News from ಕನ್ನಡಿಗರು

ಹನಿಮೂನ್ ನಲ್ಲಿಯೇ ಹೆಚ್ಚಾಗಿ ಕಾಲ ಕಳೆಯುತ್ತಿರುವ ವಿಜ್ಞೇಶ್, ನಯನತಾರ ನಿಜಕ್ಕೂ ಖರ್ಚು ಮಾಡುತ್ತಿರುವುದು ಎಷ್ಟು ಗೊತ್ತೇ??

15

ನಮಸ್ಕಾರ ಸ್ನೇಹಿತರೇ ಈಗಾಗಲೇ ನೀವು ತಿಳಿದುಕೊಂಡಿರುವ ಹಾಗೆ ಕಾಲಿವುಡ್ ಸಿನಿಮಾ ರಂಗದ ಸ್ಟಾರ್ ಜೋಡಿಗಳಾಗಿರುವ ನಿರ್ದೇಶಕ ವಿಘ್ನೇಶ್ ಶಿವನ್ ಹಾಗೂ ಲೇಡಿ ಸೂಪರ್ ಸ್ಟಾರ್ ಆಗಿರುವ ನಯನತಾರಾ ರವರು ಇದೇ ಜೂನ್ 9ರಂದು ಮಹಾಬಲಿಪುರಂನ ಪ್ರತಿಷ್ಠಿತ ರೆಸಾರ್ಟ್ ಒಂದರಲ್ಲಿ ಸೆಲಬ್ರೆಟಿಗಳ ಸಮ್ಮುಖದಲ್ಲಿ ಮದುವೆ ಆಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಇವರಿಬ್ಬರು ಹಲವಾರು ವರ್ಷಗಳ ಲಿವಿಂಗ್ ಟುಗೆದರ್ ರಿಲೇಶನ್ಶಿಪ್ ನಂತರ ಮದುವೆಯಾಗುವ ನಿರ್ಧಾರ ಮಾಡಿದ್ದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ಮದುವೆಯ ಮುನ್ನ ಎಷ್ಟು ಸುದ್ದಿ ಆಗಿದ್ದರೋ, ಮದುವೆಯಾದ ನಂತರವೂ ಕೂಡ ಈಗ ಅಷ್ಟೇ ಸುದ್ದಿಯಲ್ಲಿದ್ದಾರೆ. ಮದುವೆ ಆದ ನಂತರ ಹಲವಾರು ಧಾರ್ಮಿಕ ದೇವಸ್ಥಾನ ಕ್ಷೇತ್ರಗಳಿಗೆ ಭೇಟಿ ಕೊಟ್ಟ ದಂಪತಿಗಳು ನಂತರ ಥೈಲ್ಯಾಂಡ್ ಗೆ ಹನಿಮೂನ್ ಗೆ ಹೋಗಿದ್ದರು. ಇದಾದ ನಂತರ ನಯನತಾರ ರವರು ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದ ಚಿತ್ರೀಕರಣಕ್ಕೆ ಭಾರತಕ್ಕೆ ಮತ್ತೆ ವಾಪಸಾಗಿ ಚಿತ್ರಿಕರಣವನ್ನು ಮುಗಿಸಿಕೊಂಡು ಇಬ್ಬರು ದಂಪತಿಗಳು ಕೂಡ ಈಗ ಮತ್ತೆ ಸ್ಪೇನ್ ದೇಶದ ಬಾರ್ಸಿಲೋನಾಗೆ ಮತ್ತೆ ಹನಿಮೂನ್ ಗಾಗಿ ತೆರಳಿದ್ದಾರೆ. ಬಾರ್ಸಿಲೋನಾ ದೇಶದ ಹಲವಾರು ಸುಂದರ ತಾಣಗಳಲ್ಲಿ ಇವರಿಬ್ಬರು ಫೋಟೋ ತೆಗೆಸಿಕೊಂಡಿರುವುದು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇಷ್ಟೊಂದು ಐಷಾರಾಮಿ ಪ್ರವಾಸವನ್ನು ಮಾಡುತ್ತಿರುವುದು ನಿಜಕ್ಕೂ ಕೂಡ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.

ಯಾಕೆಂದರೆ ಇವರು ತಂಗುವ ಹೋಟೆಲ್ ಬಾಡಿಗೆ ಒಂದು ರಾತ್ರಿಗೆ 2.50 ಲಕ್ಷಕ್ಕೂ ಅಧಿಕ ಎಂಬುದಾಗಿ ತಿಳಿದು ಬಂದಿದೆ. ಹೀಗಾಗಿ ಸುದ್ದಿಮೂಲಗಳ ಪ್ರಕಾರ ಇವರ ಹನಿಮೂನ್ ಅನ್ನು ಯಾವುದೋ ಪ್ರತಿಷ್ಠಿತ ಹಾಗೂ ಲಕ್ಜುರಿಯಸ್ ಸಂಸ್ಥೆ ಸ್ಪಾನ್ಸರ್ ಮಾಡಿದೆ ಎಂಬುದಾಗಿ ತಿಳಿದು ಬಂದಿದೆ. ಎಲ್ಲರೂ ಕೂಡ ಇದೇ ರೀತಿಯಲ್ಲಿ ಅಂದುಕೊಂಡಿದ್ದು ಇದರ ಕುರಿತಂತೆ ಯಾವುದೇ ಅಧಿಕೃತ ಮಾಹಿತಿಗಳು ಹೊರ ಬಂದಿಲ್ಲ ಆದರೂ ಕೂಡ ಬಹುತೇಕ ಮೂಲಗಳು ಇದು ಸ್ಪಾನ್ಸರ್ ಆಗಿರುವ ಹನಿಮೂನ್ ಪ್ರವಾಸ ಎಂಬುದಾಗಿ ಮಾತನಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ನಮ್ಮೊಂದಿಗೆ ಶೇರ್ ಮಾಡಿಕೊಳ್ಳಿ.

Leave A Reply

Your email address will not be published.