ನಿಷ್ಕರ್ಷ ಚಿತ್ರದ ಚಂದುಳ್ಳಿ ಚೆಲುವೆ ನಾಯಕಿ ಸುಮನ್ ನಗರ್ಕರ್ ಅವರು ಈಗ ಹೇಗಿದ್ದಾರೆ ಗೊತ್ತಾ?? ಮರೆತು ಹೋಗಿದ್ದರೇ ನೋಡಿ ಮೊದಲ ಬಾರಿಗೆ ತೋರಿಸ್ತೇವೆ.

ನಮಸ್ಕಾರ ಸ್ನೇಹಿತರೇ 90ರ ದಶಕದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳಿಗೆ ಹೆಸರಾಗಿದ್ದವರು ನಿರ್ದೇಶಕ ಸುನಿಲ್ ಕುಮಾರ ದೇಸಾಯಿರವರು. ಅವರ ಸಿನಿಮಾಗಳೆಂದರೆ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳನ್ನು ವೀಕ್ಷಿಸುವ ವರ್ಗದವರಿಗೆ ಅಚ್ಚುಮೆಚ್ಚಾಗಿತ್ತು. ಇದೇ ಸಂದರ್ಭದಲ್ಲಿ ಇವರು ಕನ್ನಡ ಚಿತ್ರರಂಗಕ್ಕೆ ಒಬ್ಬ ನಟಿಯನ್ನು ಪರಿಚಯಿಸುತ್ತಾರೆ. ಹೌದು ನಾವು ಮಾತನಾಡುತ್ತಿರುವುದು ನಟಿ ಸುಮನ್ ನಗರ್ಕರ್ ಅವರ ಕುರಿತಂತೆ. ಇವರು ತಮ್ಮ ಮುಗ್ಧ ಸೌಂದರ್ಯ ಹಾಗೂ ನಟನೆಯ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದರು. ಅದರಲ್ಲಿ ಸುಮನ್ ನಗರ್ಕರ್ ರವರು ನಟಿಸಿರುವ ನಿಷ್ಕರ್ಷ ಹಾಗೂ ಬೆಳದಿಂಗಳ ಬಾಲೆ ಚಿತ್ರ ಇಂದಿಗೂ ಕೂಡ ಚಿರಸ್ಮರಣೀಯ. ಇನ್ನು ಇವರು ಬೆಂಗಳೂರಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿರುತ್ತಾರೆ.

ಸುಮನ್ ನಗರ್ಕರ್ ನಟಿಸಿರುವ ಈ ಎರಡು ಚಿತ್ರಗಳು ಕೂಡ ಅಂದಿನ ಕಾಲದಲ್ಲಿ ದೊಡ್ಡಮಟ್ಟದಲ್ಲಿ ಸಂಚಲನವನ್ನು ಸೃಷ್ಟಿಸಿತ್ತು. ಯಾಕೆಂದರೆ ಕನ್ನಡ ಚಿತ್ರರಂಗದಲ್ಲಿ ಈ ಬಗೆಯ ಸಿನಿಮಾಗಳು ಬಂದಿರುವುದೇ ಕಡಿಮೆ. 1993 ರಲ್ಲಿ ಬಿಡುಗಡೆಯಾದ ಅಂತಹ ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ನಿಷ್ಕರ್ಷ ಚಿತ್ರ ಕೇವಲ ಜನರ ಮನಸ್ಸನ್ನು ಗೆಲ್ಲುವಲ್ಲಿ ಮಾತ್ರವಲ್ಲದೆ ಬಾಕ್ಸ್ ಆಫೀಸ್ ನಲ್ಲಿ ಕೂಡ ದಾಖಲೆ ನಿರ್ಮಿಸಿತ್ತು. ಈ ಸಿನಿಮಾದಲ್ಲಿ ಸುಮನ್ ನಗರ್ಕರ್ ರವರ ಜೊತೆಗೆ ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಬಿಸಿ ಪಾಟೀಲ್ ಅವರು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಯಾವುದೇ ಹಾಡುಗಳಿಲ್ಲದ ಕೇವಲ ಒಂದು ಕಟ್ಟಡದ ಸುತ್ತ ನಡೆಯುವಂತಹ ರೋಚಕ ಕತೆಯಾಗಿದೆ.

