವರ್ಷಗಳಿಂದ ಇವರಿಬ್ಬರು ಮದುವೆಯಾಗುತ್ತಾರೆ ಎಂದು ಕಾಯ್ದುಕೊಂಡಿದ್ದ ಅಭಿಮಾನಿಗಳಿಗೆ ಕೊನೆಗೂ ಕೂಡ ಇವರಿಬ್ಬರು ಮದುವೆಯಾಗಿರುವುದು ಸಾಕಷ್ಟು ಸಂತೋಷವನ್ನು ನೀಡಿದೆ.

alia bhat ranbir 8 | ಪ್ರೀತಿಸಿ ಮದುವೆಯಾಗಿರುವ ರಣಬೀರ್, ಆಲಿಯಾ ಭಟ್ ರವರ ದಾಂಪತ್ಯ ಜೀವನ ಹೇಗಿರಲಿದೆ ಎಂದು ಭವಿಷ್ಯ ನುಡಿದ ಜ್ಯೋತಿಷಿ. ಹೇಳಿದ್ದೇನು ಗೊತ್ತೇ??
ಪ್ರೀತಿಸಿ ಮದುವೆಯಾಗಿರುವ ರಣಬೀರ್, ಆಲಿಯಾ ಭಟ್ ರವರ ದಾಂಪತ್ಯ ಜೀವನ ಹೇಗಿರಲಿದೆ ಎಂದು ಭವಿಷ್ಯ ನುಡಿದ ಜ್ಯೋತಿಷಿ. ಹೇಳಿದ್ದೇನು ಗೊತ್ತೇ?? 3

ವಿಕ್ಕಿ ಹಾಗೂ ಕತ್ರಿನಾ ಜೋಡಿಯಂತೆ ಇವರಿಬ್ಬರೂ ಕೂಡ ಮದುವೆಯನ್ನು ಕೊನೆಯ ಕ್ಷಣದವರೆಗೂ ಕೂಡ ರಿವೀಲ್ ಮಾಡಿರಲಿಲ್ಲ. ಮದುವೆಗೆ ಯಾವುದೇ ಸೆಲೆಬ್ರಿಟಿಗಳು ಆಗಮನ ಕೂಡ ಇರಲಿಲ್ಲ ಎಂಬುದಾಗಿ ತಿಳಿದುಬಂದಿದೆ. ಕೇವಲ ಕುಟುಂಬದ ಆಪ್ತರೊಂದಿಗೆ ಹಾಗೂ ಕುಟುಂಬಸ್ಥರ ಎದುರುಗಡೆ ಮದುವೆಯನ್ನು ಮಾಡಿಕೊಂಡಿದ್ದಾರೆ ಎಂಬುದಾಗಿ ಆಪ್ತ ಮೂಲಗಳಿಂದ ತಿಳಿದುಬಂದಿದೆ. ಇನ್ನು ಮದುವೆಗಾಗಿ ಬರೋಬ್ಬರಿ 80 ರಿಂದ 100 ಕೋಟಿ ರೂಪಾಯಿ ಖರ್ಚಾಗಿದೆ ಎಂಬುದಾಗಿ ಕೂಡ ತಿಳಿದುಬಂದಿದೆ.

ಇನ್ನು ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ರವರ ಮದುವೆ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಗುಲ್ಲೆಬ್ಬಿಸಿದೆ. ಎಲ್ಲರೂ ಕೂಡ ಈ ಜೋಡಿಯನ್ನು ಫೋಟೋ ಹಾಗೂ ವಿಡಿಯೋಗಳಲ್ಲಿ ಮೆಚ್ಚಿಕೊಳ್ಳುತ್ತಿದ್ದಾರೆ. ಮೇಡ್ ಫಾರ್ ಈಚ್ ಅದರ್ ಎನ್ನುವುದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ರವರ ಕುರಿತಂತೆ ಖ್ಯಾತ ಜ್ಯೋತಿಷಿಯೊಬ್ಬರು ಭವಿಷ್ಯವನ್ನು ನುಡಿದಿದ್ದಾರೆ. ಹಾಗಿದ್ದರೆ ಆ ಜ್ಯೋತಿಷಿ ಯಾರು ಹಾಗೂ ನುಡಿದಿರುವ ಭವಿಷ್ಯ ಏನು ಎನ್ನುವುದನ್ನು ತಿಳಿಯೋಣ ಬನ್ನಿ.

