ಕೊನೆ ಕ್ಷಣದಲ್ಲಿ ರಿಷಬ್ ಪಂತ್ ಬದಲು ದಿನೇಶ್ ಕಾರ್ತಿಕ್ ರವರನ್ನು ಆಯ್ಕೆ ಮಾಡಿದ್ದು ಯಾಕೆ ಗೊತ್ತೇ? ರೋಹಿತ್ ಬಿಚ್ಚಿಟ್ಟ ರಹಸ್ಯವೇನು ಗೊತ್ತೆ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಿನ್ನೆ ನಡೆದಿರುವ ಏಷ್ಯಾಕಪ್ ಟೂರ್ನಮೆಂಟ್ ನಲ್ಲಿ ನಡೆದ ಎರಡನೇ ಪಂದ್ಯಾಟದಲ್ಲಿ ಭಾರತೀಯ ಕ್ರಿಕೆಟ್ ತಂಡ ಸಾಂಪ್ರದಾಯಕ ಎದುರಾಳಿ ಆಗಿರುವ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ರೋಚಕ ಪಂದ್ಯದಲ್ಲಿ ಮಣಿಸಿದೆ. ಸಾಮಾನ್ಯವಾಗಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಾಟ ಎಂದರೆ ರೋಚಕತೆಯಿಂದ ಕೂಡಿರುತ್ತದೆ ಇಲ್ಲಿ ಕೂಡ ಹಾಗೆ ನಡೆದಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ರೋಹಿತ್ ಶರ್ಮಾ ನಾಯಕತ್ವದ ಭಾರತೀಯ ಕ್ರಿಕೆಟ್ ತಂಡ ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಮೊದಲು ಬ್ಯಾಟಿಂಗ್ ಗೆ ಇಳಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಪಾಕ್ ಭುವನೇಶ್ವರ್ ಕುಮಾರ್ ಹಾಗೂ ಹಾರ್ದಿಕ್ ಪಾಂಡ್ಯ ರವರ ಬೌಲಿಂಗ್ ದಾಳಿಗೆ ಕನಲಿ 147 ರನ್ನುಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರ ಎಂಬಂತೆ ಭಾರತೀಯ ಕ್ರಿಕೆಟ್ ತಂಡ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಹಾಗೂ ಹಾರ್ದಿಕ ಪಾಂಡ್ಯ ರವರ ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗೆಲ್ಲಲು ಯಶಸ್ವಿಯಾಯಿತು. ಇನ್ನು ನೀವು ಪಂದ್ಯಾಟವನ್ನು ಗಮನಿಸಿದರೆ ಸ್ಟಾರ್ ಆಟಗಾರ ರಿಶಭ್ ಪಂತ್ ರವರ ಬದಲಿಗೆ ಫಿನಿಶರ್ ದಿನೇಶ್ ಕಾರ್ತಿಕ್ ರವರನ್ನು ತಂಡದ ಆಡುವ ಬಳಗದಲ್ಲಿ ಆಯ್ಕೆ ಮಾಡಲಾಗಿತ್ತು. ಇದರ ಬಗ್ಗೆ ರೋಹಿತ್ ಶರ್ಮಾ ನೀಡಿರುವ ಕಾರಣಗಳೇನೆಂಬುದನ್ನು ತಪ್ಪದೇ ತಿಳಿದುಕೊಳ್ಳೋಣ ಬನ್ನಿ.

pant dk | ಕೊನೆ ಕ್ಷಣದಲ್ಲಿ ರಿಷಬ್ ಪಂತ್ ಬದಲು ದಿನೇಶ್ ಕಾರ್ತಿಕ್ ರವರನ್ನು ಆಯ್ಕೆ ಮಾಡಿದ್ದು ಯಾಕೆ ಗೊತ್ತೇ? ರೋಹಿತ್ ಬಿಚ್ಚಿಟ್ಟ ರಹಸ್ಯವೇನು ಗೊತ್ತೆ??
ಕೊನೆ ಕ್ಷಣದಲ್ಲಿ ರಿಷಬ್ ಪಂತ್ ಬದಲು ದಿನೇಶ್ ಕಾರ್ತಿಕ್ ರವರನ್ನು ಆಯ್ಕೆ ಮಾಡಿದ್ದು ಯಾಕೆ ಗೊತ್ತೇ? ರೋಹಿತ್ ಬಿಚ್ಚಿಟ್ಟ ರಹಸ್ಯವೇನು ಗೊತ್ತೆ?? 2

ಈ ಬಗ್ಗೆ ಟಾಸ್ ಸಂದರ್ಭದಲ್ಲಿ ರೋಹಿತ್ ಶರ್ಮಾ ಮಾತನಾಡಿದ್ದು, ಮುಂದೆ ರನ್ ನ ಗುರಿ ಇದ್ದರೆ ಆಯ್ಕೆ ಉತ್ತಮ ಆಗಿರುತ್ತದೆ ಎಂಬುದಾಗಿ ಭಾವಿಸಿದ್ದೆವು. ದುರದೃಷ್ಟವಶಾತ್ ರಿಶಭ್ ಪಂತ್ ಪಂದ್ಯ ತಪ್ಪಿಸಿಕೊಳ್ಳಲಿದ್ದು ಅವರ ಬದಲಿಗೆ ದಿನೇಶ್ ಕಾರ್ತಿಕ್ ಆಡಲಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಅಂದರೆ ಟಾಸ್ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ಆಯ್ಕೆ ಮಾಡಲಾಗಿದೆ ಎಂಬುದಾಗಿ ಅರ್ಥೈಸಿಕೊಳ್ಳಬಹುದಾಗಿದೆ.

Comments are closed.