ಆನಂದ್ ಸಿನಿಮಾ ಚಿತ್ರೀಕರಣದಲ್ಲಿ ಆಗಿದ್ದೇನು ಗೊತ್ತೇ?? ಮೊದಲ ಸಿನಿಮಾದ ಶೂಟಿಂಗಲ್ಲೇ ಶಿವಣ್ಣ ಕಣ್ಣೀರು ಹಾಕಿದ್ದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ದೊಡ್ಮನೆ ಕುಟುಂಬ ಅಂದ್ರೆ ಚಂದನವನದಲ್ಲಿ ಒಳ್ಳೆಯ ಹೆಸರಿದೆ. ಗೌರವವಿದೆ. ದೊಡ್ಡಮನೆ ಯಾವುದೇ ಸದಸ್ಯ ಸಿನಿಮಾ ರಂಗಕ್ಕೆ ಬಂದ್ರೂ ಅಭಿಮಾನಿಗಳು ಮೆಚ್ಚಿ ಹಾರೈಸಿದ್ದಾರೆ. ಇದನ್ನ ಸದಾ ಸದಾ ಕಾಲಕ್ಕೆ ನೆನಪಿಸಿಕೊಳ್ಳುತ್ತೆ ದೊಡ್ಮನೆ ಕುಟುಂಬ. ಇವಾಗ ದೊಡ್ಮನೆಯ ಶಿವಣ್ಣಅವರನ್ನೇ ತಗೊಳ್ಳಿ. ಯಾವುದೇ ಸಮಯದಲ್ಲಾದ್ರೂ ಸರಿ ಅಭಿಮಾನಿಗಳು, ಕನ್ನಡಿಗರು ಕೊಟ್ಟ ಪ್ರೀತಿಯನ್ನ ಅವರು ಮರೆಯೋದೇ ಇಲ್ಲ. ಅವರು ತಮ್ಮ ಮೊದಲ ಚಿತ್ರ ಆನಂದ್ ಸಮಯದಲ್ಲಿನ ತಮ್ಮ ಭಾವನೆಗಳನ್ನು ಹೇಳಿಕೊಳ್ಳುವಾಗ ಈ ಮಾತು ಅರಿವಿಗೆ ಬರುತ್ತದೆ.

ಹೌದು ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅವರು ಕಳೆದು 35 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ. ಶಿವಣ್ಣ ಕೈನಲ್ಲಿ ಜನ ಮಚ್ಚು ನೋಡೋದಕ್ಕೆ ಇಷ್ಟಪಟ್ರು ಹಾಗಂತ ರೌಡಿಸಂ ಚಿತ್ರಗಳಿಗೆ ಮಾತ್ರ ಸೀಮಿತವಾಗದೇ ಎಲ್ಲಾ ತರಹದ ಪಾತ್ರಗಳನ್ನೂ ನಿಭಾಯಿಸಿ, ವರನಟನ ಮಗ ಎನ್ನುವ ಕೀರ್ತಿಯನ್ನು ಉಳಿಸಿಕೊಂಡವರು. ಶಿವಣ್ಣ ಹಲವು ಸಂದರ್ಭಗಳಲ್ಲಿ ತನ್ನ ಈ ಗೆಲುವಿಗೆ ತನ್ನ ಪಾತ್ರವನ್ನು ಸೃಷ್ಟಿಸಿದ ನಿರ್ದೇಶಕರೂ ಹಾಗೂ ಅದನ್ನು ನೋಡಿ ಹರಸಿದ ನೀವುಗಳು ಅಂದರೆ ಅಭಿಮಾನಿಗಳು ಕಾರಣ ಎಂದು ಹೇಳುತ್ತಾರೆ. ಅವರ ಮೊದಲ ಚಿತ್ರ ಆನಂದ್ ನಲ್ಲಿ ನಟಿಸುವಾಗ ಶಿವಣ್ಣ ಕಣ್ಣೀರಿಟ್ಟಿದ್ದರಂತೆ ಯಾಕೆ ಗೊತ್ತಾ?

shivaraj kumar in anand movie | ಆನಂದ್ ಸಿನಿಮಾ ಚಿತ್ರೀಕರಣದಲ್ಲಿ ಆಗಿದ್ದೇನು ಗೊತ್ತೇ?? ಮೊದಲ ಸಿನಿಮಾದ ಶೂಟಿಂಗಲ್ಲೇ ಶಿವಣ್ಣ ಕಣ್ಣೀರು ಹಾಕಿದ್ದು ಯಾಕೆ ಗೊತ್ತೇ??
ಆನಂದ್ ಸಿನಿಮಾ ಚಿತ್ರೀಕರಣದಲ್ಲಿ ಆಗಿದ್ದೇನು ಗೊತ್ತೇ?? ಮೊದಲ ಸಿನಿಮಾದ ಶೂಟಿಂಗಲ್ಲೇ ಶಿವಣ್ಣ ಕಣ್ಣೀರು ಹಾಕಿದ್ದು ಯಾಕೆ ಗೊತ್ತೇ?? 2

