ಕರುನಾಡಿನ ಸಹೋದರಿ, ಅಶ್ವಿನಿ ರವರು ಯಾರಿಗೂ ಕೂಡ ತಿಳಿಯಂತೆ ಪುಟ್ಟ ಮಗುವಿನ ಕೈಗೆ ಕೊಟ್ಟ ದುಬಾರಿ ಬೆಲೆಯ ಗಿಫ್ಟ್ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೆ ದೊಡ್ಮನೆಯವರು ಮೊದಲಿನಿಂದಲೂ ಕೂಡ ದಾನ ಧರ್ಮಕ್ಕೆ ಹೆಸರುವಾಸಿಯಾದವರು. ಅಣ್ಣಾವ್ರು ಹಾಗೂ ಪಾರ್ವತಮ್ಮನವರ ಕಾಲದಿಂದಲೂ ಕೂಡ ನಡೆದುಕೊಂಡು ಬಂದ ಈ ಪದ್ಧತಿಯನ್ನು ಅವರ ಮಕ್ಕಳು ಕೂಡ ಮುಂದುವರಿಸಿಕೊಂಡು ಹೋಗಿದ್ದಾರೆ. ಅದರಲ್ಲೂ ವಿಶೇಷವಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಂದರೆ ನಮ್ಮ ನೆಚ್ಚಿನ ಅಪ್ಪು ಮಾಡಿರುವ ಜನಪಯೋಗಿ ಕಾರ್ಯಗಳು ಅವರ ಮರಣದ ನಂತರ ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ತಿಳಿದುಬಂದಿದೆ. ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಅಪ್ಪು ಅವರು ಮಾಡಿರುವ ಸಹಾಯ ಇಂದಿಗೂ ಕೂಡ ಜನರ ಬಾಯಿಯಿಂದ ಕೇಳಿ ಬರುತ್ತದೆ.

ಇಂದಿಗೂ ಕೂಡ ಪ್ರತಿದಿನ ಅವರ ಸಮಾದಿಗೆ ಹೋಗಿ ಅವರು ಮಾಡಿರುವ ಸಹಾಯವನ್ನು ನೆನೆದು ಅವರಿಗೆ ಧನ್ಯವಾದಗಳು ನಿಮಗೆ ಅವರ ಸಮಾಧಿಯ ಬಳಿ ಕಾಣಿಸಿಕೊಳ್ಳಬಹುದು. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಮಾಡಿಕೊಂಡು ಹೋಗುತ್ತಿದ್ದ ಸಹಾಯ ಕಾರ್ಯವನ್ನು ಹಾಗೂ ಅವರ ಕನಸಿನ ಪಿ ಆರ್ ಕೆ ಪ್ರೊಡಕ್ಷನ್ ಹಾಗೂ ಆಡಿಯೋ ಸಂಸ್ಥೆಯನ್ನು ಅವರ ಪತ್ನಿ ಆಗಿರುವ ಕರುನಾಡ ಸಹೋದರಿ ಅಶ್ವಿನಿ ಅವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅವರ ಹಾಗೆ ಅಪ್ಪು ಅವರ ಅಭಿಮಾನಿಗಳನ್ನು ಕೂಡ ಆಗಾಗ ಭೇಟಿಯಾಗುತ್ತಲೇ ಇರುತ್ತಾರೆ. ಅವರಲ್ಲಿ ಲೋಕೇಶ್ ಎಂಬ ಅಪ್ಪು ಅಭಿಮಾನಿಯನ್ನು ಇತ್ತೀಚಿಗೆ ಭೇಟಿಯಾಗಿದ್ದಾರೆ. ಬಿಡದಿಯಲ್ಲಿ ತಟ್ಟೆ ಇಡ್ಲಿ ಅಂಗಡಿಯನ್ನು ಲೋಕೇಶ್ ರವರು ಹಾಕಿಕೊಳ್ಳುವಲ್ಲಿ ಅಪ್ಪು ಅವರು ಸಾಕಷ್ಟು ಸಹಾಯ ಮಾಡಿದ್ದರು.

Ashwini | ಕರುನಾಡಿನ ಸಹೋದರಿ, ಅಶ್ವಿನಿ ರವರು ಯಾರಿಗೂ ಕೂಡ ತಿಳಿಯಂತೆ ಪುಟ್ಟ ಮಗುವಿನ ಕೈಗೆ ಕೊಟ್ಟ ದುಬಾರಿ ಬೆಲೆಯ ಗಿಫ್ಟ್ ಏನು ಗೊತ್ತೇ??
ಕರುನಾಡಿನ ಸಹೋದರಿ, ಅಶ್ವಿನಿ ರವರು ಯಾರಿಗೂ ಕೂಡ ತಿಳಿಯಂತೆ ಪುಟ್ಟ ಮಗುವಿನ ಕೈಗೆ ಕೊಟ್ಟ ದುಬಾರಿ ಬೆಲೆಯ ಗಿಫ್ಟ್ ಏನು ಗೊತ್ತೇ?? 2

ಕಳೆದ ವರ್ಷವಷ್ಟೇ ಅವರಿಗೆ ಒಂದು ಹೆಣ್ಣು ಮಗುವಾಗಿತ್ತು ಅಪ್ಪು ಅವರ ಬಳಿ ಬಂದು ಮಗುವನ್ನು ತೋರಿಸಬೇಕು ಎಂಬ ಆಸೆಯನ್ನು ಹೊಂದಿದ್ದರೂ, ಆದರೆ ಕಳೆದ ವರ್ಷ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಪ್ಪು ಅವರು ನಮ್ಮನ್ನೆಲ ಬಿಟ್ಟು ಆಗಲಿದ್ದರು. ಹೀಗಾಗಿ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಮಗುವನ್ನು ಕರೆದುಕೊಂಡು ಅಶ್ವಿನಿ ಅವರ ಬಳಿಗೆ ಬಂದಿದ್ದಾರೆ. ಅಶ್ವಿನಿ ಅವರು ಮಗುವಿಗೆ ಚಿನ್ನದ ಆಭರಣದ ಉಡುಗೊರೆ ಹಾಗೂ ಹಣವನ್ನು ಕವರ್ ಗೆ ಹಾಕಿ ನೀಡಿದ್ದಾರೆ. ಅಪ್ಪು ಅವರು ಇದ್ದಾಗಲೂ ಕೂಡ ಮಕ್ಕಳನ್ನು ಕರೆದುಕೊಂಡು ಬಂದಾಗ ಅವರಿಗೆ ಚಿನ್ನದ ಲಾಕೆಟ್ ಅನ್ನು ಉಡುಗೊರೆ ನೀಡುವ ಅಭ್ಯಾಸ ಇತ್ತು ಅದನ್ನೇ ಈಗ ಅಶ್ವಿನಿ ಅವರು ಕೂಡ ಮುಂದುವರಿಸಿಕೊಂಡು ಬಂದಿದ್ದಾರೆ.

Comments are closed.