ಕಿಂಗ್ ಕೊಹ್ಲಿ ನಾಟೌಟ್ ಆಗಿದ್ದರೂ ಔಟ್ ನೀಡಿದ ಅಂಪೈರ್; ನಂತರ ಈಗ ಆಗಿದ್ದೇನು ಗೊತ್ತ?? ಅಂಪೈರ್ ಗಳ ಕತೆ ಏನಾಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಚಾಲೆಂಜರ್ಸ್ ಬೆಂಗಳೂರು ತಂಡ ತಂಡ ಮೊನ್ನೆಯ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು 7 ವಿಕೆಟ್ ಗಳಿಂದ ಸೋಲಿಸಿದೆ. ಈ ಬಾರಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಸಿಕ್ಕಂತಹ ದೊಡ್ಡ ಗೆಲುವೆಂದರೆ ತಪ್ಪಾಗಲಾರದು. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಡುವಣ ಪಂದ್ಯದಲ್ಲಿ ಹಲವಾರು ವಿಚಾರಗಳು ನಡೆದುಹೋಗಿದೆ. ಇವುಗಳಲ್ಲಿ ಪ್ರಮುಖವಾಗಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಿರುವುದು ಏನೆಂದರೆ ಅದು ವಿರಾಟ್ ಕೊಹ್ಲಿ ರವರ ಎಲ್ಬಿಡಬ್ಲ್ಯು ಔಟ್.

ಹೌದು ಗೆಳೆಯರೇ 19ನೇ ಓವರ್ನಲ್ಲಿ ಬ್ರೇವಿಸ್ ರವರು ಬೌಲಿಂಗ್ ಮಾಡಲು ಬರುತ್ತಾರೆ. ಅದಾಗಲೇ ವಿರಾಟ್ ಕೊಹ್ಲಿ ರವರು 40ಕ್ಕೂ ಅಧಿಕ ರನ್ ಗಳಿಸಿ ತಂಡವನ್ನು ಗೆಲ್ಲಿಸುವ ನಿರ್ಧಾರವನ್ನು ಮಾಡಿಕೊಂಡಿದ್ದರು. ಆದರೆ ಆ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಇರುವರು ಎಲ್ಬಿಡಬ್ಲ್ಯು ಗೆ ಒಳಗಾಗುತ್ತಾರೆ. ಆಗ ವಿರಾಟ್ ಕೊಹ್ಲಿ ರವರು ಅಂಪೈರ್ ಔಟ್ ನೀಡಿದಾಗ ರಿವ್ಯೂ ತೆಗೆದುಕೊಳ್ಳುತ್ತಾರೆ. ರಿವ್ಯೂ ತೆಗೆದುಕೊಂಡಾಗ ಥರ್ಡ್ ಅಂಪಾಯರ್ ಬ್ಯಾಟ್ ಹಾಗೂ ಕಾಲಿನ ಪ್ಯಾಡ್ ಎರಡು ಕೂಡ ಏಕಕಾಲದಲ್ಲಿ ಚೆಂಡಿಗೆ ತಾಕಿದೆ ಎಂಬುದಾಗಿ ಗೊಂದಲಕ್ಕೆ ಸಿಕ್ಕಿ ನೀಡುವುದು ಬೇಡವೋ ಎನ್ನುವ ಗೊಂದಲಕ್ಕೆ ಬೀಳುತ್ತಾರೆ. ನಂತರ ಕೊನೆಗೂ ದಾರಿ ತೋಚದೆ ಫೀಲ್ಡ್ ಅಂಪಾಯರ್ ನೀಡಿರುವ ನಿರ್ಧಾರವನ್ನು ಎತ್ತಿಹಿಡಿಯುತ್ತಾರೆ. ಇದರಿಂದಾಗಿ ವಿರಾಟ್ ಕೊಹ್ಲಿ ರವರು ಸಾಕಷ್ಟು ಕೋಪಗೊಳ್ಳುತ್ತಾರೆ ಎಂಬುದು ಹಲವಾರು ವಿಡಿಯೋಗಳಲ್ಲಿ ಕಂಡುಬಂದಿದೆ.

