ಮತ್ತೊಮ್ಮೆ ಅಪ್ಪು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ. ಪದೇ ಪದೇ ಹೀಗೆ ಮಾಡಿದರೆ ಯಾರು ತಾನೇ ಸುಮ್ಮನಿರುತ್ತಾರೆ ಎಂದ ಕನ್ನಡಿಗರು. ನಡೆದ್ದದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಟಿ ರಶ್ಮಿಕಾ ಮಂದಣ್ಣ ನವರು ಈಗಾಗಲೇ ಭಾರತೀಯ ಚಿತ್ರರಂಗದ ಪ್ರಮುಖ ಭಾಷೆಗಳಲ್ಲಿ ಬಹು ಬೇಡಿಕೆಯ ನಟಿಯಾಗಿ ಬಹುಬೇಗನೆ ಅತಿ ಚಿಕ್ಕ ವಯಸ್ಸಿನಲ್ಲಿ ಜನಪ್ರಿಯತೆಯನ್ನು ಸೃಷ್ಟಿಸಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ಒಂದು ವಿಚಾರದಲ್ಲಿ ನೋಡಿದರೆ ಎಷ್ಟೊಂದು ಚಿಕ್ಕವಯಸ್ಸಿನಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಸಾಧನೆ ಮಾಡಿರುವುದು ನಿಜಕ್ಕೂ ಕೂಡ ಪ್ರಶಂಸಾರ್ಹ. ಆದರೆ ಕನ್ನಡ ಚಿತ್ರರಂಗದಿಂದಲೇ ಇಂತಹ ಯಶಸ್ಸನ್ನು ಪಡೆಯಲು ಅವಕಾಶ ಸಿಕ್ಕಿರುವುದರಿಂದ ಕನ್ನಡ ಪ್ರೇಕ್ಷಕರಿಗೆ ಹಾಗೂ ಕರುನಾಡಿಗೆ ಋಣಿಯಾಗಿರಬೇಕಾಗಿತ್ತು.

ಆದರೆ ರಶ್ಮಿಕ ಮಂದಣ್ಣ ಕನ್ನಡ ಭಾಷೆ ಹಾಗೂ ಕನ್ನಡತನದ ಕುರಿತಂತೆ ತೋರಿಸುತ್ತಿರುವ ನಿರ್ಲಕ್ಷ ಕನ್ನಡ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದು ಅದಕ್ಕಾಗಿ ರಶ್ಮಿಕಾ ಮಂದಣ್ಣ ನವರನ್ನು ಕೆಲವು ಕನ್ನಡ ಪ್ರೇಕ್ಷಕರು ಸುತಾರಾಂ ಇಷ್ಟಪಡುವುದಿಲ್ಲ. ಇನ್ನು ನೀವು ಇತ್ತೀಚಿಗೆ ಗಮನಿಸಿರಬಹುದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಮರಣದ ಸಂದರ್ಭದಲ್ಲಿ ಒಂದೇ ಒಂದು ಪ್ರತಿಕ್ರಿಯೆಯನ್ನು ಕೂಡ ನೀಡಲು ಇಷ್ಟಪಟ್ಟಿರಲಿಲ್ಲ. ಈ ಸಂದರ್ಭದಲ್ಲಿ ಮೌನ ವಹಿಸಿಕೊಂಡು ಬಂದಿದ್ದರು. ಇತ್ತೀಚಿಗಷ್ಟೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಜನ್ಮ ದಿನದ ವಿಶೇಷವಾಗಿ ಭಾರತೀಯ ಚಿತ್ರರಂಗದ ಹಲವಾರು ಸೆಲೆಬ್ರಿಟಿಗಳು ಪುನೀತ್ ರಾಜಕುಮಾರ್ ರವರು ಇಲ್ಲದಿದ್ದರೂ ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಶುಭಾಶಯಗಳನ್ನು ಕೋರಿದ್ದರು. ಆದರೆ ಜೊತೆಯಲ್ಲಿ ನಟಿಸಿದ್ದರು ಕೂಡ ಪುನೀತ್ ರಾಜಕುಮಾರ್ ರವರ ಜನ್ಮ ದಿನಕ್ಕೆ ಒಂದೇ ಒಂದು ವಿಶ್ ರಶ್ಮಿಕ ಮಂದಣ್ಣ ನವರು ಮಾಡಿರಲಿಲ್ಲ. ಆ ಸಂದರ್ಭದಲ್ಲಿ ಅಪ್ಪು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

rashmika mandanna puneeth | ಮತ್ತೊಮ್ಮೆ ಅಪ್ಪು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ. ಪದೇ ಪದೇ ಹೀಗೆ ಮಾಡಿದರೆ ಯಾರು ತಾನೇ ಸುಮ್ಮನಿರುತ್ತಾರೆ ಎಂದ ಕನ್ನಡಿಗರು. ನಡೆದ್ದದೇನು ಗೊತ್ತೇ??
ಮತ್ತೊಮ್ಮೆ ಅಪ್ಪು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ. ಪದೇ ಪದೇ ಹೀಗೆ ಮಾಡಿದರೆ ಯಾರು ತಾನೇ ಸುಮ್ಮನಿರುತ್ತಾರೆ ಎಂದ ಕನ್ನಡಿಗರು. ನಡೆದ್ದದೇನು ಗೊತ್ತೇ?? 2

ಇನ್ನು ಇತ್ತೀಚಿಗಷ್ಟೇ ಮತ್ತೊಮ್ಮೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದು ಹೇಳಬಹುದಾಗಿದೆ. ಹೌದು ಇತ್ತೀಚಿಗಷ್ಟೇ ಅಲ್ಲು ಅರ್ಜುನ್ ರವರು ತಮ್ಮ 40ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ರಶ್ಮಿಕ ಮಂದಣ್ಣ ತಮ್ಮ ಟ್ವಿಟರ್ ಖಾತೆಯ ಮೂಲಕ ಜನ್ಮದಿನದ ಶುಭಾಶಯಗಳನ್ನು ಕೋರಿದ್ದರು. ಇದಕ್ಕೆ ಕೋಪಗೊಂಡ ಅಪ್ಪು ಅಭಿಮಾನಿಗಳು ಸೇರಿದಂತೆ ಕನ್ನಡಿಗರು ನಿಮಗೆ ಕನ್ನಡದ ನಟರ ಜನುಮದಿನ ಕಾಣಿಸುವುದಿಲ್ಲ. ಅಪ್ಪು ರವರ ಜನ್ಮದಿನ ನಿಮಗೆ ನೆನಪಿಲ್ಲವೇ. ಪ್ರತಿಯೊಂದು ಬಾರಿ ನೀವು ಪರಭಾಷೆ ಸೆಲೆಬ್ರಿಟಿಗಳನ್ನು ಮೆಚ್ಚಿಸಲು ಯಾಕೆ ಹೀಗೆ ಆಡುತ್ತಿದೆ ಎಂಬುದಾಗಿ ಹಿಗ್ಗಾಮುಗ್ಗ ಟೀಕಿಸಿದ್ದಾರೆ. ಅಭಿಮಾನಿಗಳು ಹೇಳುತ್ತಿರುವ ಮಾತಿನಲ್ಲಿ ಕೂಡ ನ್ಯಾಯ ಇದೆ. ಈ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಶೇರ್ ಮಾಡಿ.

Comments are closed.