50 ದಿನಗಳನ್ನು ಪೂರೈಸಿದ ಬಡವ ರಾಸ್ಕಲ್; ನಿರ್ಮಾಪಕ ಡಾಲಿ ಧನಂಜಯ್ ಜೇಬಿಗೆ ಬಂದ ಹಣ ಎಷ್ಟು ಕೋಟಿ ಗೊತ್ತಾ?? ಭರ್ಜರಿ ಕಲೆಕ್ಷನ್.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಯುವ ಉದಯೋನ್ಮುಖ ನಟರಲ್ಲಿ ಡಾಲಿ ಧನಂಜಯ್ ರವರು ಪ್ರಥಮ ಸ್ಥಾನದಲ್ಲಿ ಕಾಣಸಿಗುತ್ತಾರೆ. ಕಳೆದ ವರ್ಷ ಅವರು ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾಗಳಲ್ಲಿ ಮಿಂಚಿದ್ದಾರೆ. ಹೌದು ದುನಿಯಾ ವಿಜಯ್ ನಾಯಕ ನಟನಾಗಿ ನಟಿಸಿರುವ ಚಲನಚಿತ್ರದಲ್ಲಿ ಪೊಲೀಸ್ ಆಫೀಸರ್ ಆಗಿ ಮಿಂಚಿದ್ದರು. ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ಅವರದೇ ನಿರ್ಮಾಣದಲ್ಲಿ ಹಾಗೂ ನಾಯಕತ್ವದಲ್ಲಿ ಮೂಡಿ ಬಂದಿರುವ ಬಡವ ರಾಸ್ಕಲ್ ಚಿತ್ರ ಬಾಕ್ಸಾಫೀಸ್ ನಲ್ಲಿ ದೊಡ್ಡಮಟ್ಟದ ಸೌಂಡ್ ಮಾಡಿತ್ತು.

ಇತ್ತೀಚಿನ ದಿನಗಳಲ್ಲಿ ಡಾಲಿ ಧನಂಜಯ್ ರವರು ತಮ್ಮ ಕರಿಯರ್ ನ ಉತ್ತುಂಗದಲ್ಲಿದ್ದಾರೆ ಎಂದು ನಿಸ್ಸಂಶಯವಾಗಿ ಹೇಳಬಹುದಾಗಿದೆ. ಡಾಲಿ ಧನಂಜಯ್ ಅವರು ನಟಿಸಿ ನಿರ್ಮಿಸಿರುವ ಬಡವ ರಾಸ್ಕಲ್ ಚಿತ್ರ ಡಿಸೆಂಬರ್ 25ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಅಮೃತ ಅಯ್ಯಂಗಾರ್ ನಾಗಭೂಷಣ ರಂಗಾಯಣರಘು ತಾರಾ ಹೀಗೆ ಹಲವಾರು ಖ್ಯಾತ ಕಲಾವಿದರು ನಟಿಸಿದ್ದರು. ವಾಸುಕಿ ವೈಭವ್ ಅವರ ಸಂಗೀತವೂ ಕೂಡ ಚಿತ್ರಕ್ಕಿತ್ತು. ಚಿತ್ರವು ಈಗಾಗಲೇ ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಸಂಪೂರ್ಣವಾಗಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ.

dhananjay amrutha iyengar badava rascal | 50 ದಿನಗಳನ್ನು ಪೂರೈಸಿದ ಬಡವ ರಾಸ್ಕಲ್; ನಿರ್ಮಾಪಕ ಡಾಲಿ ಧನಂಜಯ್ ಜೇಬಿಗೆ ಬಂದ ಹಣ ಎಷ್ಟು ಕೋಟಿ ಗೊತ್ತಾ?? ಭರ್ಜರಿ ಕಲೆಕ್ಷನ್.
50 ದಿನಗಳನ್ನು ಪೂರೈಸಿದ ಬಡವ ರಾಸ್ಕಲ್; ನಿರ್ಮಾಪಕ ಡಾಲಿ ಧನಂಜಯ್ ಜೇಬಿಗೆ ಬಂದ ಹಣ ಎಷ್ಟು ಕೋಟಿ ಗೊತ್ತಾ?? ಭರ್ಜರಿ ಕಲೆಕ್ಷನ್. 2

ಡಿಜಿಟಲ್ ಪ್ಲಾಟ್ಫಾರ್ಮ್ ಗಳಲ್ಲಿ ಕೂಡ ಈಗಾಗಲೇ ಪ್ರಸಾರವನ್ನು ಆರಂಭಿಸಿದೆ. ಒಟ್ಟಾರೆಯಾಗಿ ಡಾಲಿ ಧನಂಜಯ್ ರವರು ಬಾಕ್ಸಾಫೀಸ್ ನಲ್ಲಿ ಬಡವ ರಾಸ್ಕಲ್ ಚಿತ್ರದ ಮೂಲಕ ಗಳಿಸಿದ್ದೆಷ್ಟು ಎಂಬುದನ್ನು ತಿಳಿದುಕೊಳ್ಳೋಣ. ಬಡವ ರಾಸ್ಕಲ್ ಚಿತ್ರದ ಮೂಲಕ ಮೊತ್ತ ಮೊದಲ ಬಾರಿಗೆ ಡಾಲಿ ಧನಂಜಯ್ ರವರು ನಿರ್ಮಾಪಕನಾಗಿ ಕಾಣಿಸಿಕೊಳ್ಳುತ್ತಾರೆ. ಬಡವ ರಸ್ಕಲ್ ಚಿತ್ರ ರಾಜ್ಯಾದ್ಯಂತ ಭರ್ಜರಿಯಾಗಿ ಪ್ರದರ್ಶನ ಕಂಡು ಒಟ್ಟಾರೆಯಾಗಿ 23 ಕ್ಕೂ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ನಿರ್ಮಾಪಕನಾಗಿ ಹೊಸ ಜರ್ನಿ ಯನ್ನು ಆರಂಭಿಸಿರುವ ಡಾಲಿ ಧನಂಜಯ್ ರವರಿಗೆ ಮೊದಲ ಯತ್ನದಲ್ಲೇ ಅಭೂತಪೂರ್ವ ಯಶಸ್ಸು ಸಿಕ್ಕಿರುವುದು ನಿಜಕ್ಕೂ ಕೂಡ ಪ್ರಶಂಸಾರ್ಹ.

Comments are closed.