ಮದುವೆಯಾಗಿ 14 ವರ್ಷದ ಬಳಿಕ ತಾಯಿಯಾದ ಮಹಿಳೆ, ಆದರೆ ಡೆಲಿವರಿ ದಿನ ಏನಾಯಿತು ಗೊತ್ತೇ? ಸಾವಿರಾರು ಹೆರಿಗೆ ಮಾಡಿಸಿದ್ದ ಡಾಕ್ಟರ್ ಪರಿಸ್ಥಿತಿ ಏನಾಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಪ್ರತಿಯೊಬ್ಬ ಹೆಣ್ಣುಮಗಳಿಗೆ ಜೀವನದಲ್ಲಿ ಮದುವೆಯಾಗುವ ಹಂಬಲ ಎಷ್ಟು ಮಟ್ಟಿಗೆ ಇರುತ್ತದೆಯೋ ಅದಕ್ಕಿಂತ ದುಪ್ಪಟ್ಟು ಹಂಬಲ ತಾಯಿಯಾಗುವ ಕುರಿತಂತೆ ಆಕೆ ಕನಸನ್ನು ಕಂಡಿರುತ್ತಾರೆ. ಪ್ರತಿಯೊಬ್ಬ ಹೆಣ್ಣುಮಗಳ ಜೀವನಪೂರ್ತಿ ಆಗುವುದು ಆಕೆ ತಾಯಿಯಾದ ಮೇಲೆ. ಹೀಗಾಗಿ ಪ್ರತಿಯೊಬ್ಬ ಹೆಣ್ಣುಮಗಳು ಕೂಡ ಜೀವನದಲ್ಲಿ ತಾನು ತಾಯಿಯಾಗುವ ಮಗುವಿಗೆ ಲಾಲನೆ ಪಾಲನೆ ಮಾಡುವ ಕನಸನ್ನು ಕಾಣುವುದರಲ್ಲಿಯೇ ರೋಮಾಂಚಿತಳಾಗುತ್ತಾಳೆ.

ಒಂದು ವೇಳೆ ಆಕೆ ಗರ್ಭಿಣಿಯಾದರೆ ಆ ಮಗು ಭೂಮಿಗೆ ಬರುವತನಕ ಅವಳು ಸಾಮಾನ್ಯವಾಗಿ ಜಾಗರೂಕತೆಯಿಂದ ಇರುವುದಕ್ಕಿಂತ ಹೆಚ್ಚಾಗಿ ಜಾಗರೂಕತೆಯಿಂದ ಇರಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆ ಸಂದರ್ಭದಲ್ಲಿ ಆಕೆ ಪಡುವಂತಹ ಕಷ್ಟ ಕೇವಲ ಅವಳಿಗೆ ಮಾತ್ರ ಗೊತ್ತಿರುತ್ತದೆ. ಇಂತಹದೇ ಪರಿಸ್ಥಿತಿಯನ್ನು ಹೊಂದಿದಂತಹ ಒಬ್ಬ ಮಹಿಳೆಯ ಕಥೆಯನ್ನು ಡಾಕ್ಟರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಹಾಗಿದ್ದರೆ ನಿಜವಾಗಲೂ ಈ ಕಥೆ ಏನು ಹಾಗೂ ಇದರಲ್ಲಿ ಯಾಕೆ ಎಲ್ಲರೂ ಕಣ್ಣೀರು ಹರಿಸುವಂತಹ ಕಥೆ ಇದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

wom herige | ಮದುವೆಯಾಗಿ 14 ವರ್ಷದ ಬಳಿಕ ತಾಯಿಯಾದ ಮಹಿಳೆ, ಆದರೆ ಡೆಲಿವರಿ ದಿನ ಏನಾಯಿತು ಗೊತ್ತೇ? ಸಾವಿರಾರು ಹೆರಿಗೆ ಮಾಡಿಸಿದ್ದ ಡಾಕ್ಟರ್ ಪರಿಸ್ಥಿತಿ ಏನಾಗಿದೆ ಗೊತ್ತೇ??
ಮದುವೆಯಾಗಿ 14 ವರ್ಷದ ಬಳಿಕ ತಾಯಿಯಾದ ಮಹಿಳೆ, ಆದರೆ ಡೆಲಿವರಿ ದಿನ ಏನಾಯಿತು ಗೊತ್ತೇ? ಸಾವಿರಾರು ಹೆರಿಗೆ ಮಾಡಿಸಿದ್ದ ಡಾಕ್ಟರ್ ಪರಿಸ್ಥಿತಿ ಏನಾಗಿದೆ ಗೊತ್ತೇ?? 3

