ಜೊತೆ ಜೊತೆಯಲಿ ಧಾರಾವಾಹಿಗೆ ಅನಿರುದ್ ಪಾತ್ರಕ್ಕೆ ಸೇರಿಕೊಳ್ಳಲು ಹೊಸ ಷರತ್ತು ವಿಧಿಸಿದ ಹರೀಶ್. ಏನಂತೆ ಗೊತ್ತೆ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಜೀ ಕನ್ನಡ ವಾಹಿನಿಯ ಟಾಪ್ ಧಾರವಾಹಿ ಆಗಿರುವ ಜೊತೆ ಜೊತೆಯಲಿ ಧಾರವಾಹಿ ನಿರ್ಮಾಪಕ ಆರೂರು ಜಗದೀಶ್ ಹಾಗೂ ನಾಯಕ ಅನಿರುದ್ಧ್ ರವರ ನಡುವೆ ಮನಸ್ತಾಪ ಮೂಡಿಬಂದು ಈಗ ಅನಿರುದ್ಧ್ ಧಾರವಾಹಿಯಿಂದ ಹೊರ ಬಂದಿರುವ ವಿಚಾರ ನಿಮೆಲ್ಲರಿಗೂ ತಿಳಿದೇ ಇದೆ. ಇತ್ತೀಚಿನ ವರ್ಷಗಳಲ್ಲಿ ಕಿರುತೆರೆಯ ವಲಯದಲ್ಲಿ ಕೇಳಿ ಬಂದ ಅತ್ಯಂತ ದೊಡ್ಡ ಮಟ್ಟದ ಸುದ್ದಿ ಇದಾಗಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಅಷ್ಟೊಂದು ಯಶಸ್ವಿಯಾಗಿ ಮೂಡಿಬಂದಿದ್ದ ಧಾರವಾಹಿ ಇಂತಹ ಒಂದು ವಿಚಾರಕ್ಕೆ ಸಿಲುಕಿತ್ತು ಎಂಬುದನ್ನು ಯಾರು ಕೂಡ ಒಪ್ಪಲು ಸಿದ್ದರಿಲ್ಲ. ಇನ್ನು ಜೊತೆ ಜೊತೆಯಲಿ ಧಾರವಾಹಿಯಲ್ಲಿ ಆರ್ಯವರ್ಧನ್ ಪಾತ್ರಕ್ಕೆ ಯಾರು ನಡೆಸಬೇಕು ಎನ್ನುವ ಕುರಿತಂತೆ ಧಾರವಾಹಿ ತಂಡ ಈಗಾಗಲೇ ನಾಯಕನಟನ ಹುಡುಕಾಟದಲ್ಲಿದೆ.

ಆದರೆ ಅನಿರುದ್ಧ್ ರವರು ಇತ್ತೀಚೆಗೆ ನಡೆಸಿರುವ ಸುದ್ದಿಗೋಷ್ಠಿಯಲ್ಲಿ ಎಲ್ಲ ರಾಜಿ ಮಾಡಿಕೊಂಡರೆ ನಟಿಸಲು ನಾನು ಈಗಲೂ ಕೂಡ ಸಿದ್ದನಾಗಿದ್ದೇನೆ ಎಂಬುದಾಗಿ ಹೇಳಿದ್ದರು. ಆದರೆ ನಿರ್ಮಾಪಕ ಆರೂರು ಜಗದೀಶ್ ಮಾತ್ರ ಸುತಾರಾಂ ಸಿದ್ಧವಿಲ್ಲ. ಈಗಾಗಲೇ ಕೇಳಿ ಬಂದಿರುವ ಸುದ್ದಿಯ ಪ್ರಕಾರ ಈ ಪಾತ್ರಕ್ಕಾಗಿ ನಟ ಜೆಕೆ ವಿಜಯ ರಾಘವೇಂದ್ರ ಆಶ್ಚರ್ಯ ಎಂಬಂತೆ ನಿರ್ದೇಶಕ ಅನುಪ್ ಭಂಡಾರಿ ಅವರ ಬಳಿ ಕೂಡ ಪ್ರಸ್ತಾವನೆ ಹೋಗಿದೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಇನ್ನು ವಿಶೇಷ ಎಂಬಂತೆ ಅನುಭಾವಿ ನಟ ಹರೀಶ್ ರಾಜ್ ಅವರಿಗೂ ಕೂಡ ಈ ಪಾತ್ರಕ್ಕಾಗಿ ಆಹ್ವಾನ ಹೋಗಿದೆ ಎಂಬುದಾಗಿ ತಿಳಿದು ಬಂದಿದೆ ಅವರು ಕೂಡ ಇದನ್ನು ಸಂದರ್ಶನ ಒಂದರಲ್ಲಿ ಬಿಚ್ಚಿಟ್ಟಿದ್ದಾರೆ. ಧಾರವಾಹಿ ತಂಡದಿಂದ ನನಗೆ ಪಾತ್ರದ ಆಹ್ವಾನ ಬಂದಿರುವುದು ನಿಜ ಮಾತುಕತೆ ನಡಿತಾ ಇದೆ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು ಎಂಬುದಾಗಿ ಅವರು ಹೇಳಿದ್ದಾರೆ.