ಆನಂದ್ ಚಿತ್ರದ ಮುಹೀರ್ತದ ಸಂದರ್ಭದಲ್ಲಿ ಶಿವಣ್ಣ ಜೊತೆ ಚಿತ್ರತಂಡ ಹಾಗೂ ಅವರ ಅಪ್ಪ ಅಮ್ಮ ಎಲ್ಲರೂ ಜೊತೆಗಿದ್ರು. ಶಿವಣ್ಣ ಅವರ ಮೊದಲ ಕ್ಯಾಮರಾ ಎದುರು ನಿಂತು ಹೇಳುವ ಡೈಲಾಗ್ ನನ್ನ ಹೆಸರು ಆನಂದ್ ಅಂತ ಎನ್ನುವ ವಾಕ್ಯ. ಆದರೆ ಇದನ್ನುಹೇಳುವಾಗ ಒಳಗೊಳಗೇ ಶಿವಣ್ಣ ಅವರಿಗೆ ಅಳುಕಿತ್ತಂತೆ. ಕಾರಣ ನಾಯಕ ನಟನಾಗಿ ಸಿತ್ರರಂಗಕ್ಕೆ ಕಾಲಿಡಬೇಕೆದು ಆನಂದ್ ಚಿತ್ರ ನಟನೆಯನ್ನು ಆರಂಭಿಸಿಯಾಗಿತ್ತು. ಆದರೆ ಜನ ತನ್ನನ್ನು ಸ್ಪೀಕರಿಸುತ್ತಾರೋ ಇಲ್ಲವೇ ನಾಯಕ ನಟನಾಗದೇ ಇದ್ದರೆ ಮುಂದೇನು? ವಿದ್ಯಾಭ್ಯಾಸವನ್ನು ಮುಂದುವರೆಸುವುದು. ಆದರೂ ಸಿನಿಮಾ ನಟನೆಯ ಮೂಲಕ ಬೆಳೆಯ ಬೇಕೆನ್ನುವ ಕನಸು ಕನಸಾಗೆ ಉಳಿದರೆ ಎಂಬಿತ್ಯಾದಿ ಸಂಶಯಗಳು ಅವರ ಮನಸ್ಸಿನಲ್ಲಿತ್ತು.

ಕ್ಯಾಮರಾ ಎದುರು ನನ್ನ ಹೆಸರು ಆನಂದ್ ಎಂದು ಹೇಳಿ ಮುಗಿಸುವ ಹೊತ್ತಿಗೆ ಶಿವಣ್ಣ ಅಪ್ಪ ಅಮ್ಮ ಸೇರಿದಂತೆ ಎಲ್ಲರೂ ಆಶ್ಚರ್ಯಪಟ್ತರು, ಖುಷಿ ಪಟ್ಟರು. ಆದರೆ ಶಿವಣ್ಣ ಮಾತ್ರ ಓಡಿಹೋಗಿ ಅಪ್ಪನನ್ನು ತಬ್ಬಿಕೊಂಡು ಜೋರಾಗಿ ಅತ್ತರಂತೆ. ಇಲ್ಲಿ ಖುಷಿ ದುಗುಡ ಎಲ್ಲವೂ ಇತ್ತು. ಅಪ್ಪಾಜಿ ಆಗ ಏನು ಆಗಲ್ಲ ಅನ್ನುವ ಧೈರ್ಯ ತುಂಬಿದ್ರು. ಬಳಿಕ ಆನಂದ್ ಚಿತ್ರ ತೆರೆಗೆ ಬರಲು ಸಿದ್ಧವಾದಾಗ ಮತ್ತದೇ ಭಯ, ಜನ ತನ್ನನ್ನು ಹರಸದೇ ಇದ್ದರೆ? ಆದರೆ ಶಿವಣ್ಣ ನಟನೆಯ ಆನಂದ್ ಚಿತ್ರ ಬಿಡುಗಡೆ ಆಯ್ತು. ಅಂದಿನಿಂದ ಇಂದಿನವರೆಗೆ ಶಿವಣ್ಣ ತಿರುಗಿ ನೋಡಿದ್ದೇ ಇಲ್ಲ. ಅಭಿಮಾನಿಗಳು ತನ್ನನ್ನು ಎಲ್ಲಿಯವರೆಗೆ ಹರಸುತ್ತಾರೋ ಅಲ್ಲಿಯವರೆಗೂ ನಟನೆಗೆ ಸಿದ್ಧ ಎನ್ನುವ ಶಿವಣ್ಣ ಅವರ ಬಗ್ಗೆ ಇನ್ನಷ್ಟು ಅಭಿಮಾನ ಹುಟ್ಟದೇ ಇರಲು ಸಾಧ್ಯವೇ?!

Comments are closed.