ಖ್ಯಾತ ಜ್ಯೋತಿಷಿ ಆಚಾರ್ಯ ವಿನೋದ್ ಕುಮಾರ್ ಅವರು ಹೇಳುವಂತೆ ಆಲಿಯಾ ಭಟ್ ರವರು ರಣಬೀರ್ ಕಪೂರ್ ಅವರನ್ನು ಮದುವೆಯಾಗಿರುವುದು ಇಬ್ಬರಿಗೂ ಕೂಡ ಶುಭಕರವಾಗಿದೆ ಎಂಬುದಾಗಿ ಹೇಳಿದ್ದಾರೆ. ಮದುವೆ ಆದ ಮೇಲೆ ಕೂಡ ಇವರಿಬ್ಬರ ನಡುವೆ ಇರುವಂತಹ ಸ್ನೇಹ ಹಾಗೂ ಪ್ರೇಮಸಂಬಂಧ ತಾಜಾ ಆಗಿರಲಿದೆ. ಮದುವೆಯಾದ ಮೇಲೂ ಕೂಡ ಆಲಿಯಾ ಭಟ್ ಅವರಿಗೆ ದೊಡ್ಡ ದೊಡ್ಡ ಅವಕಾಶಗಳು ಹುಡುಕಿಕೊಂಡು ಬರಲಿವೆ. ರಣಬೀರ್ ಕಪೂರ್ ಅವರ ಜೀವನದಲ್ಲಿ ಆಲಿಯಾ ಭಟ್ ರವರು ಶಾಂತಿ ಸೌಹಾರ್ದತೆಯನ್ನು ತರಲಿದ್ದಾರೆ ಎಂಬುದಾಗಿ ಭವಿಷ್ಯನುಡಿದಿದ್ದಾರೆ.

alia bhat ranbir 10 | ಪ್ರೀತಿಸಿ ಮದುವೆಯಾಗಿರುವ ರಣಬೀರ್, ಆಲಿಯಾ ಭಟ್ ರವರ ದಾಂಪತ್ಯ ಜೀವನ ಹೇಗಿರಲಿದೆ ಎಂದು ಭವಿಷ್ಯ ನುಡಿದ ಜ್ಯೋತಿಷಿ. ಹೇಳಿದ್ದೇನು ಗೊತ್ತೇ??
ಪ್ರೀತಿಸಿ ಮದುವೆಯಾಗಿರುವ ರಣಬೀರ್, ಆಲಿಯಾ ಭಟ್ ರವರ ದಾಂಪತ್ಯ ಜೀವನ ಹೇಗಿರಲಿದೆ ಎಂದು ಭವಿಷ್ಯ ನುಡಿದ ಜ್ಯೋತಿಷಿ. ಹೇಳಿದ್ದೇನು ಗೊತ್ತೇ?? 4

ಇನ್ನು ಇವರಿಬ್ಬರು ಪರಸ್ಪರ ಎಷ್ಟರಮಟ್ಟಿಗೆ ಹೊಂದಿಕೊಂಡು ಹೋಗುತ್ತಾರೆಯೋ ಅಷ್ಟು ಇವರಿಬ್ಬರ ದಾಂಪತ್ಯ ಜೀವನ ದೀರ್ಘವಾಗಿ ಉಳಿಯಲಿದೆ ಎಂಬುದಾಗಿ ಹೇಳಿದ್ದಾರೆ. ಮದುವೆಯಾದ ನಂತರ ಇವರಿಬ್ಬರೂ ಸರ್ವತೋಮುಖ ದೃಷ್ಟಿಯಲ್ಲಿ ಸಮಾನವಾದ ಆಶೀರ್ವಾದವನ್ನು ಹೊಂದಿರುತ್ತಾರೆ ಎಂಬುದಾಗಿ ಹೇಳಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ತಲೆ ತರುವಂತಹ ಚಿಕ್ಕಪುಟ್ಟ ಸಮಸ್ಯೆಗಳಿಗಾಗಿ ಇವರು ಗಣೇಶ ಹಾಗೂ ಶನಿದೇವರಿಗೆ ಪೂಜೆಯನ್ನು ಸಲ್ಲಿಸಿದರು ಒಳ್ಳೆಯದು ಎಂಬುದಾಗಿ ಸಲಹೆಯನ್ನು ನೀಡಿದ್ದಾರೆ. ಆಚಾರ್ಯ ವಿನೋದ್ ಕುಮಾರ್ ರವರು ನುಡಿದಿರುವ ಈ ಭವಿಷ್ಯದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ. ಮಾತ್ರವಲ್ಲದೆ ನೀವು ಕೂಡ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಅವರ ಅಭಿಮಾನಿಗಳಾಗಿದ್ದರೆ ಲೇಖನಿಯನ್ನು ಶೇರ್ ಮಾಡುವುದನ್ನು ಕೂಡ ಮರೆಯಬೇಡಿ.

Comments are closed.