ತಾಯಿಯ ಬಗ್ಗೆ ಅದೊಂದು ಕೆಟ್ಟ ಬೈಗುಳ, 5 ವರ್ಷಗಳ ವಿಜಯದೇವರಕೊಂಡ ವಿರುದ್ಧ ಸೇಡು ತೀರಿಸಿಕೊಂಡ ನಟಿ ಅನಸೂಯಾ: ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಟ ವಿಜಯ್ ದೇವರಕೊಂಡ ನಟನೆಯ ಅನನ್ಯ ಪಾಂಡೆ ನಾಯಕಿಯಾಗಿ ನಟಿಸಿರುವ ಹಾಗೂ ಪುರಿ ಜಗನ್ನಾಥ್ ನಿರ್ದೇಶನದ ಲೈಗರ್ ಸಿನಿಮಾ ಮೊನ್ನೆ ಅಷ್ಟೇ ವಿಶ್ವದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಕಂಡಿತ್ತು. ಆದರೆ ಈ ಸಿನಿಮಾ ಪ್ರೇಕ್ಷಕರಲ್ಲಿ ಅತ್ಯಂತ ಕಳಪೆ ಪ್ರತಿಕ್ರಿಯೆಯನ್ನು ಪಡೆಯುವ ಮೂಲಕ ಸೋಲಿನ ಕಡೆಗೆ ಸಾಗುತ್ತಿದೆ. ಸಿನಿಮಾ ಬಿಡುಗಡೆಗು ಮುನ್ನ ವಿಜಯ್ ದೇವರಕೊಂಡ ಅವರು ನಾನೇ ಎಲ್ಲ ನನ್ನಿಂದಲೇ ಎಲ್ಲ ಎಂಬ ಮನೋಭಾವವನ್ನು ಹೊಂದಿದ್ದರು.

ಆದರೆ ಈಗ ಲೈಗರ್ ಸಿನಿಮಾಗೆ ಸಿಕ್ಕಿರುವ ಪ್ರತಿಕ್ರಿಯೆ ಈ ಸಿನಿಮಾ ಪಕ್ಕ ಫ್ಲಾಪ್ ಸಿನಿಮಾ ಎಂಬುದಾಗಿ ಎಲ್ಲರೂ ಕೂಡ ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಇದರ ಖುಷಿ ಸಿಕ್ಕಿರುವುದು ಈಗ ನಟಿ ಹಾಗೂ ನಿರೂಪಕಿ ಆಗಿರುವ ಅನುಸೂಯ ಭಾರದ್ವಾಜ್ ಅವರಿಗೆ. ಅರೆ ಇದೇನಿದು ನಟ ವಿಜಯ್ ದೇವರಕೊಂಡ ಅವರ ಸೋಲು ಇವರಿಗೆ ಹೇಗೆ ಸಂತೋಷವನ್ನು ತರುತ್ತದೆ ಎಂಬುದಾಗಿ ನೀವು ಭಾವಿಸಿರಬಹುದು. ಐದು ವರ್ಷದ ಹಿಂದೆ ಅರ್ಜುನ್ ರೆಡ್ಡಿ ಸಿನಿಮಾ ಬಿಡುಗಡೆಯಾದಾಗ ವಿಜಯ್ ದೇವರಕೊಂಡ ಅವರು ತಾಯಿಯ ಬಗ್ಗೆ ಬೈಗುಳವನ್ನು ಸಿನಿಮಾದಲ್ಲಿ ಹಾಗೂ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಕೂಡ ಉಪಯೋಗಿಸಿದ್ದರು. ಇದರ ಕುರಿತಂತೆ ಅನುಸೂಯ ಅವರು ಬಹಿರಂಗವಾಗಿಯೇ ಅಸಮಾಧಾನವನ್ನು ವ್ಯಕ್ತಪಡಿಸಿದಾಗ ಇದರ ಕುರಿತಂತೆ ಕ್ಷಮೆಯನ್ನಾಗಲಿ ಅಥವಾ ಈ ಬಗ್ಗೆ ಪ್ರತಿಕ್ರಿಯೆನ್ನಾಗಲಿ ನೀಡಿರಲಿಲ್ಲ.

anasuya | ತಾಯಿಯ ಬಗ್ಗೆ ಅದೊಂದು ಕೆಟ್ಟ ಬೈಗುಳ, 5 ವರ್ಷಗಳ ವಿಜಯದೇವರಕೊಂಡ ವಿರುದ್ಧ ಸೇಡು ತೀರಿಸಿಕೊಂಡ ನಟಿ ಅನಸೂಯಾ: ಹೇಳಿದ್ದೇನು ಗೊತ್ತೇ??
ತಾಯಿಯ ಬಗ್ಗೆ ಅದೊಂದು ಕೆಟ್ಟ ಬೈಗುಳ, 5 ವರ್ಷಗಳ ವಿಜಯದೇವರಕೊಂಡ ವಿರುದ್ಧ ಸೇಡು ತೀರಿಸಿಕೊಂಡ ನಟಿ ಅನಸೂಯಾ: ಹೇಳಿದ್ದೇನು ಗೊತ್ತೇ?? 2

ಆದರೆ ಈಗ ಲೈಗರ್ ಸಿನಿಮಾ ಸೋತಿರುವ ಬೆನ್ನಲ್ಲೇ ಅನುಸೂಯ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ತಾಯಿಯ ನೋವು ಮಾಗುದಿಲ್ಲ, ಕರ್ಮವೂ ಬರೋದೇ ಕಷ್ಟ ಆದರೆ ಖಂಡಿತ ಬಂದೇ ಬರುತ್ತದೆ. ಬೇರೆಯವರ ದುಃಖದಲ್ಲಿ ಸಂತೋಷವಾಗಲು ಇಷ್ಟಪಡುವುದಿಲ್ಲ ಆದರೆ ನಂಬಿಕೆ ಮರು ಸ್ಥಾಪಿಸಲಾಗಿದೆ ಎನ್ನುವ ತೃಪ್ತಿ ಇದೆ ಎಂಬುದಾಗಿ ಹೇಳಿದ್ದಾರೆ. ಇನ್ನೂ ಈ ಹೇಳಿಕೆ ನೀಡಿದ ನಂತರ ವಿಜಯ್ ದೇವರಕೊಂಡ ಅಭಿಮಾನಿಗಳು ಅನಸೂಯ ಅವರ ವಿರುದ್ಧ ಕಾಮೆಂಟ್ ಬಾಕ್ಸ್ ನಲ್ಲಿ ಮುಗಿಬಿದ್ದಿದ್ದಾರೆ. ಅದಕ್ಕೂ ಕೂಡ ಪ್ರತಿಕ್ರಿಯಿಸಿರುವ ಅನುಸೂಯ ನಿಮ್ಮ ಬೈಗುಳುಗಳನ್ನು ನಿಮ್ಮ ನೆಚ್ಚಿನ ನಾಯಕ ನಟನ ಮೇಲೆ ತಿರುಗಿಸುತ್ತಿದ್ದೇನೆ ಎಂಬುದಾಗಿ ಹೇಳಿದ್ದಾರೆ.

Comments are closed.