ಕರುನಾಡಿನ ಕುವರ ರಾಯನ್ ಸರ್ಜಾ ರವರ ಕೈಯಲ್ಲಿ ರಾಷ್ಟ್ರಧ್ವಜ: ಪುಟ್ಟ ಕೈಗಳಲ್ಲಿ ಧ್ವಜ ಹಿಡಿದು ಸಂಭ್ರಮಿಸಿದ ವಿಡಿಯೋ ನೋಡ್ದಿದ್ದೀರಾ??

ನಮಸ್ಕಾರ ಸ್ನೇಹಿತರೆ ಆಗಸ್ಟ್ 15 ನಮ್ಮ ಭಾರತ ದೇಶ ಸ್ವಾತಂತ್ರ್ಯ ಪಡೆದು 75 ವರ್ಷಗಳನ್ನು ಪೂರೈಸಿದ ಶುಭ ದಿನವಾಗಿದೆ. ಈಗಾಗಲೇ ನೀವು ನೋಡಿರುವಂತೆ ಸೆಲೆಬ್ರಿಟಿಗಳು 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ವಿಶೇಷವಾಗಿ ಹಾಗೂ ಅರ್ಥಪೂರ್ಣವಾಗಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ್ದಾರೆ.

ಇನ್ನು ಇದಕ್ಕೆ ನಟಿ ಮೇಘನಾ ರಾಜ್ ಕೂಡ ಹೊರತಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಿನಿಮಾ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಸಾಕಷ್ಟು ಸಕ್ರಿಯರಾಗಿರಿಸಿಕೊಂಡಿರುವ ಮೇಘನಾ ರಾಜ್ ರವರು ಆಗಾಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಜೀವನದ ಕುರಿತಂತೆ ಒಂದಲ್ಲ ಒಂದು ಫೋಟೋ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅದರಲ್ಲೂ ವಿಶೇಷವಾಗಿ ತಮ್ಮ ಮಗ ರಾಯನ್ ರಾಜ್ ಸರ್ಜಾ ಬಗ್ಗೆ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಜೂನಿಯರ್ ಚಿರು ಸರ್ಜಾ ಈಗಾಗಲೇ ಸ್ಯಾಂಡಲ್ವುಡ್ ಚಿತ್ರರಂಗದ ಸೆಲೆಬ್ರಿಟಿ ಕಿಡ್ ಎಂಬ ಪಟ್ಟಕ್ಕೆ ಸೇರಿಕೊಂಡಾಗಿದೆ. ಮೇಘನಾ ರಾಜ್ ರವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕೂಡ ಅವರಿಗಿಂತ ಹೆಚ್ಚಾಗಿ ಜೂನಿಯರ್ ಚಿರು ಸರ್ಜಾ ಅವರ ಫೋಟೋ ಹಾಗೂ ವಿಡಿಯೋಗಳಿಗಾಗಿ ಅಭಿಮಾನಿಗಳು ಕಾಯುತ್ತಿರುತ್ತಾರೆ.

raayan | ಕರುನಾಡಿನ ಕುವರ ರಾಯನ್ ಸರ್ಜಾ ರವರ ಕೈಯಲ್ಲಿ ರಾಷ್ಟ್ರಧ್ವಜ: ಪುಟ್ಟ ಕೈಗಳಲ್ಲಿ ಧ್ವಜ ಹಿಡಿದು ಸಂಭ್ರಮಿಸಿದ ವಿಡಿಯೋ ನೋಡ್ದಿದ್ದೀರಾ??
ಕರುನಾಡಿನ ಕುವರ ರಾಯನ್ ಸರ್ಜಾ ರವರ ಕೈಯಲ್ಲಿ ರಾಷ್ಟ್ರಧ್ವಜ: ಪುಟ್ಟ ಕೈಗಳಲ್ಲಿ ಧ್ವಜ ಹಿಡಿದು ಸಂಭ್ರಮಿಸಿದ ವಿಡಿಯೋ ನೋಡ್ದಿದ್ದೀರಾ?? 2

ಇನ್ನು ಈಗ ಆಗಸ್ಟ್ 15ರಂದು ಮೇಘನಾ ರಾಜ್ ರವರು ತಮ್ಮ ಪುತ್ರ ಜೂನಿಯರ್ ಚಿರು ಸರ್ಜಾ ಅವರ ಜೊತೆಗೆ ಸ್ವಾತಂತ್ರ್ಯೋತ್ಸವವನ್ನು ಆಚರಿಸಿಕೊಂಡಿರುವ ಸ್ಪೆಷಲ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ರಾಯನ್ ರಾಜ್ ಸರ್ಜಾ ತನ್ನ ಪುಟ್ಟ ಕೈಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಿರುವುದು ನಿಜಕ್ಕೂ ಕೂಡ ನೋಡಲು ಎರಡು ಕಂಗಳು ಸಾಲದು ಎಂಬುದಾಗಿ ಅಭಿಮಾನಿಗಳು ಪ್ರತಿಕ್ರಿಸಿದ್ದಾರೆ. ನೀವು ಕೂಡ ರಾಯನ್ ರಾಜ್ ಸರ್ಜಾ ಸ್ವಾತಂತ್ರ್ಯ ದಿನಾಚರಣೆಯನ್ನು ಧ್ವಜವನ್ನು ಹಿಡಿದುಕೊಳ್ಳುವ ಮೂಲಕ ಆಚರಿಸಿರುವ ವಿಡಿಯೋವನ್ನು ಇಲ್ಲಿ ನೋಡಬಹುದಾಗಿದ್ದು ನಿಮ್ಮ ಅಭಿಪ್ರಾಯಗಳನ್ನು ಕೂಡ ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Comments are closed.