ಕಿಸ್ಸಿಂಗ್ ಸೀನ್ ನಲ್ಲಿ ನಟಿಸುವ ಕುರಿತು ಮತ್ತೊಂದು ಷಾಕಿಂಗ್ ಹೇಳಿಕೆ ಕೊಟ್ಟ ಖ್ಯಾತ ನಟಿ ಅನುಪಮಾ ಹೇಳಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ತಮ್ಮ ಹೊಸ ಹೊಸ ಸಿನಿಮಾಗಳಿಂದ ಸದ್ದು ಮಾಡುತ್ತಿರುವ ನಟಿ ಅನುಪಮಾ ಪರಮೇಶ್ವರನ್ ಅವರ ಕುರಿತಂತೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅದರಲ್ಲೂ ಕನ್ನಡ ಚಿತ್ರರಂಗದ ಪ್ರೇಕ್ಷಕರಿಗೂ ಕೂಡ ಅವರು ಒಂದೇ ಒಂದು ಸಿನಿಮಾದಿಂದ ಚಿರಪರಿಚಿತರಾಗಿದ್ದಾರೆ. ಅನುಪಮಾ ಪರಮೇಶ್ವರನ್ ಅವರು ಕನ್ನಡ ಚಿತ್ರರಂಗದಲ್ಲಿ ನಟಿಸಿರುವುದು ಒಂದೇ ಒಂದು ಸಿನಿಮಾ. ಅದು ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ನಟಸಾರ್ವಭೌಮ ಚಿತ್ರದಲ್ಲಿ. ಕೆಲವೇ ಕೆಲವು ಸಮಯಗಳು ತಮ್ಮ ನಟನೆಯ ಮೂಲಕ ಅತ್ಯಂತ ಹೆಚ್ಚಿನ ಮಟ್ಟದ ಅಭಿಮಾನಿ ಬಳಗವನ್ನು ತಮ್ಮತ್ತ ಸೆಳೆದುಕೊಂಡ ನಟಿಯಾಗಿದ್ದಾರೆ ಇವರು.

ಸಾಮಾನ್ಯವಾಗಿ ಸಾಂಪ್ರದಾಯಿಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಅನುಪಮಾ ಪರಮೇಶ್ವರಂ ತಮ್ಮ ಸಾಂಪ್ರದಾಯಿಕ ನಟನೆ ಹಾಗೂ ಲುಕ್ ಗಳಿಗೆ ಅಭಿಮಾನಿಗಳಿಗೆ ಇಷ್ಟವಾಗುತ್ತಾರೆ. ಆದರೆ ಇತ್ತೀಚಿಗಷ್ಟೇ ಈ ಮಲಯಾಳಿ ಬೆಡಗಿ ರೌಡಿ ಬಾಯ್ ಎನ್ನುವ ಸಿನಿಮಾದಲ್ಲಿ ಗ್ಲಾಮರಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ಇದು ಅಗತ್ಯಕ್ಕಿಂತ ಹೆಚ್ಚಾದ ಗ್ಲಾಮರ್ ಎಂಬ ಅಭಿಪ್ರಾಯ ಮೂಡುವಂತೆ ಮಾಡಿ. ಅನುಪಮಾ ಪರಮೇಶ್ವರಂ ಈ ಸಿನಿಮಾದಲ್ಲಿ ಚುಂಬನ ದೃಶ್ಯಗಳಲ್ಲಿ ಕೂಡ ಕಾಣಿಸಿಕೊಂಡಿರುವುದು ಅವರನ್ನು ಟ್ರೆಡಿಷನಲ್ ಪಾತ್ರದಲ್ಲೇ ನೋಡಿಕೊಂಡು ಬರುತ್ತಿದ್ದ ಅಭಿಮಾನಿಗಳಿಗೆ ಇದು ಕೊಂಚಮಟ್ಟಿಗೆ ಇರಿಸಿ ಮುರಿಸು ಆಗಿದ್ದು ಟ್ರೋಲ್ ಕೂಡ ಮಾಡಿದ್ದಾರೆ. ಇದರ ಬಗ್ಗೆ ಅನುಪಮಾ ಪರಮೇಶ್ವರನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

anu 2 | ಕಿಸ್ಸಿಂಗ್ ಸೀನ್ ನಲ್ಲಿ ನಟಿಸುವ ಕುರಿತು ಮತ್ತೊಂದು ಷಾಕಿಂಗ್ ಹೇಳಿಕೆ ಕೊಟ್ಟ ಖ್ಯಾತ ನಟಿ ಅನುಪಮಾ ಹೇಳಿದ್ದೇನು ಗೊತ್ತೇ?
ಕಿಸ್ಸಿಂಗ್ ಸೀನ್ ನಲ್ಲಿ ನಟಿಸುವ ಕುರಿತು ಮತ್ತೊಂದು ಷಾಕಿಂಗ್ ಹೇಳಿಕೆ ಕೊಟ್ಟ ಖ್ಯಾತ ನಟಿ ಅನುಪಮಾ ಹೇಳಿದ್ದೇನು ಗೊತ್ತೇ? 2

ನಾನೇ ಬೇಕು ಎಂದು ಈ ದೃಶ್ಯಗಳಲ್ಲಿ ನಟಿಸಿಲ್ಲ ಬದಲಾಗಿ ಈ ದೃಶ್ಯದಲ್ಲಿ ಚುಂಬನದ ಅಗತ್ಯವಿತ್ತು ಹೀಗಾಗಿ ಚುಂಬನದ ದೃಶ್ಯಗಳಲ್ಲಿ ನಾನು ನಟಿಸಿದ್ದೇನೆ ಎಂಬುದಾಗಿ ಅನುಪಮಾ ಪರಮೇಶ್ವರನ್ ಹೇಳಿದ್ದಾರೆ. ನಟಿಯಾಗಿ ಇನ್ನೂ ಎತ್ತರಕ್ಕೆ ಬೆಳೆಯುವ ಹಂಬಲ ನನ್ನಲ್ಲಿದೆ ಹೀಗಾಗಿ ಹಲವಾರು ಪ್ರಯೋಗಗಳನ್ನು ಕೂಡ ಮಾಡುತ್ತಿದ್ದೇನೆ ವಿಭಿನ್ನವಾದ ಪಾತ್ರಗಳಲ್ಲಿ ನಟಿಸಬೇಕು ಎನ್ನುವುದು ನನ್ನ ಆಸೆ ಎಂಬುದಾಗಿ ಅನುಪಮಾ ಪರಮೇಶ್ವರನ್ ಹೇಳಿದ್ದಾರೆ. ಇತ್ತೀಚೆಗಷ್ಟೇ ಅವರು ನಟಿಸಿರುವ ಕಾರ್ತಿಕೇಯ 2 ಸಿನಿಮಾ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ದಾಖಲೆಯ ಮಟ್ಟದ ಯಶಸ್ಸನ್ನು ಗಳಿಸಿತ್ತು. ಯಾವುದೇ ಭಾಷೆಯಲ್ಲಿ ಕೂಡ ನಟಿಸಲು ನನಗೆ ಅಭ್ಯಂತರ ಇಲ್ಲ ಎಂಬುದಾಗಿ ಅನುಪಮಾ ಪರಮೇಶ್ವರನ್ ಈ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ ಎಂಬುದನ್ನು ಕೂಡ ನಾವು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

Comments are closed.