ಅಮೆರಿಕದ ನದಿಯಲ್ಲಿ ಸಿಕ್ಕಿದ ನಮ್ಮ ದೇಶದ ಬೆಲೆಬಾಳುವ ವಸ್ತುಗಳು ಇಲ್ಲಿವೆ ನೋಡಿ..!

ಸ್ನೇಹಿತರೆ, ಇಂದು ನಾವು ಅಮೆರಿಕದ ನದಿಗಳಲ್ಲಿ ಸಿಕ್ಕ ಬೆಲೆಬಾಳುವ ಭಾರತ ದೇಶದ ಕೆಲವೊಂದು ವಸ್ತುಗಳ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ, ಮೊದಲನೆಯದಾಗಿ ಮುತ್ತಿನ ಸರ, ಅಮೇರಿಕದ ಒಂದು ಹರಿಯುವ ನದಿಯಲ್ಲಿ ಅಮೆರಿಕದ ಕೆಲವು ಜನರು ಅಂಡರ್ ವಾಟರ್ ಡೈವಿಂಗ್ ಮಾಡುವಾಗ ಬೆಲೆಬಾಳುವ ವಸ್ತು ಯಾವುದಾದರೂ ಸಿಗಬಹುದ ಎಂದು ಹುಡುಕುತ್ತಾ ಇದ್ರು, ಅಷ್ಟರಲ್ಲಿ ಇವರಿಗೆ ಒಂದು ಮುತ್ತಿನಹಾರ ಸಿಗುತ್ತೆ ಇನ್ನು ಕೆಲವೊಂದು ಸಣ್ಣಪುಟ್ಟ ಒಡವೆಗಳು ಸಹ ಸಿಗುತ್ತವೆ. ಇದನ್ನು ನೋಡಿದವರು ಯಾರೂ ಬೇಕಂತಾನೆ ಹಾಕಿರಬಹುದು ಎಂದು ಹೇಳುತ್ತಾರೆ, ಆದರೂ ಒಂದೇಕಡೆ ಅಷ್ಟೊಂದು ಒಡವೆಗಳು ಹೇಗೆ ಸಿಗುತ್ತವೆ ಹೇಳಿ..

ಇನ್ನು ಎರಡನೆಯದಾಗಿ “ತಾಮ್ರದ ಜಾರ್” ನಾವು ಸಾಮಾನ್ಯವಾಗಿ ತಾಮ್ರದ ಚೊಂಬಿನಲ್ಲಿ ಹೋಮ ಮಾಡ್ತೀವಿ, ಅದೇ ರೀತಿ ಈ ತಾಮ್ರದ ಚೊಂಬಲ್ಲಿ ಮಾಟ-ಮಂತ್ರ ಕೂಡ ಮಾಡ್ತಾರೆ ಕೆಲವರು. ಅಂದ್ರೆ ಒಂದು ಚೊಂಬಿನಲ್ಲಿ ಅರಿಶಿನ-ಕುಂಕುಮ ಎಲೆ ಅಡಿಕೆ ಗಳು ಇತ್ಯಾದಿ ಮೂಲಿಕೆಗಳನ್ನು ಹಾಕಿ ತಾಮ್ರದ ತಗಡಿನಲ್ಲಿ ಹೆಸರುಗಳನ್ನು ಬರೆದು ಮಾಟ-ಮಂತ್ರ ಮಾಡುತ್ತಾರೆ. ಈ ರೀತಿಯಾದ ತಾಮ್ರದ ಚೊಂಬು ಸಮುದ್ರದಲ್ಲಿ ಅಂಡರ್ ವಾಟರ್ ಡೈವಿಂಗ್ ಮಾಡ್ತಿದ್ದ ವ್ಯಕ್ತಿಗೆ ಸಿಗುತ್ತದೇ ಅದನ್ನು ಓಪನ್ ಮಾಡಿ ನೋಡಿದರೆ ಅದರ ಒಳಗಡೆ ಅರಿಶಿನ ಕುಂಕುಮ ಮತ್ತು ವ್ಯಕ್ತಿಯ ಹೆಸರು ಬರೆದಿರುವ ಒಂದು ತಾಮ್ರದ ತಗಡು ಸಿಗುತ್ತದೆ.

