ಬೆಂಗಳೂರು ಫುಟ್ಬಾಲ್ ಕ್ಲಬ್ BFC ವಿರುದ್ಧ ಅಸಮಾಧಾನಗೊಂಡ ಅಪ್ಪು ಹಾಗೂ ದರ್ಶನ್ ಅಭಿಮಾನಿಗಳು ಯಾಕೆ ಗೊತ್ತೆ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕ್ರಿಕೆಟ್ ಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಇರುವ ಹಾಗೆ ಫುಟ್ಬಾಲ್ ಗಾಗಿ ಭಾರತದಲ್ಲಿ ಐಎಸ್ಎಲ್ ಕೂಡ ಇದೆ. ಐಪಿಎಲ್ ನಲ್ಲಿ ನಮ್ಮ ಕನ್ನಡಿಗರು ಹೆಚ್ಚಾಗಿ ಇಷ್ಟಪಡುವ ಕ್ರಿಕೆಟ್ ತಂಡ ಎಂದರೆ ಚಾಲೆಂಜರ್ಸ್ ಬೆಂಗಳೂರು ತಂಡ. ಅದೇ ರೀತಿ ಫುಟ್ಬಾಲ್ ನಲ್ಲಿ ಬೆಂಗಳೂರು ಫುಟ್ಬಾಲ್ ಕ್ಲಬ್ ಅಂದರೆ ಬಿ ಎಫ್ ಸಿ ತಂಡದ ಮೇಲೆ ಕನ್ನಡಿಗರು ತಮ್ಮ ಪ್ರೀತಿ ಹಾಗೂ ಗೌರವಗಳನ್ನು ಇಟ್ಟಿದ್ದಾರೆ.
ಆದರೆ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಬಿ ಎಫ್ ಸಿ ಮೇಲೆ ತಮ್ಮ ಕೆಂಗಣ್ಣನ್ನು ತೋರಿದ್ದಾರೆ. ಹೌದು ಇತ್ತೀಚಿಗಷ್ಟೇ ರಕ್ಷಿತ್ ಶೆಟ್ಟಿ, ಕಿಚ್ಚ ಸುದೀಪ್ ಹಾಗೂ ರಾಕಿಂಗ್ ಸ್ಟಾರ್ ಯಶ್ ರವರು ಬೆಂಗಳೂರು ಎಫ್ ಸಿ ಯ ಜರ್ಸಿ ತೊಟ್ಟಿರುವ ಫೋಟೋವನ್ನು ಡಿಸೈನ್ ಮಾಡಿ ಇವರು ಮೂವರಂತೆ ಬೇರೆ ಯಾರು ಇಲ್ಲ ಎಂಬುದಾಗಿ ಕ್ಯಾಪ್ಶನ್ ಹಾಕಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ನೋಡಿ ಈ ಮೂರು ನಾಯಕ ನಟರ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಲೈಕ್ ಮಾಡಿ ಶೇರ್ ಮಾಡಿದ್ದರು. ಆದರೆ ಇಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಪ್ಪು ಅಭಿಮಾನಿಗಳು ಮಾತ್ರ ಬೇಸರವನ್ನು ವ್ಯಕ್ತಪಡಿಸುತ್ತಾರೆ.
ಇಬ್ಬರು ನಟರ ಅಭಿಮಾನಿಗಳು ಯಾಕೆ ನಮ್ಮ ಹೀರೋ ಇಲ್ವಾ ಎಂಬುದಾಗಿ ಬೆಂಗಳೂರು ಎಫ್ ಸಿ ತಂಡವನ್ನು ಸೋಶಿಯಲ್ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹಿಂದೆ ದರ್ಶನ್ ಅವರ ಸೋಲೊ ಫೋಟೋವನ್ನು ಶೇರ್ ಮಾಡಿದ್ದರೂ ಹೀಗಾಗಿ ಅವರ ಅಭಿಮಾನಿಗಳು ಸಿಂಹನ ಯಾವತ್ತೂ ಸಿಂಗಲ್ ಆಗಿನೇ ತೋರಿಸುವುದು ಎನ್ನುವುದಾಗಿ ಕೆಲವರು ಬರೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಬೆಂಗಳೂರು ಎಫ್ ಸಿ ಮಾಡಿರುವ ಈ ಪೋಸ್ಟನ್ನು ದರ್ಶನ್ ಹಾಗೂ ಅಪ್ಪು ಅಭಿಮಾನಿಗಳು ಡಿಲೀಟ್ ಮಾಡುವಂತೆ ಕಾಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.
Comments are closed.