ಈ ಬಾರಿಯ ಏಷ್ಯಾ ಕಪ್ ನಲ್ಲಿ ಭಾರತ ತಂಡಕ್ಕಿಂತ ಬಲಿಷ್ಠ ತಂಡ ಯಾವುದು?? 5 ತಂಡಗಳಲ್ಲಿ ಬಲಿಷ್ಠ ತಂಡದ ಬಗ್ಗೆಯೇ ಚರ್ಚೆ.

ನಮಸ್ಕಾರ ಸ್ನೇಹಿತರೆ ಇನ್ನೇನು ನಾಳೆಯಿಂದ ಯುಎಇ ನಲ್ಲಿ ಏಷ್ಯಾ ಕಪ್ ಪ್ರಾರಂಭವಾಗಲಿದೆ. ನಾಡಿದ್ದು ಅಂದರೆ ಆಗಸ್ಟ್ 28ರಂದು ಭಾರತೀಯ ಕ್ರಿಕೆಟ್ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಆಗಿರುವ ಪಾಕಿಸ್ತಾನ ತಂಡದ ಎದುರು ಆಡುವ ಮೂಲಕ ಏಷ್ಯಾ ಕಪ್ ಟೂರ್ನಮೆಂಟನ್ನು ಸ್ಟಾರ್ಟ್ ಮಾಡಲಿದೆ.

ಏಷ್ಯಾ ಕಪ್ ಟೂರ್ನಮೆಂಟ್ ಅಲ್ಲಿ ಭಾರತೀಯ ಕ್ರಿಕೆಟ್ ತಂಡ ಯಾವ ಮಟ್ಟಿಗೆ ಪ್ರಾಬಲ್ಯವನ್ನು ಸಾಧಿಸಿದೆ ಯಾವ ತಂಡ ಬಲಿಷ್ಠವಾಗಿದೆ ಎಂಬುದರ ಲೆಕ್ಕಾಚಾರವನ್ನು ನಾವು ಏಷ್ಯಾಕಪ್ ಪ್ರಾರಂಭಕ್ಕು ಮುನ್ನವೇ ನಿಮಗೆ ಈ ಲೇಖನಿಯಲ್ಲಿ ನೀಡಲಿದ್ದೇವೆ. ಪಾಕಿಸ್ತಾನ ತಂಡ ವಿರುದ್ಧ ಭಾರತೀಯ ಕ್ರಿಕೆಟ್ ತಂಡ ಇದುವರೆಗೂ ಏಷ್ಯಾ ಕಪ್ ನಲ್ಲಿ 15 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ಭಾರತ ಎಂಟು ಬಾರಿ ಗೆದ್ದರೆ ಪಾಕಿಸ್ತಾನ ಐದು ಬಾರಿ ಗೆದ್ದಿದೆ. ಇನ್ನೆರಡು ಪಂದ್ಯಗಳು ಯಾವುದೇ ಫಲಿತಾಂಶವನ್ನು ಕಾಣದೆ ರದ್ದಾಗಿದೆ. ಶ್ರೀಲಂಕಾ ತಂಡದ ಎದುರು 20 ಬಾರಿ ಮುಖಾಮುಖಿ ಆಗಿರುವ ಭಾರತೀಯ ಕ್ರಿಕೆಟ್ ತಂಡ 10 ಪಂದ್ಯಗಳನ್ನು ಗೆದ್ದು 10 ಪಂದ್ಯಗಳನ್ನು ಸೋತಿದೆ. ಏಷ್ಯಾ ಕಪ್ ನಲ್ಲಿ ಬಾಂಗ್ಲಾದೇಶವನ್ನು 14 ಬಾರಿ ಎದುರಿಸಿರುವ ಭಾರತೀಯ ಕ್ರಿಕೆಟ್ ತಂಡ ಹದಿಮೂರರಲ್ಲಿ ಭರ್ಜರಿ ಗೆಲುವನ್ನು ಸಾಧಿಸಿದೆ ಹಾಗೂ ಒಂದರಲ್ಲಿ ಮಾತ್ರ ಸೋತಿದೆ.