suman nagarkar ramesh | ನಿಷ್ಕರ್ಷ ಚಿತ್ರದ ಚಂದುಳ್ಳಿ ಚೆಲುವೆ ನಾಯಕಿ ಸುಮನ್ ನಗರ್ಕರ್ ಅವರು ಈಗ ಹೇಗಿದ್ದಾರೆ ಗೊತ್ತಾ?? ಮರೆತು ಹೋಗಿದ್ದರೇ ನೋಡಿ ಮೊದಲ ಬಾರಿಗೆ ತೋರಿಸ್ತೇವೆ.
ನಿಷ್ಕರ್ಷ ಚಿತ್ರದ ಚಂದುಳ್ಳಿ ಚೆಲುವೆ ನಾಯಕಿ ಸುಮನ್ ನಗರ್ಕರ್ ಅವರು ಈಗ ಹೇಗಿದ್ದಾರೆ ಗೊತ್ತಾ?? ಮರೆತು ಹೋಗಿದ್ದರೇ ನೋಡಿ ಮೊದಲ ಬಾರಿಗೆ ತೋರಿಸ್ತೇವೆ. 3

1995 ರಲ್ಲಿ ಬಿಡುಗಡೆ ಆದಂತಹ ಬೆಳದಿಂಗಳ ಬಾಲೆ ಚಿತ್ರದಲ್ಲಿ ಕೂಡ ಪ್ರಮುಖ ಪಾತ್ರದಲ್ಲಿ ಇದ್ದವರು ಸುಮನ್ ನಗರ್ಕರ್ ಹಾಗೂ ಅನಂತನಾಗ್. ಈ ಚಿತ್ರದ ವಿಶೇಷತೆಯೇನೆಂದರೆ ಕೊನೆಯವರೆಗೂ ಕೂಡ ದೂರವಾಣಿ ಸಂಭಾಷಣೆಯಲ್ಲಿ ಮುಂದುವರೆಯುವಂತಹ ಈ ಚಿತ್ರದಲ್ಲಿ ಬೆಳದಿಂಗಳ ಬಾಲೆ ಯಾರು ಎನ್ನುವುದು ತಿಳಿಯುವುದಿಲ್ಲ. ಹೀಗೆ ಇಂತಹ ಥ್ರಿಲ್ಲರ್ ಚಿತ್ರಗಳ ಮೂಲಕ ಸುಮನ್ ನಗರ್ಕರ್ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಾರೆ.

ಇನ್ನು ಸುಮನ್ ನಗರ್ಕರ್ ರವರ ಕನ್ನಡ ಚಿತ್ರರಂಗದ ಜರ್ನಿ ಅನ್ನು ನೋಡುವುದಾದರೆ 1991 ರಲ್ಲಿ ಕಲ್ಯಾಣಮಂಟಪ ಎನ್ನುವ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಾರೆ. ಸುಮನ್ ನಗರ್ಕರ್ ರವರ ಪ್ರಮುಖ ಚಿತ್ರಗಳೆಂದರೆ ನಗುಮೊಗದ ಚೆಲುವೆ ನಿಷ್ಕರ್ಷ ಬೆಳದಿಂಗಳ ಬಾಲೆ ಅಮ್ಮಾವ್ರ ಗಂಡ ನಮ್ಮೂರ ಮಂದಾರ ಹೂವೆ ಹೂಮಳೆ ದೋಣಿಸಾಗಲಿ ಮುಂಗಾರಿನ ಮಿಂಚು ಪ್ರೀತಿಸು ಇತ್ಯಾದಿಗಳು.

