ಕನ್ನಡತಿ ಯಲ್ಲಿ ಜನರ ನೆಚ್ಚಿನ ಪಾತ್ರದಲ್ಲಿ ಮಹತ್ವದ ಟ್ವಿಸ್ಟ್, ಅಮ್ಮಮ್ಮ ರವರ ಪಾತ್ರದಲ್ಲಿ ಪಡೆದುಕೊಳ್ಳುತ್ತಿರುವ ತಿರುವು ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕಲರ್ಸ್ ಕನ್ನಡ ವಾಹಿನಿಯ ಕನ್ನಡತಿ ಧಾರಾವಾಹಿ ಕನ್ನಡ ಚಿತ್ರರಂಗದ ಕಿರುತೆರೆಯ ಧಾರಾವಾಹಿ ಕ್ಷೇತ್ರದಲ್ಲಿ ಒಂದು ದೊಡ್ಡಮಟ್ಟದ ಸಂಚಲನವನ್ನು ಸೃಷ್ಟಿಸಿರುವ ಧಾರವಾಹಿ ಎಂದರೆ ತಪ್ಪಾಗಲಾರದು. ಇನ್ನು ಈ ಧಾರವಾಹಿಯ ಬಹುತೇಕ ಎಲ್ಲಾ ಪಾತ್ರಗಳು ಕೂಡ ಪ್ರೇಕ್ಷಕರಿಗೆ ಇಷ್ಟ ಆಗಿರುತ್ತದೆ. ಸದ್ಯಕ್ಕೆ ಭುವಿ ಹಾಗೂ ಹರ್ಷ ಇಬ್ಬರು ಕೂಡ ಅತಿ ಶೀಘ್ರದಲ್ಲಿ ಮದುವೆಯಾಗುವುದು ಫಿಕ್ಸ್ ಆಗಿದೆ. ಇನ್ನು ಸಿಗಂದೂರು ಚೌಡೇಶ್ವರಿ ತಾಯಿಯ ಸನ್ನಿಧಿಯಲ್ಲಿ ಮದುವೆ ಆಹ್ವಾನಪತ್ರಿಕೆಯ ಪೂಜೆ ಕೂಡ ನಡೆದಿದೆ.

ಅತಿಶೀಘ್ರದಲ್ಲೇ ಭುವಿ ಹಾಗೂ ಹರ್ಷ ಮದುವೆಯಾಗಲು ಸಜ್ಜಾಗಿ ನಿಂತಿದ್ದಾರೆ. ಇನ್ನು ಹರ್ಷನ ತಾಯಿಯಾಗಿರುವ ರತ್ನಮಾಲಾ ರವರು ಭುವಿಯ ಹೆಸರಿನಲ್ಲಿ ತನ್ನ ಆಸ್ತಿಯನ್ನು ಬರೆದು ವಿಲ್ ಬರೆದಿಟ್ಟಿದ್ದಾರೆ. ಇನ್ನು ವಿಲ್ ನ್ನು ಕೂಡ ತಾಯಿ ಸಿಗಂದೂರು ಚೌಡೇಶ್ವರಿ ಸನ್ನಿಧಿಗೆ ಅರ್ಪಿಸಿದ್ದಾರೆ. ಒಂದು ಕಡೆ ಸಾನಿಯಾ ಈ ಮದುವೆ ಆಗಬಾರದು ಎನ್ನುವ ಕಾರಣಕ್ಕಾಗಿ ಹಲವಾರು ಕುತಂತ್ರವನ್ನು ನಿರ್ಮಿಸುತ್ತಿದ್ದಾಳೆ. ಯಾಕೆಂದರೆ ಅವಳಿಗೆ ಆಸ್ತಿ ಕೈಬಿಟ್ಟು ಹೋಗುತ್ತದೆ ಎನ್ನುವ ಚಿಂತೆ. ಇದಕ್ಕಾಗಿ ವರುದಿನಿ ಯ ಬ್ರೈನ್ ವಾಷ್ ಕೂಡ ಮಾಡುತ್ತಿದ್ದಾಳೆ. ಇನ್ನೊಂದು ಕಡೆ ವರುದಿನಿ ಕೂಡ ಇವರಿಬ್ಬರ ಮದುವೆ ಆಗಬಾರದು ಎನ್ನುವುದನ್ನು ಕಲ್ಪಿಸಿ ಕೊಳ್ಳುತ್ತಿದ್ದಾಳೆ. ಯಾಕೆಂದರೆ ಆಕೆಗೆ ಹರ್ಷನ ಮೇಲಿರುವ ಪ್ರೀತಿ ಈ ಮದುವೆಯನ್ನು ನಿಲ್ಲಿಸಲು ಏನು ಬೇಕಾದರೂ ಕೂಡ ಮಾಡುವಂತಹ ಸ್ಥಿತಿಯಲ್ಲಿದ್ದಾಳೆ.