teams | ಈ ಬಾರಿಯ ಏಷ್ಯಾ ಕಪ್ ನಲ್ಲಿ ಭಾರತ ತಂಡಕ್ಕಿಂತ ಬಲಿಷ್ಠ ತಂಡ ಯಾವುದು?? 5 ತಂಡಗಳಲ್ಲಿ ಬಲಿಷ್ಠ ತಂಡದ ಬಗ್ಗೆಯೇ ಚರ್ಚೆ.
ಈ ಬಾರಿಯ ಏಷ್ಯಾ ಕಪ್ ನಲ್ಲಿ ಭಾರತ ತಂಡಕ್ಕಿಂತ ಬಲಿಷ್ಠ ತಂಡ ಯಾವುದು?? 5 ತಂಡಗಳಲ್ಲಿ ಬಲಿಷ್ಠ ತಂಡದ ಬಗ್ಗೆಯೇ ಚರ್ಚೆ. 2

ಇನ್ನು ಮತ್ತೊಂದು ವಿಷಯದ ಬಲಿಷ್ಠ ತಂಡವಾಗಿರುವ ಅಫ್ಘಾನಿಸ್ತಾನದ ವಿರುದ್ಧ ಎರಡು ಪಂದ್ಯಗಳನ್ನು ಆಡಿರುವ ಭಾರತ ಒಂದು ಪಂದ್ಯದಲ್ಲಿ ಗೆದ್ದು ಒಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಇನ್ನು ಹಾಂಗ್ ಕೊಂಗ್ ವಿರುದ್ಧ ಏಷ್ಯಾ ಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡ ಎರಡು ಬಾರಿ ಮುಖಾಮುಖಿಯಾಗಿದ್ದು ಎರಡರಲ್ಲಿಯೂ ಕ್ಲೀನ್ ಸ್ವೀಪ್ ಗೆಲುವನ್ನು ಸಾಧಿಸಿದೆ. ಒಟ್ಟಾರಿಯಾಗಿ ಏಷ್ಯಾ ಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಮೀರಿಸಿರುವ ಮತ್ತೊಂದು ತಂಡ ಇಲ್ಲ ಎಂದು ಹೇಳಬಹುದಾಗಿದೆ. ಈ ಬಾರಿ ಮೂರು ಹಾಗೂ ಮೂರು ತಂಡಗಳ ಗ್ರೂಪ್ ನ ಒಳಗೆ ಪಂದ್ಯಗಳು ನಡೆಯಲಿದ್ದು ಎರಡು ಗ್ರೂಪಿನ ಅತ್ಯಂತ ಹೆಚ್ಚು ಪಂದ್ಯಗಳನ್ನು ಗೆದ್ದಿರುವ ಎರಡು ತಂಡಗಳು ಮುಂದಿನ ಹಂತಕ್ಕೆ ತೇರ್ಗಡೆಯಾಗಲಿವೆ. ನಂತರ ಆ ನಾಲ್ಕು ತಂಡಗಳಲ್ಲಿ ಅತ್ಯಂತ ಹೆಚ್ಚು ಪಂದ್ಯಗಳನ್ನು ಗೆದ್ದಿರುವ ಎರಡು ತಂಡಗಳ ನಡುವೆ ಫೈನಲ್ ಪಂದ್ಯಾಟ ನಡೆಯಲಿದೆ. ಈ ಬಾರಿ ಕಪ್ ಗೆಲ್ಲುವ ಫೇವರೆಟ್ ತಂಡವಾಗಿ ಭಾರತೀಯ ಕ್ರಿಕೆಟ್ ತಂಡ ಕಣಕ್ಕಿಳಿಯುತ್ತಿದೆ.

Comments are closed.