ತೆಲುಗು ಲೆಜೆಂಡರಿ ನಟ ಬಾಲಯ್ಯ ರವರ ಮನೆಗೆ ನೇರವಾಗಿ ಕಾರು ನುಗ್ಗಿಸಿದ ಯುವತಿ, ಕಾರಣ ಕೇಳಿ ಒಳ್ಳೆಯದು ಎನಿಸಿದರೂ, ಹುಟ್ಟಿರುವ ಅನುಮಾನವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ತೆಲುಗು ಚಿತ್ರರಂಗದ ಲೆಜೆಂಡರಿ ನಟರಲ್ಲಿ ನಂದಮೂರಿ ಬಾಲಕೃಷ್ಣ ಕೂಡ ಒಬ್ಬರು. ಎಲ್ಲರೂ ಇವರನ್ನು ಪ್ರೀತಿಯಿಂದ ಬಾಲಯ್ಯ ಎಂದೇ ಕರೆಯುತ್ತಾರೆ. ಬಾಲಯ್ಯ ತೆಲುಗು ಚಿತ್ರರಂಗದ ಹಿರಿಯ ನಟರಲ್ಲಿ ಒಬ್ಬರಾಗಿದ್ದಾರೆ. ಇಂದಿಗೂ ಈ ವಯಸ್ಸಿನಲ್ಲಿಯೂ ಕೂಡ ನಾಯಕನಾಗಿ ತೆಲುಗು ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದಾರೆ. ಬಾಲಯ್ಯ ರವರ ಜನಪ್ರಿಯತೆಯನ್ನುವುದು ಕೇವಲ ತೆಲುಗು ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಹರಡಿದೆ.

ಎನ್ಟಿಆರ್ ಅವರ ಪುತ್ರರಾಗಿರುವ ಬಾಲಯ್ಯ ನವರು ನಟನೆಯಲ್ಲಿ ಅವರ ಉತ್ತರಾಧಿಕಾರಿಯಾಗಿ ತೆಲುಗು ರಾಜ್ಯದಲ್ಲಿ ಜನಪ್ರಿಯತೆಯನ್ನು ಸಂಪಾದಿಸಿದ್ದಾರೆ. ಇನ್ನು ಕೇವಲ ನಟನೆಯಲ್ಲಿ ಮಾತ್ರವಲ್ಲದೆ ರಾಜಕೀಯದಲ್ಲಿ ಕೂಡ ಅವರ ಕ್ಷೇತ್ರದಲ್ಲಿ ಗೆದ್ದು ಹಲವಾರು ಬಾರಿ ಸಂಸತ್ತಿನಲ್ಲಿ ಪ್ರತಿನಿಧಿಸಿದ್ದಾರೆ. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಬೇರೆ ವಿಚಾರ ಕುರಿತಂತೆ. ಹೌದು ಗೆಳೆಯರೇ ಇತ್ತೀಚೆಗಷ್ಟೇ ಅವರ ಜುಬ್ಲಿಹಿಲ್ಸ್ ನಲ್ಲಿರುವ ಮನೆಯ ಗೇಟಿಗೆ ಒಬ್ಬ ಹುಡುಗಿ ಮಹಿಂದ್ರ ಜೀಪಿನಲ್ಲಿ ಗುದ್ದಿದ್ದಾಳೆ ಎಂಬುದಾಗಿ ತಿಳಿದುಬಂದಿದೆ.

balakrishna | ತೆಲುಗು ಲೆಜೆಂಡರಿ ನಟ ಬಾಲಯ್ಯ ರವರ ಮನೆಗೆ ನೇರವಾಗಿ ಕಾರು ನುಗ್ಗಿಸಿದ ಯುವತಿ, ಕಾರಣ ಕೇಳಿ ಒಳ್ಳೆಯದು ಎನಿಸಿದರೂ, ಹುಟ್ಟಿರುವ ಅನುಮಾನವೇನು ಗೊತ್ತೇ??
ತೆಲುಗು ಲೆಜೆಂಡರಿ ನಟ ಬಾಲಯ್ಯ ರವರ ಮನೆಗೆ ನೇರವಾಗಿ ಕಾರು ನುಗ್ಗಿಸಿದ ಯುವತಿ, ಕಾರಣ ಕೇಳಿ ಒಳ್ಳೆಯದು ಎನಿಸಿದರೂ, ಹುಟ್ಟಿರುವ ಅನುಮಾನವೇನು ಗೊತ್ತೇ?? 2

ಕೆಲವರು ಹೇಳುವಂತೆ ಆಂಬುಲೆನ್ಸ್ ಅನ್ನೋದು ತಪ್ಪಿಸಲು ಹೋಗಿ ಡಿವೈಡರ್ ಮೇಲಿನ ನಿಯಂತ್ರಣ ತಪ್ಪಿ ಬಾಲಯ್ಯ ಅವರ ಗೇಟಿಗೆ ಗುದ್ದಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜ ಎನ್ನುವುದನ್ನು ತನಿಖೆಯಲ್ಲಿ ಕಾದುನೋಡಬೇಕಾಗಿದೆ. ಯಾಕೆಂದರೆ ಈ ಹಿಂದೆ ಬಾಲಯ್ಯ ರವರ ಹಿಂದೂಪುರದ ಮನೆಯ ಮೇಲೆ ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ದಾ’ಳಿ ಮಾಡಿದ್ದನ್ನು ಈ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳಬಹುದಾಗಿದೆ. ಹೀಗಾಗಿ ಈ ಘಟನೆ ಕೂಡ ಅದಕ್ಕೆ ತಳುಕು ಹಾಕಿಕೊಳ್ಳುವ ಎಲ್ಲಾ ನಿರೀಕ್ಷೆಗಳು ಕೂಡ ಕಾಣುತ್ತಿವೆ. ಈ ಸಂದರ್ಭದಲ್ಲಿ ಹುಡುಗಿ ಮದ್ಯಪಾನವನ್ನು ಸೇವಿಸಿ ಗಾಡಿಯನ್ನು ಚಲಾಯಿಸುತ್ತಿದ್ದಳು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಎಲ್ಲಾ ಸಾಧ್ಯತೆಗಳನ್ನು ಪೊಲೀಸರು ಈಗಾಗಲೇ ಗಾಡಿಯನ್ನು ಸೀಸ್ ಮಾಡಿ ಆ ಹುಡುಗಿಯನ್ನು ಕೂಡ ಕಸ್ಟಡಿಯಲ್ಲಿ ಇರಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ಈ ಕುರಿತಂತೆ ಫಲಿತಾಂಶ ಹೊರಬೀಳಬೇಕಾಗಿದೆ.

Comments are closed.