kannadati ammamma | ಕನ್ನಡತಿ ಯಲ್ಲಿ ಜನರ ನೆಚ್ಚಿನ ಪಾತ್ರದಲ್ಲಿ ಮಹತ್ವದ ಟ್ವಿಸ್ಟ್, ಅಮ್ಮಮ್ಮ ರವರ ಪಾತ್ರದಲ್ಲಿ ಪಡೆದುಕೊಳ್ಳುತ್ತಿರುವ ತಿರುವು ಏನು ಗೊತ್ತೇ??
ಕನ್ನಡತಿ ಯಲ್ಲಿ ಜನರ ನೆಚ್ಚಿನ ಪಾತ್ರದಲ್ಲಿ ಮಹತ್ವದ ಟ್ವಿಸ್ಟ್, ಅಮ್ಮಮ್ಮ ರವರ ಪಾತ್ರದಲ್ಲಿ ಪಡೆದುಕೊಳ್ಳುತ್ತಿರುವ ತಿರುವು ಏನು ಗೊತ್ತೇ?? 2

ಹೀಗಾಗಿ ರತ್ನಮಾಲ ಯಾವತ್ತೂ ಕೂಡ ನಿನ್ನ ಪಾಲಿಗೆ ಏನೇ ಬಂದಿರುವುದನ್ನು ಬಿಟ್ಟು ಕೊಡಬೇಡ ಎಂಬುದಾಗಿ ಭುವಿಯ ಬಳಿ ಹಾಗೂ ಭುವಿಯನ್ನು ಬಿಟ್ಟು ಎಲ್ಲಿಗೂ ಹೋಗಬೇಡ ಎನ್ನುವುದಾಗಿ ಹರ್ಷದ ಬಳಿ ಮಾತನ್ನು ಪಡೆದುಕೊಂಡಿದ್ದಾರೆ. ಅತಿ ಶೀಘ್ರದಲ್ಲೇ ಕನ್ನಡತಿ ಧಾರವಾಹಿಯ ಒಂದು ಪ್ರಮುಖ ಪಾತ್ರ ಮುಕ್ತಾಯವಾಗಲಿದೆ ಎಂಬುದಾಗಿ ಸುದ್ದಿ ಕೇಳಿಬರುತ್ತಿದೆ. ಹೌದು ಗೆಳೆಯರೇ ಅದು ಬೇರೆ ಯಾವ ಪಾತ್ರವೂ ಅಲ್ಲ ರತ್ನಮಾಲ ಪಾತ್ರವಾಗಿದೆ. ಯಾಕೆಂದರೆ ಹರ್ಷ ಹಾಗೂ ಭುವಿ ಇಬ್ಬರಿಂದಲೂ ಕೂಡ ಭಾಷೆಯನ್ನು ತೆಗೆದುಕೊಳ್ಳುತ್ತಿರುವುದು ಹಾಗೂ ಈಗಾಗಲೇ ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿರುವ ಅವರ ಪಾತ್ರ ಮದುವೆ ಮುಗಿದ ನಂತರವೇ ಕೂಡಲೇ ಮುಕ್ತಾಯವಾಗಲಿದೆ ಎಂಬುದಾಗಿ ಕೇಳಿಬಂದಿದೆ. ಇದು ಎಷ್ಟರ ಮಟ್ಟಿಗೆ ಸತ್ಯ ಅಥವಾ ಸುಳ್ಳು ಎನ್ನುವುದನ್ನು ಅತಿ ಶೀಘ್ರದಲ್ಲಿ ನಾವು ಧಾರವಾಹಿ ಮೂಲಕವೇ ನೋಡಬೇಕಾಗಿದೆ.

Comments are closed.