ಏನಿದು ರೈಸ್ ಪುಲ್ಲಿಂಗ್ ರಹಸ್ಯ, ಸಿಡಿಲು ಹೊ’ಡೆದ ತಾಮ್ರದ ಚೊಂಬಿಗೆ ಅಷ್ಟೊಂದು ವಿಶೇಷತೆ ಇದೆಯಾ.!

ಹೌದು ಸ್ನೇಹಿತರೆ, ನೀವು ರೈಸ್ ಪುಲ್ಲಿಂಗ್ ಎಂಬ ಹೆಸರು ಕೇಳಿದಾಕ್ಷಣ ನಿಮ್ಮ ಮೆದುಳಿನಲ್ಲಿ ಮೊದಲನೆಯದಾಗಿ ಅಕ್ಕಿ ದಂದೆ ಎಂದು ಅನಿಸಬಹುದು, ಆದರೆ ಸತ್ಯ ಬೇರೆನೆ ಇದೆ ಖಂಡಿತ ಸ್ನೇಹಿತರೆ ರೈಸ್ ಪುಲ್ಲಿಂಗ್ ಎಂಬ ತಂದೆ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಕಾಣುತ್ತದೆ, ಇದರ ಮುಖ್ಯ ಉದ್ದೇಶವೆಂದರೆ ಒಂದು ತಾಮ್ರದ ವಸ್ತುವನ್ನು ಸಿದ್ಧಪಡಿಸಿ ಅದು ವಿಶೇಷ ಶಕ್ತಿಯನ್ನು ಹೊಂದಿದೆ ಮತ್ತು ಅದನ್ನು ನಾಸಾದ ವಿಜ್ಞಾನಿಗಳು ಹುಡುಕುತ್ತಿದ್ದಾರೆ, ಅದಕ್ಕೆ ಅಮೂಲ್ಯವಾದ ಬೆಲೆ ಮತ್ತು ಶಕ್ತಿ ಇದೆ, ಈ ರೀತಿ ಸುಳ್ಳುಗಳನ್ನು ಹೇಳುತ್ತಾ ಶ್ರೀಮಂತರು ಮತ್ತು ಗ್ರಾಮೀಣ ಪ್ರದೇಶದ ಸಿರಿವಂತರಿಗೆ ಮಂಕುಬೂದಿ ಎರಚಿ ಅವರ ಬಳಿ ಕೋಟಿ ಕೋಟಿ ಹಣವನ್ನು ಲೂಟಿ ಮಾಡುತ್ತಾರೆ.

ಮೊದಲನೆಯದಾಗಿ ನಮ್ಮ ಭಾರತದಲ್ಲಿ ಮೂಡನಂಬಿಕೆ ಮೌಡ್ಯತೆ ಮತ್ತು ಇತರ ಆಚರಣೆಗಳಿಗೆ ಏನು ಕಮ್ಮಿ ಇಲ್ಲ ನಾವು ಸಹ ಹಲವಾರು ಮೂಡನಂಬಿಕೆಗಳು ಅವೈಜ್ಞಾನಿಕವಾದ ಆಚರಣೆಗಳನ್ನು ಮಾಡಿ ಅದನ್ನು ಬಿಟ್ಟು ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಸರಿ ಕೊಂಡಿದ್ದೇವೆ ಖಂಡಿತವಾಗಿ ಒಬ್ಬ ಶ್ರೀಮಂತ ಲಕ್ಷ ಕೊಟ್ಟು ತಾಮ್ರದ ಚೊಂಬನ್ನು ವಸ್ತುವನ್ನು ಖರೀದಿ ಮಾಡಿ ಕೋಟಿ ಕೋಟಿ ಸಂಪಾದನೆ ಮಾಡಬಹುದು ಎಂಬ ದುರಾಸೆಗೆ ಬಿದ್ದು ತನ್ನ ಬಳಿಯಿರುವ ಹಣಗಳನ್ನು ಕಳೆದುಕೊಳ್ಳುತ್ತಾರೆ.

ವೈಜ್ಞಾನಿಕವಾಗಿ ತಾಮ್ರ ಗಳಿಗೆ ವಸ್ತುಗಳನ್ನು ಆಕರ್ಷಿಸುವ ಶಕ್ತಿ ಇದೆ ಇದನ್ನೇ ಬಂಡವಾಳವನ್ನಾಗಿಸಿಕೊಂಡು ಕೆಲವು ವರ್ಗದ ಜನರು ಮೋಸದ ಮತ್ತು ಸುಳ್ಳಿನ ಹಾದಿಯನ್ನು ಹಿಡಿಯುತ್ತಿದ್ದಾರೆ ಆದರೆ ಇವುಗಳಿಗೆ ವಿಶೇಷ ಶಕ್ತಿ ಇರುವುದು ಮತ್ತು ಹಲವಾರು ವಿಜ್ಞಾನಿಗಳು ಈ ಸಿಡಿಲು ಹೊ’ಡೆದ ತಾಮ್ರದ ಚೊಂಬನ್ನು ಅಥವಾ ವಸ್ತುವನ್ನು ಹುಡುಕುತ್ತಿದ್ದಾರೆ ಎಂಬ ಎಲ್ಲಾ ಸಂಗತಿಗಳು ಸತ್ಯಕ್ಕೆ ಮತ್ತು ವೈಜ್ಞಾನಿಕವಾಗಿ ದೂರವಾದದ್ದು.

ಆದ್ದರಿಂದ ಯಾವ ಪ್ರಯೋಜನವೂ ಇಲ್ಲ ಎಂದು ಹೇಳಬಹುದು ಕೇವಲ ಹಣಕ್ಕಾಗಿ ಈ ರೀತಿ ಮೋಸದ ದಾರಿಯನ್ನು ಕೆಲವು ಜನರು ರೂಡಿಸಿಕೊಂಡಿದ್ದಾರೆ ಇವರಿಗೆ ಕಾನೂನಿನ ಮುಖಾಂತರ ಸರಿಯಾದ ಶಿಕ್ಷೆ ಆಗಬೇಕೆಂದು ಆಶಿಸೋಣ ಹಾಗೆ ಎಲ್ಲಿಯವರೆಗೂ ಮೋಸ ಹೋಗುವವರು ಇರುತ್ತಾರೆ ಅಲ್ಲಿಯವರೆಗೂ ಮೋಸ ಮಾಡುವವರು ಸಹ ಇರುತ್ತಾರೆ ಆದ್ದರಿಂದ ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತು ಇರುವಷ್ಟು ದಿನ ಜೀವನವನ್ನು ನಡೆಸಲು ಕಲಿಯೋಣ.

Comments are closed.