ಡಾಲ್ ಮಿಡ್ ಎಂಬ ಯುಟ್ಯೂಬ್ ಚಾನಲ್ ನವರು ಅಮೇರಿಕದ ಒಂದು ನದಿಯ ಬ್ರಿಡ್ಜ್ ಪಕ್ಕದಲ್ಲಿ ನದಿಯನ್ನು ಕ್ಲೀನ್ ಮಾಡುತ್ತಿರುವಾಗ ಅವರಿಗೆ ನಾವು ಪೂಜೆಮಾಡುವ ಲಕ್ಷ್ಮಿ ದೇವಿಯ ವಿಗ್ರಹ ಸಿಗುತ್ತದೇ. ಅದರ ಜೊತೆಗೆ ಒಂದು ಬುಕ್ ಕೂಡ ಸಿಗುತ್ತದೇ ಹಾಗೆ ಅದರ ಜೊತೆ ಒಂದು ಸ್ಟ್ಯಾಂಡ್ ಕೂಡ ಸಿಗುತ್ತೆ ಅದರಲ್ಲಿ ಬೆಳ್ಳಿ ಸಾಮಾನುಗಳು ಮತ್ತು ಪೂಜೆಯ ಸಾಮಾನುಗಳು ಇರುತ್ತವೆ, ಅಲ್ಲಿ ಯಾರೂ ಈ ರೀತಿ ವಸ್ತುಗಳನ್ನು ಬಳಸುವುದು ಕಷ್ಟ, ಆದರೆ ಇದನ್ನು ನಮ್ಮ ದೇಶಕ್ಕೆ ಸೇರಿದವರು ಹಾಕಿರ್ತಾರೆ, ಆದರೆ ಇವು ಅಲ್ಲಿಗೆ ಹೇಗೆ ಹೋಯಿತು ಎಂಬುದು ಯಾರಿಗೂ ಗೊತ್ತಿಲ್ಲ..

ಅಲ್ಲದೆ ಕೆಲವು ವ್ಯಕ್ತಿಗಳು ಸಮುದ್ರದಲ್ಲಿ ಅಂಡರ್ ವಾಟರ್ ಡೈವಿಂಗ್ ಮಾಡುತ್ತಿರುವಾಗ ಅವರಿಗೆ ತುಂಬಾ ಬಾರಿ ಕೃಷ್ಣನ ಹಾಗೂ ಗಣಪತಿಯ ಬೆಲೆ ಬಾಳುವ ವಿಗ್ರಹಗಳು ಹಾಗೂ, ಪುರಾತನವಾದ ಹಳೆಯ ಶೈಲಿ ಒಡವೆ ಸಿಕ್ಕಿವೆ ಅಷ್ಟಕ್ಕೂ ಇವೆಲ್ಲ ಅವರಿಗೆ ಹೇಗೆ ಸಿಕ್ಕವು, ಹೇಗೆ ಸಿಗಲು ಸಾದ್ಯ, ನಮ್ಮ ದೇಶದ ವಸ್ತುಗಳನ್ನು ಅಲ್ಲಿಗೆ ತೆಗೆದು ಕೊಂಡು ಹೋದವರು ಯಾರೂ ಎಂದು ಇಂದಿಗೂ ತಿಳಿದಿಲ್ಲ, ಇದೆಲ್ಲವನ್ನೂ ನಾವು ಸೂಕ್ಷ್ಮವಾಗಿ ಗಮನಿಸಿದರೆ ಬಹುಶಃ ಬ್ರಿಟಿಷರು, ನಮ್ಮ ದೇಶದ ಅತ್ಯುತ್ತಮ ಬೆಲೆ ಬಾಳುವ ವಸ್ತುಗಳನ್ನು ಲೂಟಿ ಮಾಡಿಕೊಂಡು ಹಡಗಿನಲ್ಲಿ ಸಾಗಿಸುತಿರುವಾಗ ಸಿಕ್ಕಿರಬಹುದು ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

Comments are closed.