ಬನ್ನಿ ಸ್ನೇಹಿತರೆ ನಿಜವಾಗಲು ಈ ಘಟನೆ ನಡೆದಿರುವುದು ಐರ್ಲೆಂಡ್ನಲ್ಲಿ. ಅಲ್ಲಿನ ವೈದ್ಯರೊಬ್ಬರು ನಡೆದಂತಹ ಘಟನೆಯ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ನಾನು ಹಲವಾರು ಆಪರೇಷನ್ ಗಳನ್ನು ಮಾಡಿದ್ದೇನೆ. ಹಲವಾರು ಸಂದಿಗ್ಧ ಪರಿಸ್ಥಿತಿಗಳನ್ನು ಎದುರಿಸಿದ್ದೇನೆ. ಅಂದಿನ ದಿನ ನಾನು ಆಪರೇಷನ್ ಥಿಯೇಟರ್ ನಲ್ಲಿ ದೇವರಲ್ಲಿ ವಿಧವಿಧವಾಗಿ ಪ್ರಾರ್ಥಿಸಿದೆ ಆದರೆ ಆ ದೇವರು ನನ್ನ ಪ್ರಾರ್ಥನೆಗೆ ಫಲ ನೀಡಲಿಲ್ಲ ಎಂಬುದಾಗಿ ಬೇಸರದಿಂದ ಬರೆದುಕೊಂಡಿದ್ದಾರೆ.

ಯಾರೋ ಸಾಮಾನ್ಯ ಮಹಿಳೆ ಹಾಗಿದ್ದರೆ ನಾನು ಕೂಡ ಒಂದು ದಿನ ಬೇಸರ ಮಾಡಿಕೊಂಡು ಮರುದಿನ ಅದನ್ನು ಮರೆತು ಬಿಡುತ್ತಿದ್ದೆ ಆದರೆ ಇಲ್ಲಿ ನಡೆದಿರುವುದು ಬೇರೆ. ಅದೇನೆಂದರೆ ಆ ಮಹಿಳೆಗೆ ಮದುವೆಯಾಗಿ ಹದಿನಾಲ್ಕು ವರ್ಷಗಳು ಕಳೆದಿದ್ದರೂ ಕೂಡ ಸಂತಾನಪ್ರಾಪ್ತಿ ಆಗಿರಲಿಲ್ಲ. ಕೊನೆಗೂ ಕೃತಕ ಗರ್ಭಧಾರಣೆ ಮೂಲಕ ಮಗುವನ್ನು ಹೊಂದುವ ಖುಷಿ ಇಡಿ ಅವರ ಕುಟುಂಬದಲ್ಲಿ ಹರಡಿತ್ತು. ಅವರ ಹೊಟ್ಟೆಯಲ್ಲಿ ಮಗು ಬೆಳೆಯುತ್ತಿದ್ದಂತೆ ಜೊತೆಗೆ ಗಡ್ಡೆಯು ಕೂಡ ಬೆಳೆದಿತ್ತು.

ಹೆರಿಗೆ ನೋ’ವು ಎಂದರೆ ನಿಮಗೆಲ್ಲರಿಗೂ ತಿಳಿದೇ ಇರುತ್ತದೆ ಅದನ್ನು ಯಾರಿಂದಲೂ ಕೂಡ ತಡೆಯಲು ಸಾಧ್ಯವಿಲ್ಲ ಕೇವಲ ತಾಯಿಗೆ ಮಾತ್ರ ತಡೆಯಲು ಸಾಧ್ಯ. ಅಂತೂ ಇಂತೂ ಆಕೆಯ ಹೆರಿಗೆ ದಿನಾಂಕ ಬಂದೇಬಿಟ್ಟಿತು. ಸಾಮಾನ್ಯವಾಗಿ ಹೆರಿಗೆ ಎನ್ನುವುದು ಕೆಲವು ನಿಮಿಷಗಳಲ್ಲಿ ನಡೆದು ಹೋಗಿ ಬಿಡುತ್ತದೆ. ಆದರೆ ಆ ಮಹಾತಾಯಿಗೆ 7 ಗಂಟೆಗಳ ಕಾಲ ಹೆರಿಗೆ ಆಪರೇಷನ್ ಅನ್ನು ಮಾಡಲಾಯಿತು. ಅಷ್ಟೊಂದು ನೋ’ವುಗಳನ್ನು ಸಹಿಸಿದ ಮೇಲೆ ಮಗುವಿನ ಜನನ ನಡೆಯಿತು. ಅಷ್ಟೊಂದು ಸಂಕಟ ಪಟ್ಟಮೇಲೆ ಗರ್ಭದಿಂದ ಹೊರ ಬಂದಂತಹ ಮಗುವಿನ ಮುಖ ನೋಡಿ ಆಕೆ ಮುಗುಳುನಗೆಯನ್ನು ಚೆಲ್ಲಿದಳು.