kohli lbw mi | ಕಿಂಗ್ ಕೊಹ್ಲಿ ನಾಟೌಟ್ ಆಗಿದ್ದರೂ ಔಟ್ ನೀಡಿದ ಅಂಪೈರ್; ನಂತರ ಈಗ ಆಗಿದ್ದೇನು ಗೊತ್ತ?? ಅಂಪೈರ್ ಗಳ ಕತೆ ಏನಾಗಿದೆ ಗೊತ್ತೇ??
ಕಿಂಗ್ ಕೊಹ್ಲಿ ನಾಟೌಟ್ ಆಗಿದ್ದರೂ ಔಟ್ ನೀಡಿದ ಅಂಪೈರ್; ನಂತರ ಈಗ ಆಗಿದ್ದೇನು ಗೊತ್ತ?? ಅಂಪೈರ್ ಗಳ ಕತೆ ಏನಾಗಿದೆ ಗೊತ್ತೇ?? 2

ಇನ್ನು ಈ ಸಂದರ್ಭದಲ್ಲಿ ಅವರು ಹತಾಶೆಯಿಂದ ಕೋಪದಿಂದ ಮೈದಾನದಿಂದ ಹೊರಹೋಗುವುದು ವಿಡಿಯೋಗಳಲ್ಲಿ ಕಂಡುಬಂದಿದೆ. ಇದಾದ ನಂತರ ನಿನ್ನೆ ಟ್ವೀಟ್ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಂದು ವೇಳೆ ಚಂಡು ಬ್ಯಾಟ್ ಹಾಗೂ ಪ್ಯಾಡ್ ಎರಡಕ್ಕೂ ಜೊತೆಯಾಗಿ ತಾಗಿದರೆ ಕ್ರಿಕೆಟ್ ನಿಯಮದ ಪ್ರಕಾರ ನೋಟದಿಂದಾಗಿ ದಾಖಲೆ ಸಮೇತ ಪೋಸ್ಟ್ ಮಾಡಿದೆ. ಒಟ್ಟಾರೆಯಾಗಿ ಈ ತೀರ್ಪಿನಿಂದಾಗಿ ಕೇವಲ ವಿರಾಟ್ ಕೊಹ್ಲಿ ರವರು ಮಾತ್ರವಲ್ಲದೇ ಕ್ರಿಕೆಟ್ ಅಭಿಮಾನಿಗಳು ಕೂಡ ಅಸಮಾಧಾನಗೊಂಡಿದ್ದಾರೆ. ಈ ಐಪಿಎಲ್ ನಲ್ಲಿ ಅಂಪೈರ್ ಗಳ ತೀರ್ಪು ಎನ್ನುವುದು ಬಹಳಷ್ಟು ಕಳಪೆ ಮಟ್ಟದ್ದಾಗಿದೆ ಎಂಬುದಾಗಿ ದೂರನ್ನು ನೀಡುತ್ತಿದ್ದಾರೆ, ಸಾಮಾಜಿಕ ಜಾಲತಾಣಗಳಲ್ಲಿ ಅಂತೂ ಫೀಲ್ಡ್ ನಲ್ಲಿ ಇರುವ ಅಂಪೈರ್ ತಪ್ಪು ಮಾಡಿದರೆ ತಪ್ಪಿಲ್ಲ, ಕ್ಯಾಮೆರಾ ದಲ್ಲಿ ನೋಡಿ ಕೂಡ ತಪ್ಪು ಮಾಡಿದರೆ ಏನು ಮಾಡಬೇಕು , ಬಿಸಿಸಿಐ ಕಠಿಣ ಕ್ರಮ ಕೈಗೊಳ್ಳಲೇಬೇಕು ಎನ್ನುತ್ತಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.