ಪಾಕ್ ಪಂದ್ಯಕ್ಕೂ ಮುನ್ನವೇ ಭಾರತ ತಂಡಕ್ಕೆ ಮತ್ತೊಂದು ಶಾಕ್: ಸ್ಟಾರ್ ಬೌಲರ್ ಔಟ್. ಈತನದ್ದು ಇದೆ ಆಯಿತು ದುಡ್ಡು ಜಾಸ್ತಿ ಆಯಿತು ಎಂದ ನೆಟ್ಟಿಗರು.

ನಮಸ್ಕಾರ ಸ್ನೇಹಿತರೆ ಈಗಾಗಲೇ ಏಷ್ಯಾ ಕಪ್ ಗಾಗಿ ಎಲ್ಲಾ ಸದಸ್ಯಗಳ ನಡೆದಿದ್ದು ಏಷ್ಯಾ ಕಪ್ ಟೂರ್ನಮೆಂಟ್ ಆರಂಭಕ್ಕೂ ಮುನ್ನವೇ ಭಾರತೀಯ ಕ್ರಿಕೆಟ್ ತಂಡ ಮತ್ತೊಂದು ಆಘಾತಕ್ಕೆ ಒಳಗಾಗಿದೆ ಎಂದು ಹೇಳಬಹುದಾಗಿದೆ. ಹಲವಾರು ಸಮಯಗಳಿಂದ ಕ್ರಿಕೆಟ್ ನಿಂದ ದೂರವಿದ್ದ ದೀಪಕ್ ಚಹಾರ್ ರವರಿಗೆ ಜಿಂಬಾಬ್ವೆ ವಿರುದ್ಧದ ಸರಣಿಗೆ ಅವಕಾಶವನ್ನು ನೀಡಲಾಗಿತ್ತು. ಅವರು ಈ ಬಾರಿ ಐಪಿಎಲ್ ನಲ್ಲಿ ಕೂಡ ಸಂಪೂರ್ಣವಾಗಿ ಗೈರುಹಾಜರಾಗಿದ್ದರು.

ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಮೂರು ವಿಕೆಟ್ಗಳನ್ನು ಕಬಳಿಸುವ ಮೂಲಕ ಫಾರ್ಮ್ ಗೆ ಮರಳಿದ ದೀಪಕ್ ಚಹಾರ್ ರವರ ಮತ್ತೆ ನಿರಾಶೆ ಮೂಡಿಸಿದ್ದಾರೆ. ಹೌದು ಎರಡನೇ ಪಂದ್ಯಕ್ಕೆ ಅಲಭ್ಯರಿದ್ದ ಅವರು ಮೂರನೇ ಪಂದ್ಯದಲ್ಲಿ ಕೇವಲ ಒಂದು ವಿಕೆಟ್ ಕೀಳುವ ಮೂಲಕ ಬರೋಬ್ಬರಿ 75 ರನ್ನು ಬಿಟ್ಟುಕೊಟ್ಟಿದ್ದರು. ಅದರಲ್ಲೂ ವಿಶೇಷವಾಗಿ ಮೂರನೇ ಪಂದ್ಯದ ಹೊತ್ತಿಗೆ ಮಂಡಿ ಇಂಜುರಿ ಮಾಡಿಕೊಂಡಿದ್ದರು ಎಂಬುದಾಗಿ ತಿಳಿದು ಬಂದಿತ್ತು. ದೀಪಕ್ ಚಹರ್ ಅವರನ್ನು ಏಷ್ಯಾ ಕಪ್ ತಂಡದಲ್ಲಿ ಸ್ಟ್ಯಾಂಡ್ ಬೈ ಆಟಗಾರನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಈಗ ಇಂಜುರಿಯಿಂದ ಏಷ್ಯಾಕಪ್ ನಿಂದ ದೀಪಕ್ ಚಹಾರ್ ಅವರು ಹೊರಬೀಳುವ ಸಾಧ್ಯತೆ ಹೆಚ್ಚಾಗಿದೆ.

Ind | ಪಾಕ್ ಪಂದ್ಯಕ್ಕೂ ಮುನ್ನವೇ ಭಾರತ ತಂಡಕ್ಕೆ ಮತ್ತೊಂದು ಶಾಕ್: ಸ್ಟಾರ್ ಬೌಲರ್ ಔಟ್. ಈತನದ್ದು ಇದೆ ಆಯಿತು ದುಡ್ಡು ಜಾಸ್ತಿ ಆಯಿತು ಎಂದ ನೆಟ್ಟಿಗರು.
ಪಾಕ್ ಪಂದ್ಯಕ್ಕೂ ಮುನ್ನವೇ ಭಾರತ ತಂಡಕ್ಕೆ ಮತ್ತೊಂದು ಶಾಕ್: ಸ್ಟಾರ್ ಬೌಲರ್ ಔಟ್. ಈತನದ್ದು ಇದೆ ಆಯಿತು ದುಡ್ಡು ಜಾಸ್ತಿ ಆಯಿತು ಎಂದ ನೆಟ್ಟಿಗರು. 2

ಪದೇ ಪದೇ ಇಂಜುರಿಯಿಂದ ತಂಡದಿಂದ ಹೊರ ಬೀಳುತ್ತಿರುವ ದೀಪಕ್ ಚಹಾರ್ ಅವರ ವಿರುದ್ಧ ಅಭಿಮಾನಿಗಳು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅವರ ಬದಲಿಗೆ ರಾಜಸ್ಥಾನ ರಾಯಲ್ಸ್ ತಂಡದ ಯುವ ಆಟಗಾರ ಆಗಿರುವ ಕುಲ್ದೀಪ್ ಸೇನ್ ಅವರನ್ನು ಸ್ಟ್ಯಾಂಡ್ ಬೈ ಆಟಗಾರನಾಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಪರಿಣಾಮಕಾರಿ ಬೌಲಿಂಗ್ ದಾಳಿಯನ್ನು ಈಗಾಗಲೇ ನಡೆಸಿ ತನ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಕುಲ್ದೀಪ್ ಸೇನ್ ಭಾರತೀಯ ತಂಡದ ಪರವಾಗಿ ಅವಕಾಶ ಸಿಕ್ಕರೆ ತಂಡಕ್ಕೆ ನೆರವಾಗುವಂತಹ ಬೌಲಿಂಗ್ ಪ್ರದರ್ಶನವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಾರಿ ಐಪಿಎಲ್ ನಲ್ಲಿ ಏಳು ಪಂದ್ಯಗಳಲ್ಲಿ ಎಂಟು ವಿಕೆಟ್ ಕಿತ್ತು ಪ್ರಭಾವ ಮೂಡಿಸಿದ್ದಾರೆ.

Comments are closed.