ani | ಜೊತೆ ಜೊತೆಯಲಿ ಧಾರಾವಾಹಿಗೆ ಅನಿರುದ್ ಪಾತ್ರಕ್ಕೆ ಸೇರಿಕೊಳ್ಳಲು ಹೊಸ ಷರತ್ತು ವಿಧಿಸಿದ ಹರೀಶ್. ಏನಂತೆ ಗೊತ್ತೆ??
ಜೊತೆ ಜೊತೆಯಲಿ ಧಾರಾವಾಹಿಗೆ ಅನಿರುದ್ ಪಾತ್ರಕ್ಕೆ ಸೇರಿಕೊಳ್ಳಲು ಹೊಸ ಷರತ್ತು ವಿಧಿಸಿದ ಹರೀಶ್. ಏನಂತೆ ಗೊತ್ತೆ?? 2

ಇಷ್ಟು ಮಾತ್ರವಲ್ಲದೆ ಈ ಸಂದರ್ಭದಲ್ಲಿ ಅವರ ಒಂದು ಶರತ್ತನ್ನು ಕೂಡ ಹೇಳಿದ್ದಾರೆ. ತಿಂಗಳಿಗೆ 15 ದಿನಗಳನ್ನು ನಾನು ಧಾರವಾಹಿಯ ಚಿತ್ರೀಕರಣಕ್ಕಾಗಿ ಮೀಸಲಿಟ್ಟರೆ ಉಳಿದ 15 ದಿನಗಳಲ್ಲಿ ನನ್ನ ಸಿನಿಮಾ ಕೆಲಸಗಳನ್ನು ನಾನು ಮುಗಿಸಿಕೊಳ್ಳಬೇಕು ಎಂಬ ಶರತ್ತನ್ನು ಕೂಡ ಇಲ್ಲಿ ಬಿಚ್ಚಿಟ್ಟಿದ್ದಾರೆ. ಎಲ್ಲಾ ಸರಿ ಎಂದು ಅನಿಸಿದರೆ ಖಂಡಿತವಾಗಿ ಇಂತಹ ಅತ್ಯುತ್ತಮ ಪಾತ್ರವನ್ನು ನಿರ್ವಹಿಸುವಲ್ಲಿ ನನಗೆ ಯಾವ ಅಡ್ಡಿಯೂ ಇಲ್ಲ ಎಂಬುದಾಗಿ ಹರೀಶ್ ರಾಜ್ ಹೇಳಿದ್ದಾರೆ. ಈಗಾಗಲೇ ಹರೀಶ್ ರಾಜ್ ಕನ್ನಡ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರ್ಣಗೊಳಿಸಿರುವ ಕಲಾವಿದ ಆಗಿದ್ದು ಯಾವ ಪಾತ್ರವನ್ನು ಕೂಡ ನೀಡಿದರು ಅದನ್ನು ನ್ಯಾಯಯುತವಾಗಿ ನಟಿಸುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನ ಬೇಡ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸುವುದನ್ನು ಮಾತ್ರ ಮರೆಯಬೇಡಿ.

Comments are closed.