ಆದರೆ ವಿಧಿ ಅನ್ನುವುದು ಇದೆಯಲ್ಲ ಸ್ನೇಹಿತರೆ ಅದು ಯಾವಾಗ ಯಾವ ರೀತಿ ತನ್ನ ಕಾರ್ಯವನ್ನು ಸಾಧಿಸುತ್ತದೆ ಎಂಬುದನ್ನು ಹೇಳಲಿಕ್ಕೆ ಸಾಧ್ಯವಿಲ್ಲ. ನಾನು ಹಲವಾರು ತಾಯಂದಿರು ಪ್ರಾಣ ಚೆಲ್ಲುವುದನ್ನು ನೋಡಿದ್ದೇನೆ ಆದರೆ ಈಕೆ 14 ವರ್ಷಗಳಿಂದ ಮಕ್ಕಳಿಲ್ಲ ಎಂಬ ವ್ಯಥೆಯನ್ನು ಪಡುತ್ತಾ ಕೊನೆಗೂ ಕೂಡ ಗರ್ಭಿಣಿಯಾದ ಮೇಲೆ 7 ಗಂಟೆಗಳ ಕಾಲ ಸತತವಾಗಿ ಮಗುವಿಗಾಗಿ ಹೋರಾಡಿ ನಂತರ ಮಗುವನ್ನು ನೋಡಿ ನಗುತ್ತಾ ತನ್ನ ಪ್ರಾಣವನ್ನು ಚೆಲ್ಲಿದ್ದು ನನಗೆ ಸಾಕಷ್ಟು ದುಃಖವಾಯಿತು ಎಂಬುದಾಗಿ ಬರೆದುಕೊಂಡಿದ್ದಾರೆ.

wom mother 1 | ಮದುವೆಯಾಗಿ 14 ವರ್ಷದ ಬಳಿಕ ತಾಯಿಯಾದ ಮಹಿಳೆ, ಆದರೆ ಡೆಲಿವರಿ ದಿನ ಏನಾಯಿತು ಗೊತ್ತೇ? ಸಾವಿರಾರು ಹೆರಿಗೆ ಮಾಡಿಸಿದ್ದ ಡಾಕ್ಟರ್ ಪರಿಸ್ಥಿತಿ ಏನಾಗಿದೆ ಗೊತ್ತೇ??
ಮದುವೆಯಾಗಿ 14 ವರ್ಷದ ಬಳಿಕ ತಾಯಿಯಾದ ಮಹಿಳೆ, ಆದರೆ ಡೆಲಿವರಿ ದಿನ ಏನಾಯಿತು ಗೊತ್ತೇ? ಸಾವಿರಾರು ಹೆರಿಗೆ ಮಾಡಿಸಿದ್ದ ಡಾಕ್ಟರ್ ಪರಿಸ್ಥಿತಿ ಏನಾಗಿದೆ ಗೊತ್ತೇ?? 4

ಇಷ್ಟು ಮಾತ್ರವಲ್ಲದೆ ಈಕೆಯ ಆಪರೇಷನ್ ಆದ ಮೇಲೆ ನಾಲ್ಕು ದಿನಗಳ ಕಾಲ ಅವರು ಎಷ್ಟೊಂದು ದುಃಖಿತರಾಗಿದ್ದಾರೆ ಎಂದರೆ ಆಸ್ಪತ್ರೆ ಕಡೆಗೆ ಮುಖ ಹಾಕಿ ಕೂಡ ನೋಡಿರಲಿಲ್ಲ. ಮಗುವನ್ನು ಹೆರುವುದು ಎಂದರೆ ಅಷ್ಟೊಂದು ಸುಲಭವಲ್ಲ ನಮ್ಮ ತಾಯಂದಿರಿಗೆ ಹಾಗೂ ಪತ್ನಿಗೆ ನಾವು ಸದಾ ಕಾಲ ಚಿರಋಣಿಯಾಗಿರಬೇಕು ಎಂಬುದಾಗಿ ಕೂಡಾ ಆ ಡಾಕ್ಟರ್ ತಮ್ಮ ಬರಹದಲ್ಲಿ ಬರೆದುಕೊಂಡಿದ್ದಾರೆ. ನಾನು ಹೇಳಿದ್ದೆ ಅಲ್ವಾ ಗೆಳೆಯರೇ ಈ ಕಥೆಯನ್ನು ಕೇಳಿದ ನಂತರ ನಿಮ್ಮ ಕಣ್ಣಲ್ಲಿ ಕಣ್ಣೀರ ಹನಿ ಜಿನುಗುವುದಂತೂ ಖಚಿತ.

Comments are closed.