ಶಾರುಖ್ ಮಗನ ಕುರಿತು ಮತ್ತೊಂದು ವಿಚಾರ ಬಹಿರಂಗ. ವಿಚಾರ ಕೇಳಿ ಶಾಕ್ ಆದ ಫ್ಯಾನ್ಸ್. ಪಾಕ್ ನಟಿಯ ಜೊತೆ…
ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದ ಕಿಂಗ್ ಖಾನ್ ಶಾರುಖ್ ಖಾನ್ ಅವರು ಕೇವಲ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಕೂಡ ಅಭಿಮಾನಿಗಳನ್ನು ಹೊಂದಿರುವ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದಾರೆ. ಇಡೀ ವಿಶ್ವದ ಅತ್ಯಂತ ಶ್ರೀಮಂತ ನಟರ ಸಾಲಿನಲ್ಲಿ ಕೂಡ ಶಾರುಖ್ ಖಾನ್ ರವರು ಕಂಡು ಬರುತ್ತಾರೆ. ಆದರೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡುತ್ತಿರುವುದು ಶಾರುಖ್ ಖಾನ್ ಅವರ ಕುರಿತಂತೆ ಅಲ್ಲ ಬದಲಾಗಿ ಅವರ ಮಗ ಆಗಿರುವ ಆರ್ಯನ್ ಖಾನ್ ಅವರ ಕುರಿತಂತೆ.
ಆರ್ಯನ್ ಖಾನ್ ಅವರ ಕುರಿತಂತೆ ಮಾತನಾಡುತ್ತಿದ್ದೇವೆ ಅಂದ ಮಾತ್ರಕ್ಕೆ ನೀವು ಈಗಾಗಲೇ ಅವರು ಸುದ್ದಿಯಾಗಿರುವ ಬೇರೆ ವಿಚಾರದ ಕುರಿತಂತೆ ಅಲ್ಲ ಬದಲಾಗಿ ಒಂದು ಹೊಸ ವಿಚಾರದ ಬಗ್ಗೆ ಈಗ ಮಾತನಾಡಲು ಹೊರಟಿರುವುದು. ಹೌದು ಇತ್ತೀಚಿಗಷ್ಟೇ ಆರ್ಯನ್ ಖಾನ್ ಅವರ ಹೊಸ ಫೋಟೋಶೂಟ್ ಮಾಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದಾದ ಮರುಕ್ಷಣವೇ ಪಾಕಿಸ್ತಾನದ ನಟಿ ಆಗಿರುವ ಸಜಲ್ ಅವರಿಗೆ ಆರ್ಯಾನ್ ಖಾನ್ ಅವರ ಮೇಲೆ ಲವ್ ಆದಂತೆ ಕಾಣಿಸುತ್ತಿದೆ. ಈ ಫೋಟೋಗಳನ್ನು ಹಂಚಿಕೊಂಡು ರೋಮ್ಯಾಂಟಿಕ್ ಸಾಂಗ್ ಅನ್ನು ಹಾಕಿ ಆರ್ಯನ್ ಖಾನ್ ಇಷ್ಟ ಎನ್ನುವಂತೆ ಸಜಲ್ ಪೋಸ್ಟ್ ಮಾಡಿದ್ದಾರೆ.
ಭಾರತೀಯ ಚಿತ್ರರಂಗದ ಖ್ಯಾತ ನಟಿ ಆಗಿರುವ ದಿವಂಗತ ಶ್ರೀದೇವಿ ಅವರ ಮಾಮ್ ಸಿನಿಮಾದಲ್ಲಿ ಅವರ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಮನವನ್ನು ಗೆದ್ದಿದ್ದರು ಪಾಕಿಸ್ತಾನದ ನಟಿ ಸಜಲ್. ಇದರ ಕುರಿತಂತೆ ಸದ್ಯದ ಮಟ್ಟಿಗೆ ಆರ್ಯನ್ ಖಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಆದರೆ ಮುಂದಿನ ದಿನಗಳಲ್ಲಿ ಇದರ ಕುರಿತಂತೆ ಆರ್ಯನ್ ಖಾನ್ ಯಾವ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಅಭಿಮಾನಿಗಳಂತೂ ನಿಮ್ಮಿಬ್ಬರ ಜೋಡಿ ಚೆನ್ನಾಗಿರುತ್ತದೆ ಎಂಬುದಾಗಿ ಕಾಮೆಂಟ್ ಮಾಡಲು ಈಗಾಗಲೇ ಪ್ರಾರಂಭಿಸಿದ್ದಾರೆ.
Comments are closed.