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಿಡುವಿಲ್ಲದೆ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಕೊಂಡು ಬಂದಿದ್ದ ಸುಮನ್ ನಗರ್ಕರ್ ರವರು ಕನ್ನಡ ಚಿತ್ರರಂಗದಿಂದ ಸಂಪೂರ್ಣವಾಗಿ ಮಾಯವಾಗುತ್ತಾರೆ. ಅದಕ್ಕೆ ಮುಖ್ಯ ಕಾರಣ ಸುಮನ್ ನಗರ್ಕರ್ ರವರು ಗುರುದೇವ್ ನಾಗರಾಜ ರವರನ್ನು ವಿವಾಹವಾಗಿ ಸಂಪೂರ್ಣವಾಗಿ ಅಮೆರಿಕದಲ್ಲಿ ಸೆಟಲ್ ಆಗಿ ಮಕ್ಕಳಿಗೆ ಹಿಂದೂಸ್ತಾನಿ ಸಂಗೀತವನ್ನು ಕಲಿಸಲು ಆರಂಭಿಸುತ್ತಾರೆ. ಒಮ್ಮೆ ಕನ್ನಡ ಚಿತ್ರರಂಗದ ಮೇಷ್ಟ್ರು ಎಂದೆ ಖ್ಯಾತರಾಗಿರುವ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ರವರು ಅಮೆರಿಕಕ್ಕೆ ಹೋದಾಗ ತಮ್ಮ ಮುಂದಿನ ಚಿತ್ರ ಇಷ್ಟ ಕಾಮ್ಯದಲ್ಲಿ ನಟಿಸುವಂತೆ ಸುಮನ್ ನಗರ್ಕರ್ ಅವರಲ್ಲಿ ಕೇಳಿಕೊಳ್ಳುತ್ತಾರೆ.

suman nagarkar 1 | ನಿಷ್ಕರ್ಷ ಚಿತ್ರದ ಚಂದುಳ್ಳಿ ಚೆಲುವೆ ನಾಯಕಿ ಸುಮನ್ ನಗರ್ಕರ್ ಅವರು ಈಗ ಹೇಗಿದ್ದಾರೆ ಗೊತ್ತಾ?? ಮರೆತು ಹೋಗಿದ್ದರೇ ನೋಡಿ ಮೊದಲ ಬಾರಿಗೆ ತೋರಿಸ್ತೇವೆ.
ನಿಷ್ಕರ್ಷ ಚಿತ್ರದ ಚಂದುಳ್ಳಿ ಚೆಲುವೆ ನಾಯಕಿ ಸುಮನ್ ನಗರ್ಕರ್ ಅವರು ಈಗ ಹೇಗಿದ್ದಾರೆ ಗೊತ್ತಾ?? ಮರೆತು ಹೋಗಿದ್ದರೇ ನೋಡಿ ಮೊದಲ ಬಾರಿಗೆ ತೋರಿಸ್ತೇವೆ. 4

ಹೀಗಾಗಿ 15 ವರ್ಷಗಳ ನಂತರ ಮತ್ತೊಮ್ಮೆ ಇಷ್ಟಕಾಮ್ಯ ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ವಾಪಸ್ಸಾಗುತ್ತಾರೆ. ಇದಾದ ನಂತರ ಯಾವುದೇ ಹೀರೋಯಿನ್ ಅಥವಾ ಹೀರೋ ತಾಯಿಯ ಪಾತ್ರದಲ್ಲಿ ನಟಿಸುವುದಿಲ್ಲ ಬದಲಾಗಿ ಮುಖ್ಯಪಾತ್ರದಲ್ಲಿ ಮಾತ್ರ ನಟಿಸುತ್ತೇನೆ ಎಂಬುದಾಗಿ ತಮ್ಮ ಅಭಿಪ್ರಾಯವನ್ನು ಕೂಡ ಕನ್ನಡ ಚಿತ್ರರಂಗದ ನಿರ್ದೇಶಕರಲ್ಲಿ ಹೇಳಿಕೊಂಡಿದ್ದರು. ಒಟ್ಟಾರೆಯಾಗಿ ಸುಮನ್ ನಗರ್ಕರ್ ಅವರನ್ನು ಕನ್ನಡ ಸಿನಿಮಾಗಳಲ್ಲಿ ದೊಡ್ಡ ಪರದೆ ಮೇಲೆ ನೋಡಬೇಕು ಎಂದು ಅಭಿಲಾಷೆಯನ್ನು ವ್ಯಕ್ತಪಡಿಸಿದ್ದ ವರಿಗೆ ಅವರನ್ನು ಮತ್ತೆ ನೋಡಿ ಸಂತೋಷವಾಯಿತು ಎನ್ನುವುದಂತೂ ಸುಳ್ಳಲ್ಲ.

Comments are closed.