ಏಷ್ಯಾ ಕಪ್ ಗೂ ಮುನ್ನವೇ ಕಣ್ಣೀರು ಹಾಕಿಸಿದ ವಿರಾಟ್: ಅದೊಂದು ಪೋಸ್ಟ್ ನ ಮೂಲಕ ತಲ್ಲಣ ಸೃಸ್ಟಿಸಿದ್ದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಇನ್ನೇನು ಒಂದು ದಿನದಲ್ಲಿ ಏಷ್ಯಾ ಕಪ್ ಟೂರ್ನಮೆಂಟ್ ಪ್ರಾರಂಭವಾಗಲಿದೆ. ಮೊದಲನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಸೆಣೆಸಾಡಲಿವೆ. ಎರಡನೇ ಪಂದ್ಯದಲ್ಲಿ ಅಂದರೆ ಆಗಸ್ಟ್ 28 ರಂದು ಏಷ್ಯಾ ಕಪ್ ಟೂರ್ನಮೆಂಟ್ ನ ಹೈ ವೋಲ್ಟೇಜ್ ಪಂದ್ಯವಾಗಿರುವ ಇಂಡಿಯಾ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಾಟ ಸಾಗಲಿದೆ.

ಸಾಮಾನ್ಯ ಭಾರತ ಹಾಗೂ ಪಾಕಿಸ್ತಾನಗಳ ನಡುವಿನ ಯಾವುದೇ ವಿಚಾರವಾದರೂ ಕೂಡ ದೊಡ್ಡ ಮಟ್ಟದ ಪ್ರಚಾರ ಹಾಗೂ ಸುದ್ದಿಯನ್ನು ಪಡೆದುಕೊಳ್ಳುತ್ತದೆ ಇನ್ನು ಕ್ರಿಕೆಟ್ ಅಂದರೆ ಕೇಳಬೇಕಾ ಖಂಡಿತವಾಗಿ ದೊಡ್ಡ ಮಟ್ಟದಲ್ಲಿ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆ ಈ ಪಂದ್ಯದ ಮೇಲಿದೆ. ಅದರಲ್ಲೂ ಕಳೆದ ಬಾರಿ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಸೋತ ಸೇಡನ್ನು ಈ ಪಂದ್ಯಾಟದಲ್ಲಿ ಪಾಕಿಸ್ತಾನವನ್ನು ಸೋಲಿಸಿ ತೀರಿಸಿಕೊಳ್ಳಬೇಕೆಂಬ ಸಿದ್ಧತೆಯಲ್ಲಿ ಭಾರತೀಯ ಕ್ರಿಕೆಟ್ ತಂಡವಿದೆ. ಇನ್ನು ಈಗಾಗಲೇ ವಿರಾಟ್ ಕೊಹ್ಲಿ ಅವರು ಅರಬರ ನಾಡಿಗೆ ಕಾಲಿಟ್ಟು ಈ ಪಿಚ್ ನಲ್ಲಿ ಹೇಗೆ ಬ್ಯಾಟಿಂಗ್ ನಡೆಸಬೇಕು ಎನ್ನುವ ಪ್ರಾಕ್ಟೀಸ್ ಅನ್ನು ಕೂಡ ಸತತವಾಗಿ ಟ್ರೈನಿಂಗ್ ಗ್ರೌಂಡ್ ನಲ್ಲಿ ಮಾಡುತ್ತಿದ್ದಾರೆ. ಏಷ್ಯಾ ಕಪ್ ಆರಂಭಕ್ಕೂ ಮುನ್ನವೇ ಒಂದು ಭಾವನಾತ್ಮಕ ಪೋಸ್ಟ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಎಲ್ಲರೂ ಭಾವುಕರಾಗುವಂತೆ ಮಾಡಿದ್ದಾರೆ. ಹೌದು ಮಿತ್ರರೇ ಮಹೇಂದ್ರ ಸಿಂಗ್ ಧೋನಿ ಅವರ ಜೊತೆಗೆ ಇರುವ 2016ರ ಟಿ20 ವಿಶ್ವಕಪ್ ಪಂದ್ಯದ ಫೋಟೋ ಒಂದನ್ನು ವಿರಾಟ್ ಕೊಹ್ಲಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

virat 6 | ಏಷ್ಯಾ ಕಪ್ ಗೂ ಮುನ್ನವೇ ಕಣ್ಣೀರು ಹಾಕಿಸಿದ ವಿರಾಟ್: ಅದೊಂದು ಪೋಸ್ಟ್ ನ ಮೂಲಕ ತಲ್ಲಣ ಸೃಸ್ಟಿಸಿದ್ದು ಹೇಗೆ ಗೊತ್ತೇ??
ಏಷ್ಯಾ ಕಪ್ ಗೂ ಮುನ್ನವೇ ಕಣ್ಣೀರು ಹಾಕಿಸಿದ ವಿರಾಟ್: ಅದೊಂದು ಪೋಸ್ಟ್ ನ ಮೂಲಕ ತಲ್ಲಣ ಸೃಸ್ಟಿಸಿದ್ದು ಹೇಗೆ ಗೊತ್ತೇ?? 2

ಈ ಫೋಟೋವನ್ನು ಪೋಸ್ಟ್ ಮಾಡಿ ಮಹೇಂದ್ರ ಸಿಂಗ್ ಧೋನಿ ಅವರ ನಂಬುಗಸ್ತ ಉಪನಾಯಕನಾಗಿ ಇದ್ದಿದ್ದು ನನ್ನ ಕ್ರಿಕೆಟ್ ಜೀವನದ ಅತ್ಯಂತ ಸಂತೋಷದ ಸಮಯಗಳು ಎಂಬುದಾಗಿ ಹೇಳಿದ್ದಾರೆ. ನಂತರ 7+18 ಎಂದು ಬರೆದು ಹಾರ್ಟ್ ಎಮೋಜಿಯನ್ನು ಹಾಕಿ ಪೋಸ್ಟ್ ಮಾಡಿದ್ದಾರೆ. ಅಂದರೆ ಸದಾಕಾಲ ಧೋನಿ ಹಾಗೂ ಕೊಹ್ಲಿ ಅವರ ಬಾಂಧವ್ಯ ಎನ್ನುವುದು ಅಷ್ಟೇ ತಾಜಾ ಆಗಿರಲಿದೆ ಎಂಬ ಸಂಕೇತವಾಗಿದೆ. ಈ ಏಷ್ಯಾ ಕಪ್ ನಲ್ಲಿ ವಿರಾಟ್ ಕೊಹ್ಲಿ ಅವರು ತಮ್ಮ ಫಾರ್ಮ್ ಗೆ ಮರಳಿ ಬರಲಿ ಎಂಬುದಾಗಿ ಹಾರೈಸುತ್ತಿರುವ ಕೋಟ್ಯಾನು ಕೋಟಿ ಅಭಿಮಾನಿಗಳ ಹಾರೈಕೆ ಫಲಿಸಲಿ ಎಂಬುದೇ ಎಲ್ಲರ ಆಶಯ.

Comments are closed.