ಮದರಸಗಳಿಗೆ ಮತ್ತೊಂದು ಶಾಕ್ ನೀಡಿದ ಅಸ್ಸಾಂ ! ನಮ್ಮಲ್ಲೂ ಹೀಗೆ ಬೇಕು ಎಂದ ನೆಟ್ಟಿಗರು ! ಏನು ಗೊತ್ತಾ?

ಸ್ನೇಹಿತರೇ ಕಳೆದ ಕೆಲವು ತಿಂಗಳುಗಳ ಹಿಂದೆ ಮದರಾಸದಲ್ಲಿನ ವಿದ್ಯಾರ್ಥಿಗಳು ವೈಜ್ಞಾನಿಕ ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ ಅವರು ಸರ್ಕಾರದ ಪಾಠಗಳನ್ನು ಕಲಿಯುತ್ತಿಲ್ಲ ಇದರಿಂದ ಮದರಾಸ ಮುಗಿಸಿಕೊಂಡು ಕಾಲೇಜುಗಳಿಗೆ ಅಥವಾ ಇನ್ನಿತರ ಶಾಲೆಗಳಿಗೆ ತೆರಳುವ ಮಕ್ಕಳು ಅಲ್ಲಿನ ಮಕ್ಕಳಿಗಿಂತ ಬಹಳ ಹಿಂದೆ ಉಳಿಯಲಿದ್ದಾರೆ ಎಂಬ ಕಾರಣ ನೀಡಿ ಅಸ್ಸಾಮ್ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಬಿಜೆಪಿ ಸರ್ಕಾರವು ಇನ್ನು ಮುಂದೆ ರಾಜ್ಯದಲ್ಲಿನ ಎಲ್ಲ ಮದರಾಸಗಳು ರಾಜ್ಯ ಸರ್ಕಾರದ ಶಿಕ್ಷಣ ಸಂಸ್ಥೆಯ ಕಾನೂನಿನ ಅನ್ವಯ ಪಾಠಗಳನ್ನು ಮಾಡಬೇಕು. ನಿಮ್ಮ ಧರ್ಮದ ಕುರಿತಾದ ಪಾಲನೆ ಗಳನ್ನು ಇನ್ನಿತರ ವಿಷಯಗಳಲ್ಲಿ ಅಳವಡಿಸಿ, ಆದರೆ ಸರ್ಕಾರ ನೀಡುವ ಗಣಿತ ಹಾಗೂ ವಿಜ್ಞಾನ ಸೇರಿದಂತೆ ಇನ್ನಿತರ ವಿಷಯಗಳನ್ನು ಬೋಧಿಸಬೇಕು ಎಂಬ ಆದೇಶವನ್ನು ಹೊರಡಿಸಿತ್ತು.

ಇದೀಗ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಅಸ್ಸಾಂನ ಸರ್ಕಾರ ಮದರಸಗಳಿಗೆ ಒಮ್ಮೆಲೆ ಶಾಕ್ ನೀಡಿದೆ. ಈ ನಿರ್ಧಾರ ಇದೀಗ ದೇಶದೆಲ್ಲೆಡೆ ಸಂಚಲನ ಸೃಷ್ಟಿಸಿದ್ದು ಬಹುತೇಕ ರಾಜ್ಯಗಳಲ್ಲಿ ಇದೇ ಕಾನೂನು ಜಾರಿಯಾಗಬೇಕು ಎಂಬ ಮಾತುಗಳು ಕೇಳಿಬಂದಿವೆ. ಅಷ್ಟಕ್ಕೂ ಅದು ಏನು ಅಂತೀರಾ ಬನ್ನಿ ತಿಳಿಯೋಣ.

ಸ್ನೇಹಿತರೆ ಅಸ್ಸಾಮ್ ರಾಜ್ಯದಲ್ಲಿ ಇತರ ರಾಜ್ಯಗಳಂತೆ ಹಲವಾರು ಮದರಸಾಗಳನ್ನು ಸರ್ಕಾರ ನಡೆಸುತ್ತಿತ್ತು. ಆದರೆ ಜಾತ್ಯತೀತ ದೇಶದಲ್ಲಿ ಧಾರ್ಮಿಕ ಶಿಕ್ಷಣ ಸಾರ್ವಜನಿಕ ಹಣದಿಂದ ನಡೆಯಲು ಯಾವುದೇ ಅವಕಾಶ ಇರಬಾರದು, ನಿಮಗೆ ಬೇಕಿದ್ದರೆ ನಿಮ್ಮ ಹಣದಿಂದ ಮದರಸಾಗಳನ್ನು ಸೃಷ್ಟಿ ಮಾಡಿಕೊಳ್ಳಿ. ಆದರೆ ತೆರಿಗೆ ಹಣವನ್ನು ನಾವು ಕೇವಲ ಧಾರ್ಮಿಕ ಶಿಕ್ಷಣವನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿ ಸಚಿವರಾದ ಹಿಮಂತ ಬಿಸ್ವ ಶರ್ಮಾರವರು ರಾಜ್ಯದ ಎಲ್ಲಾ ಸರ್ಕಾರಿ ಮದರಸಾಗಳನ್ನು ಮುಂದಿನ ತಿಂಗಳಿನಿಂದ ಮುಚ್ಚುವುದಾಗಿ ಆದೇಶ ಹೊರಡಿಸಿದ್ದಾರೆ. ಯಾವುದೇ ಧಾರ್ಮಿಕ ಶಿಕ್ಷಣ ಸಂಸ್ಥೆಯನ್ನು ನಡೆಸಲು ತೆರಿಗೆ ಹಣವನ್ನು ಬಳಸುವುದು ಸರಿ ಇಲ್ಲ, ಸರ್ಕಾರಿ ಶಾಲೆಗಳಲ್ಲಿ ಉಚಿತ ಪಾಠ ಸಿಗುತ್ತದೆ. ಅಲ್ಲಿ ಬಂದು ಎಲ್ಲರೂ ಸಮಾನರಾಗಿ ವಿದ್ಯೆಯನ್ನು ಕಲಿಯಬಹುದಾಗಿದೆ ಎಂದು ಹೇಳಿದ್ದಾರೆ. ಇನ್ನು ಈ ಆದೇಶ ಹೊರಬೀಳುತ್ತಿದ್ದಂತೆ ವಿಪಕ್ಷಗಳು ನಾವು ಅಧಿಕಾರಕ್ಕೆ ಬಂದರೆ ಈ ಆದೇಶವನ್ನು ವಾಪಸ್ ತೆಗೆದುಕೊಳ್ಳುವುದಾಗಿ ಘೋಷಣೆ ಮಾಡುವ ಮೂಲಕ ರಾಜಕೀಯ ರಂಗು ತಾರಕಕ್ಕೇರಿದೆ. ಈ ನಿರ್ಧಾರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Comments are closed.