ಕಳಪೆ ಫಾರ್ಮ್ ನಿಂದ ಭಾರತ ತಂಡದಿಂದ ಹೊರಬಿದ್ದು, ಈಗ ಐಪಿಎಲ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿ ವಾಪಾಸ್ ಬರುವ ಸೂಚನೆ ನೀಡುತ್ತಿರುವ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ 2022 ರ ಐಪಿಎಲ್ ಆರಂಭವಾಗಿ ಎರಡು ವಾರ ಕಳೆದಿದೆ. ಘಟಾನುಘಟಿ ಎಂದು ಕರೆಸಿಕೊಂಡಿದ್ದ ಆಟಗಾರರು ಕಳಪೆ ಪ್ರದರ್ಶನ ನೀಡಿ ತಂಡದಿಂದಲೇ ಹೊರಬಿದ್ದಿದ್ದರೇ, ಇತ್ತ ಕಳಪೆ ಅನಿಸಿಕೊಂಡಿದ್ದ ಆಟಗಾರರು ತಮ್ಮ ಅದ್ಭುತ ಪ್ರದರ್ಶನದಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ.ಅದಲ್ಲದೇ ತಮ್ಮ ಪ್ರದರ್ಶನದಿಂದ ಟೀಮ್ ಇಂಡಿಯಾಗೆ ಕಮ್ ಬ್ಯಾಕ್ ಸಹ ಮಾಡಲಿದ್ದಾರಂತೆ. ಬನ್ನಿ ಆ ಟಾಪ್ 5 ಆಟಗಾರರು ಯಾರು ಎಂಬುದನ್ನು ತಿಳಿಯೋಣ.

ಟಾಪ್ 5 – ಶಿವಂ ದುಬೆ : ಮುಂಬೈನ ಈ ಆಲ್ ರೌಂಡರ್ ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಒಂದೆರೆಡು ಉತ್ತಮ ಇನ್ನಿಂಗ್ಸ್ ಆಡಿದ್ದಾರೆ. ಈ ಹಿಂದೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ ಈ ಆಲ್ ರೌಂಡರ್ ಪುನಃ ಅದೇ ಕೋಟಾದಡಿಯಲ್ಲಿ ಪುನಃ ಇವರು ತಂಡದಲ್ಲಿ ಮರಳಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಟಾಪ್ 4 – ಉಮೇಶ್ ಯಾದವ್ : ಕೇವಲ ರೆಡ್ ಬಾಲ್ ಕ್ರಿಕೆಟ್ ಮಾತ್ರ ಆಡುತ್ತಿದ್ದ ಉಮೇಶ್ ಯಾದವ್ ಈಗ ವೈಟ್ ಬಾಲ್ ಕ್ರಿಕೆಟ್ ನಲ್ಲಿ ಸಹ ಉತ್ತಮ ಆಟವಾಡಿ, ಪರ್ಪಲ್ ಕ್ಯಾಪ್ ವಿಜೇತರಾಗಿದ್ದಾರೆ. ಹಾಗಾಗಿ ಇವರು ವೈಟ್ ಬಾಲ್ ಕ್ರಿಕೆಟ್ ನಲ್ಲಿ ಪುನಃ ಭಾರತ ತಂಡಕ್ಕೆ ಮರಳುವ ಸಾಧ್ಯತೆ ಇದೆ.

dines shivam | ಕಳಪೆ ಫಾರ್ಮ್ ನಿಂದ ಭಾರತ ತಂಡದಿಂದ ಹೊರಬಿದ್ದು, ಈಗ ಐಪಿಎಲ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿ ವಾಪಾಸ್ ಬರುವ ಸೂಚನೆ ನೀಡುತ್ತಿರುವ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ??
ಕಳಪೆ ಫಾರ್ಮ್ ನಿಂದ ಭಾರತ ತಂಡದಿಂದ ಹೊರಬಿದ್ದು, ಈಗ ಐಪಿಎಲ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿ ವಾಪಾಸ್ ಬರುವ ಸೂಚನೆ ನೀಡುತ್ತಿರುವ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ?? 2

ಟಾಪ್ 3 – ಕೃನಾಲ್ ಪಾಂಡ್ಯ : ಎಡಗೈ ಸ್ಪಿನ್ನರ್ ಹಾಗೂ ಆಲ್ ರೌಂಡರ್ ಕೃನಾಲ್ ಕಳೆದ ವರ್ಷ ತಂಡದ ಭಾಗವಾಗಿದ್ದರು. ಆದರೇ ಕಳಪೆ ಪ್ರದರ್ಶನದಿಂದ ಹೊರಬಿದ್ದಿದ್ದರು. ಆದರೇ ಈಗ ಲಕ್ನೋ ಸೂಪರ್ ಜೈಂಟ್ಸ್ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ತಂಡಕ್ಕೆ ಮರಳುವ ಸಾಧ್ಯತೆ ಇದೆ.

ಟಾಪ್ 2 – ರಾಹುಲ್ ಚಾಹರ್ : ಲೆಗ್ ಸ್ಪಿನ್ನರ್ ರಾಹುಲ್ ಚಾಹರ್ ಟಿ 20 ವಿಶ್ವಕಪ್ ನಲ್ಲಿ ತಂಡದ ಭಾಗವಾಗಿದ್ದರು. ಆದರೇ ಕಳಪೆ ಪ್ರದರ್ಶನದಿಂದ ಹೊರಗುಳಿದಿದ್ದರು. ಆದರೇ ಪ್ರಸ್ತುತ ಪಂಜಾಬ್ ಕಿಂಗ್ಸ್ ತಂಡದ ಪರ ಉತ್ತಮ ಬೌಲಿಂಗ್ ಪ್ರದರ್ಶಿಸುತ್ತಿದ್ದಾರೆ. ಹೀಗಾಗಿ ಪುನಃ ಭಾರತ ತಂಡಕ್ಕೆ ಮರಳುವ ಸಾಧ್ಯತೆ ಇದೆ.

ಟಾಪ್ 1 – ದಿನೇಶ್ ಕಾರ್ತಿಕ್ : ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸಮನ್ ದಿನೇಶ್ ಕಾರ್ತಿಕ್, 2019ರ ವಿಶ್ವಕಪ್ ನಂತರ ತಂಡದಲ್ಲಿ ಸ್ಥಾನ ಪಡೆದಿಲ್ಲ. ಪ್ರಸ್ತುತ ಆರ್ಸಿಬಿ ತಂಡದ ಪರ ಉತ್ತಮ ಫೀನಿಶರ್ ಆಗಿ ಆಡುತ್ತಿದ್ದಾರೆ. ಹಾಗಾಗಿ ಭಾರತ ತಂಡಕ್ಕೆ ಇವರು ಉತ್ತಮ ಫೀನಿಶರ್ ಆಗಿ ಮರಳುವ ಸಾಧ್ಯತೆ ಇದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Comments are closed.