News from ಕನ್ನಡಿಗರು

ಮಧ್ಯಮ ವರ್ಗದವರಿಗೆ ಸಿಹಿ ಸುದ್ದಿ ಕೊಟ್ಟ ಅಂಚೆ ಇಲಾಖೆ: ಜಸ್ಟ್ 1500 ಇಟ್ಟು 35 ಲಕ್ಷ ವಾಪಾಸ್ ತೆಗೆದುಕೊಳ್ಳುವುದು ಹೇಗೆ ಗೊತ್ತೇ??

0 28

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಉಳಿತಾಯ ಮಾಡುವುದು ಅನಿವಾರ್ಯವಾಗಿದೆ. ಯಾವ ಸಂದರ್ಭ ಹೇಗೆ ಇರುತ್ತದೆ ಎಂದು ಊಹಿಸಿಕೊಳ್ಳಲು ಕೂಡ ಸಾಧ್ಯವಿಲ್ಲ ಹೀಗಾಗಿ ಕೆಲಸ ಮಾಡುವಷ್ಟು ದಿನ ಉಳಿತಾಯದ ಕುರಿತಂತೆ ಪ್ರತಿಯೊಬ್ಬರು ಕೂಡ ಯೋಚನೆ ಮಾಡಬೇಕಾಗುತ್ತದೆ. ಒಂದು ವೇಳೆ ನೀವು ಅಂಚೆ ಕಚೇರಿಯಲ್ಲಿ ಖಾತೆಯನ್ನು ಹೊಂದಿದ್ದರೆ ನಿಮಗೆ 35 ಲಕ್ಷ ರೂಪಾಯಿವರೆಗೆ ಉಳಿತಾಯ ಮಾಡುವಂತಹ ಯೋಜನೆ ಒಂದು ಇಲ್ಲಿದೆ. ಪೋಸ್ಟ್ ಆಫೀಸ್ ನ ಈ ಯೋಜನೆ ಸಾಕಷ್ಟು ಸುರಕ್ಷಿತವಾಗಿದ್ದು ಇಲ್ಲಿ ನೀವು ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳಲಿದ್ದೀರಿ.

ಪೋಸ್ಟ್ ಆಫೀಸ್ ಗ್ರಾಮ ಸುರಕ್ಷಾ ಯೋಜನೆ ಇದೊಂದು ರೀತಿಯ ವಿಮಾ ಯೋಜನೆಯಾಗಿದ್ದು ಪ್ರತಿ ತಿಂಗಳು ನೀವು 1500 ರೂಪಾಯಿಗಳಷ್ಟು ಹೂಡಿಕೆ ಮಾಡಬೇಕಾಗುತ್ತದೆ. ಇದಕ್ಕೆ ನೀವು ಪ್ರತಿಯಾಗಿ 35 ಲಕ್ಷ ರೂಪಾಯಿಗಳನ್ನು ಪಡೆದುಕೊಳ್ಳಲಿದ್ದೀರಿ. ಇದು ಅಂಚೆ ಕಚೇರಿಯ ವಿಮಾ ಯೋಜನೆಯಾಗಿದ್ದು, ಈ ಯೋಜನೆಯಲ್ಲಿ ಹೂಡಿಕೆ ಮಾಡಲು 19 ವರ್ಷದಿಂದ 55 ವರ್ಷದ ವ್ಯಕ್ತಿಗಳಿಗೆ ಅವಕಾಶ ಇರಲಿದೆ. ಈ ಯೋಜನೆಯಲ್ಲಿ ಕನಿಷ್ಠ ವಿಮಾ ಮೊತ್ತ 10,000 ಆಗಿದೆ. ಗರಿಷ್ಠ 10 ಲಕ್ಷ ರೂಪಾಯಿಗಳವರೆಗೆ ಇದೆ. ಇಲ್ಲಿ ನೀವು ತಿಂಗಳಿಗೆ ಅಥವಾ ಮೂರು ತಿಂಗಳಿಗೆ, ಆರು ತಿಂಗಳಿಗೆ ಮತ್ತು ವರ್ಷಕ್ಕೆ ಒಮ್ಮೆ ಕೂಡ ಪ್ರೀಮಿಯಂ ಕಟ್ಟಬಹುದಾಗಿದೆ. ಪ್ರೀಮಿಯಂ ಪಾವತಿಯ ಮೇಲೆ 30 ದಿನಗಳ ರಿಯಾಯಿತಿ ಕೂಡ ಸಿಗಲಿದೆ‌.

ಪಾಲಿಸಿಯನ್ನು ತೆಗೆದುಕೊಂಡ ನಂತರ ನಾಲ್ಕು ವರ್ಷಗಳ ಮೇಲೆ ನೀವು ಸಾಲ ಸೌಲಭ್ಯವನ್ನು ಕೂಡ ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ 19 ವರ್ಷದವರು ಇರಬೇಕಾದರೆ ಹೂಡಿಕೆ ಮಾಡಲು ಪ್ರಾರಂಭಿಸಿದರೆ ನೀವು 55 ವರ್ಷದ ಸಂದರ್ಭದಲ್ಲಿ 31.60.ಲಕ್ಷ ರೂಪಾಯಿಯ ಮೆಚುರಿಟಿ ಲಾಭ ಸಿಗುತ್ತದೆ. 58 ವರ್ಷದ ಸಂದರ್ಭದಲ್ಲಿ 33.40 ಲಕ್ಷ ಹಾಗೂ 60 ವರ್ಷದ ಹೊತ್ತಿಗೆ 34.60 ಲಕ್ಷ ರೂಪಾಯಿ ಸಿಗಲಿದೆ. ಮೂರು ವರ್ಷ ಆದ ನಂತರ ಈ ಯೋಜನೆಯನ್ನು ಸರಂಡರ್ ಕೂಡ ಮಾಡಬಹುದಾಗಿದೆ.

Leave A Reply

Your email address will not be published.