ಎಲ್ಲರಿಗೂ ನಿಜವಾದ ಪ್ರೀತಿ ಪಾಠ ಮಾಡಿದ ಸೋನು ಶ್ರೀನಿವಾಸ್ ಗೌಡ: ನಿಜವಾದ ಪ್ರೀತಿಯಲ್ಲಿ ನಂಬಿಕೆ ಇರಬೇಕು ಎಂದದ್ದು ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ನಲ್ಲಿ ಈಗಾಗಲೇ ಎರಡು ವಾರದ ಎಲಿಮಿನೇಷನ್ ಮುಗಿದಿದ್ದು ಎರಡು ವಾರದಲ್ಲಿ ಎಲಿಮಿನೇಷನ್ ಆಗಲು ಸೋನು ಗೌಡ ಅವರ ನಾಮಿನೇಟ್ ಆಗಿದ್ದರೂ ಕೂಡ ಬಚಾವ್ ಆಗಿದ್ದಾರೆ. ಅವರು ಬಿಗ್ ಬಾಸ್ ಮನೆಗೆ ಬಂದಾಗ ಅವರ ವೈಯಕ್ತಿಕ ಜೀವನದಲ್ಲಿ ನಡೆದಿರುವ ಕೆಲವೊಂದು ವಿಚಾರಗಳನ್ನು ಇಟ್ಟುಕೊಂಡು ಹಲವಾರು ಪ್ರೇಕ್ಷಕ ವರ್ಗದವರು ಯಾಕೆ ಅವರನ್ನು ಬಿಗ್ ಬಾಸ್ ನಲ್ಲಿ ಸೇರಿಸಿಕೊಂಡಿದ್ದೀರಿ ಎಂಬುದಾಗಿ ದೊಡ್ಡಮಟ್ಟದ ಅಸಮಾಧಾನವನ್ನು ಹೊರಹಾಕಿ ಟ್ರೋಲ್ ಮಾಡಿದ್ದರು.
ಆದರೆ ಸೋನು ಶ್ರೀನಿವಾಸಗೌಡ ಅವರು ಬಿಗ್ ಬಾಸ್ ಮನೆಯ ಒಳಗೆ ಬಂದಮೇಲೆ ಸಾಕಷ್ಟು ಒಳ್ಳೆಯ ರೀತಿಯಲ್ಲಿ ಪ್ರದರ್ಶನ ನೀಡುವ ಮೂಲಕ ತಾವು ಬಿಗ್ ಬಾಸ್ ಮನೆಗೆ ಆಯ್ಕೆ ಆಗಿರುವ ಆಯ್ಕೆಯನ್ನು ಸಾಬೀತುಪಡಿಸಿಕೊಳ್ಳುತ್ತಿದ್ದಾರೆ. ಅವರು ಕೆಲವೊಮ್ಮೆ ಮಾತನಾಡಿದಾಗ ಕೆಲವರಿಗೆ ಕಿರಿಕಿರಿ ಎಂದರೆ ಕೂಡ ಇನ್ನು ಕೆಲವರಿಗೆ ಅದು ಮುಖದಲ್ಲಿ ನಗು ಮೂಡಿಸುವಂತೆ ಮಾಡುತ್ತದೆ. ಇತ್ತೀಚಿಗಷ್ಟೇ ಸೋನು ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಲವ್ ಬಗ್ಗೆ ಮಾತನಾಡಿರುವ ಮಾತೊಂದು ಸಖತ್ ಸೌಂಡ್ ಮಾಡುತ್ತಿದೆ. ರೂಪೇಶ್ ಶೆಟ್ಟಿ ಅವರು ತಮ್ಮ ಜೀವನದಲ್ಲಿ ನಡೆದಿರುವ ಒಂದು ಲವ್ ಸ್ಟೋರಿ ಕಥೆಯನ್ನು ಹೇಳುತ್ತಾರೆ. ಒಂದು ದೇವಸ್ಥಾನದಲ್ಲಿ ಬರುತ್ತಿದ್ದ ಹುಡುಗಿಯನ್ನು ಅವರ ಸ್ನೇಹಿತರೆಲ್ಲರೂ ಪ್ರೀತಿಸುತ್ತಿದ್ದರು ರೂಪ ಶೆಟ್ಟಿ ಮಾತ್ರ ನಮಗೆ ಬೀಳಲ್ಲ ಎಂಬ ಕಾರಣಕ್ಕಾಗಿ ಸುಮ್ಮನೆ ಇದ್ದರು.
ಆದರೆ ಒಂದು ದಿನ ರಕ್ಷಾಬಂಧನದ ದಿನದಂದು ರೂಪೇಶ್ ಶೆಟ್ಟಿ ಅವರ ಎಲ್ಲಾ ಸ್ನೇಹಿತರಿಗೂ ಕೂಡ ಆ ಹುಡುಗಿ ಬಂದು ರಾಕಿ ಕಟ್ಟುತ್ತಾರೆ ಆದರೆ ರೂಪೇಶ್ ಶೆಟ್ಟಿ ಅವರಿಗೆ ರಾಕಿಯನ್ನು ಕಟ್ಟುವುದಿಲ್ಲ. ಇದಕ್ಕೆ ಪ್ರತಿಕ್ರಿಯೆ ನೀಡುತ್ತಾ, ಸೋನು ಗೌಡ ಪ್ರೀತಿಯಲ್ಲಿ ನಂಬಿಕೆ ಇರಬೇಕು, ಟೈಂಪಾಸ್ ಗಾಗಿ ಪ್ರೀತಿಯನ್ನು ಮಾಡಬಾರದು ಎಂಬುದಾಗಿ ಹೇಳುತ್ತಾರೆ. ಲವ್ ಟೈಮ್ ವೇಸ್ಟ್ ಲವ್ ಗಿಂತ ಫ್ರೆಂಡ್ಶಿಪ್ ಮುಖ್ಯ ಎಂಬುದಾಗಿ ಕೂಡ ಈ ಸಂದರ್ಭದಲ್ಲಿ ಸೇರಿಸುತ್ತಾರೆ. ಇದಕ್ಕೆ ಪ್ರತಿಕ್ರಿಯೆ ನೀಡುತ್ತ ರಾಕೇಶ್ ಅಡಿಗ ಎಲ್ಲಕ್ಕಿಂತ ಲವ್ ನಲ್ಲಿ ಗೌರವ ಮುಖ್ಯ ಎಂಬುದಾಗಿ ಹೇಳುತ್ತಾರೆ. ಸದ್ಯಕ್ಕೆ ಈ ದೃಶ್ಯ ಸಖತ್ ಸುದ್ದಿ ಮಾಡುತ್ತಿದ್ದು ಬಿಗ್ ಬಾಸ್ ಮನೆಯಲ್ಲಿ ಲವ್ ಪಾಠ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.
Comments are closed.