News from ಕನ್ನಡಿಗರು

ಮರೆತುಬಿಡಿ ಕಷ್ಟವನ್ನು, ಮುಂದಿನ 21 ದಿನದವರೆಗೂ ಹಣದ ಹೊಳೆಯೇ ಹರಿದು ಬರಲಿದೆ, ಯಾವ್ಯಾವ ರಾಶಿಯವರಿಗೆ ಗೊತ್ತೇ??

36

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರದ ಪ್ರಕಾರ ಬುಧ ಗ್ರಹ ಈ ತಿಂಗಳ ಕೊನೆ ಅಂದರೆ ಜುಲೈ 31ರಂದು ಸಿಂಹ ರಾಶಿಗೆ ಪಾದಾರ್ಪಣೆ ಮಾಡಲಿದ್ದಾನೆ. ಈ ಸಂದರ್ಭದಲ್ಲಿ ಕೆಲವೊಂದು ರಾಶಿಯವರಿಗೆ ಅದೃಷ್ಟದ ಪರಿವರ್ತನೆಯಾಗಲಿದೆ ಹಾಗಿದ್ದರೆ ಬುದನ ರಾಶಿ ಸಂಕ್ರಮಣ ದಿಂದಾಗಿ ಅದೃಷ್ಟವನ್ನು ಪಡೆಯಲಿರುವ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಮೇಷ ರಾಶಿ; ಮೇಷ ರಾಶಿಯವರು ಈ ಸಂದರ್ಭದಲ್ಲಿ ಯಾವುದೇ ಕೆಲಸಕ್ಕೆ ಕೈ ಹಾಕಿದರು ಕೂಡ ನಿರೀಕ್ಷಿತ ಫಲ ವನ್ನು ಎದುರಿಸಲಿದ್ದಾರೆ. ಕೆಲಸದಲ್ಲಿಯೂ ಕೂಡ ಹೆಚ್ಚಿನ ಜವಾಬ್ದಾರಿಯನ್ನು ಪಡೆದುಕೊಳ್ಳಲಿದ್ದಾರೆ ಹಾಗೂ ಹಣದ ವಿಚಾರದಲ್ಲಿ ಕೂಡ ಯಾವುದೇ ಸಮಸ್ಯೆ ಕಂಡು ಬರುವುದಿಲ್ಲ.

ಸಿಂಹ ರಾಶಿ; ಹೊಸ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡಲು ಸಿಂಹರಾಶಿಯವರಿಗೆ ಇದೊಂದು ಪ್ರಶಸ್ತವಾದ ಸಮಯ ಹಾಗೂ ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭದ ನಿರೀಕ್ಷೆ ಕಾಣಬಹುದಾಗಿದೆ.

ಕನ್ಯಾ ರಾಶಿ; ಹಲವಾರು ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳು ದೂರವಾಗಲಿದೆ. ಹೊಸ ಕೆಲಸಕ್ಕಾಗಿ ಪ್ರಯತ್ನಿಸುವವರಿಗೆ ಹಲವಾರು ಉದ್ಯೋಗದ ಅವಕಾಶಗಳ ಬಾಗಿಲು ತೆರೆಯಲಿದೆ. ಒಟ್ಟಾರೆಯಾಗಿ ಈ ಸಂದರ್ಭ ಎನ್ನುವುದು ನಿಮಗೆ ಶುಭಕರವಾಗಿ ಪರಿಣಮಿಸಲಿದೆ.

ಧನು ರಾಶಿ; ಆಗಸ್ಟ್ ತಿಂಗಳು ನಿನಗೆ ಸಂಪೂರ್ಣವಾಗಿ ಅದೃಷ್ಟವನ್ನು ತರಲಿದ್ದು ದಾಂಪತ್ಯ ಜೀವನ ಚೆನ್ನಾಗಿರಲಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದೀರಿ. ನೀವು ಎಷ್ಟು ಕಷ್ಟಪಟ್ಟು ದುಡಿಯುತ್ತಿರೋ ಅಷ್ಟು ಲಾಭ ಸಿಗಲಿದೆ.

ಕುಂಭ ರಾಶಿ; ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಕುಂಭರಾಶಿಯವರಿಗೆ ದೊಡ್ಡ ಮಟ್ಟದ ಲಾಭ ಹರಿದು ಬರಲಿದ್ದು ಕೆಲಸದ ಕ್ಷೇತ್ರದಲ್ಲಿರುವವರಿಗೆ ಪ್ರಮೋಷನ್ ಕಂಡುಬರಲಿದೆ ಹಲವಾರು ದಿನಗಳಿಂದ ಕಂಕಣಭಾಗ್ಯ ಕ್ಕಾಗಿ ಕಾಯುತ್ತಿರುವ ವರಿಗೆ ಮದುವೆಯಾಗಲಿದೆ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Leave A Reply

Your email address will not be published.