ಮತ್ತೊಮ್ಮೆ ಕಿರುತೆರೆಯ ಮೇಲೆ ಬರಲು ಸಿದ್ದವಾದ ಶಿವಣ್ಣ, ಆದರೆ ಈ ಬಾರಿ ಮಾಸ್ ಎಂಟ್ರಿ. ಯಾಕೆ ಗೊತ್ತೇ?? ದೂಳೆಬ್ಬಿಸುತ್ತಾರಾ ಶಿವಣ್ಣ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ ಕಿರುತೆರೆಯ ವಾಹಿನಿಗಳಲ್ಲಿ ಕೇವಲ ಧಾರವಾಹಿಗಳನ್ನು ಮಾತ್ರವಲ್ಲದೆ ಪ್ರೇಕ್ಷಕರು ವಿಶೇಷ ಕಾರ್ಯಕ್ರಮಗಳನ್ನು ಕೂಡ ಇಷ್ಟಪಡುತ್ತಾರೆ. ಇದಕ್ಕಾಗಿ ಧಾರವಾಹಿಗಳ ಜೊತೆಗೆ ಕಿರುತೆರೆಯ ವಾಹಿನಿಯಲ್ಲಿ ರಿಯಾಲಿಟಿ ಶೋ ಕಾರ್ಯಕ್ರಮಗಳ ಪ್ರಸಾರದಲ್ಲೂ ಕೂಡ ಕಾಂಪಿಟೇಶನ್ ಇದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ ಹೊಸ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸಿನಿಮಾಗಳಲ್ಲಿ ಡ್ಯಾನ್ಸ್ ಮೂಲಕ ಈ ವಯಸ್ಸಿನಲ್ಲಿ ಕೂಡ ಎಲ್ಲರನ್ನೂ ಮನ ರಂಜಿಸುತ್ತಿರುವ ಶಿವಣ್ಣ ಅವರಿಗೆ ತಕ್ಕುದಾದ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಸಂತಸ ತರಲಿದೆ. ಅಷ್ಟಕ್ಕೂ ಯಾವ ರಿಯಾಲಿಟಿ ಶೋನಲ್ಲಿ ನಡೆಸಲಿದ್ದಾರೆ ಎಂಬುದರ ಕುರಿತಂತೆ ಅಭಿಮಾನಿಗಳಲ್ಲಿ ಈಗಾಗಲೇ ಕುತೂಹಲ ಏರ್ಪಟ್ಟಿದೆ. ಹಾಗಿದ್ದರೆ ಶಿವಣ್ಣ ಸಿನಿಮಾವನ್ನು ಹೊರತುಪಡಿಸಿ ಯಾವ ರಿಯಾಲಿಟಿ ಶೋ ನಲ್ಲಿ ಇನ್ನು ಮುಂದೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಸವಿವರವಾಗಿ ತಿಳಿದುಕೊಳ್ಳೋಣ.

shivarajkumar | ಮತ್ತೊಮ್ಮೆ ಕಿರುತೆರೆಯ ಮೇಲೆ ಬರಲು ಸಿದ್ದವಾದ ಶಿವಣ್ಣ, ಆದರೆ ಈ ಬಾರಿ ಮಾಸ್ ಎಂಟ್ರಿ. ಯಾಕೆ ಗೊತ್ತೇ?? ದೂಳೆಬ್ಬಿಸುತ್ತಾರಾ ಶಿವಣ್ಣ??
ಮತ್ತೊಮ್ಮೆ ಕಿರುತೆರೆಯ ಮೇಲೆ ಬರಲು ಸಿದ್ದವಾದ ಶಿವಣ್ಣ, ಆದರೆ ಈ ಬಾರಿ ಮಾಸ್ ಎಂಟ್ರಿ. ಯಾಕೆ ಗೊತ್ತೇ?? ದೂಳೆಬ್ಬಿಸುತ್ತಾರಾ ಶಿವಣ್ಣ?? 2

ಈಗಾಗಲೇ ನಿಮಗೆ ತಿಳಿದಿರುವಂತೆ ಕಿರುತೆರೆಯ ಕ್ಷೇತ್ರದಲ್ಲಿ ಅದರಲ್ಲೂ ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ಅತ್ಯಂತ ಯಶಸ್ವಿಯಾಗಿರುವ ವಾಹಿನಿ ಎಂದರೇ ಅದು ಜೀ ಕನ್ನಡ ವಾಹಿನಿ. ಜೀ ಕನ್ನಡ ವಾಹಿನಿಯಲ್ಲಿ ಈಗಾಗಲೇ ಹಲವಾರು ಸೂಪರ್ಹಿಟ್ ಧಾರವಾಹಿಗಳು ಇವೆ. ಆದರೆ ಈ ಬಾರಿ ಜೀ ಕನ್ನಡ ವಾಹಿನಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 6ನ್ನು ಇದೇ ಏಪ್ರಿಲ್ 16ರಿಂದ ಪ್ರಾರಂಭಿಸಲಿದೆ. ಈಗಾಗಲೇ ಇದರ ಹಿಂದಿನ ಆವೃತ್ತಿಗಳು ಅತ್ಯಂತ ಯಶಸ್ವಿಯಾಗಿ ಪ್ರದರ್ಶನ ಕಂಡಿದ್ದವು. ಈ ಬಾರಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನ ಹೊಸ ಆವೃತ್ತಿಯ ಪ್ರೋಮೋ ಕೂಡ ಬಿಡುಗಡೆಯಾಗಿದ್ದು ರಿಯಾಲಿಟಿ ಶೋ ಅಭಿಮಾನಿಗಳಿಗೆ ಮತ್ತೊಂದು ಸಂತೋಷದ ಸುದ್ದಿ ಸಿಕ್ಕಿದೆ. ಹೌದು ಕರುನಾಡ ಚಕ್ರವರ್ತಿ ಶಿವಣ್ಣ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 6ರ ಜಡ್ಜ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈಗಾಗಲೇ ಕನ್ನಡ ಚಿತ್ರರಂಗದ ಡ್ಯಾನ್ಸ್ ಐಕಾನ್ ಆಗಿರುವ ಶಿವಣ್ಣ ಕಾರ್ಯಕ್ರಮಗಳಲ್ಲಿ ಈಗಾಗಲೇ ಅತಿಥಿಗಳಾಗಿ ನಿರೂಪಕರಾಗಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದ ಮೂಲಕ ಪ್ರತಿ ಶನಿವಾರ ಭಾನುವಾರ 9:00 ಗಂಟೆಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ ಎಂದು ಹೇಳಬಹುದಾಗಿದೆ.

Comments are closed.