Bank Loan: ಜನರ ಕಷ್ಟವನ್ನು ಅರ್ಥ ಮಾಡಿಕೊಂಡ ಬ್ಯಾಂಕ್: ಜಸ್ಟ್ 15 ನಿಮಿಷದಲ್ಲಿ ಹೊಸ ಲೋನ್, ಕೊಡಲು ನಿರ್ಧಾರ. ಏನು ಮಾಡಬೇಕು ಗೊತ್ತೇ??
Bank Loan: ಬ್ಯಾಂಕುಗಳಲ್ಲಿ ಬೇರೆ ಬೇರೆ ರೀತಿಯ ಸಾಲ ಮತ್ತು ಲೋನ್ ಗಳನ್ನು ತೆಗೆದುಕೊಳ್ಳುವ ಅನುಕೂಲವನ್ನು ಮಾಡಿಕೊಡಲಾಗಿದೆ. ಆದರೆ ಈ ರೀತಿ ಸಾಲ ಪಡೆಯುವುದಕ್ಕಾಗಿ ಅನೇಕ ಹಂತದ ವಿಧಾನ ಇರುತ್ತದೆ. ಒಂದು ಸಣ್ಣ ಸಾಲ ಪಡೆಯುವುದಕ್ಕಾಗಿಯೂ ಕೂಡ ದಿನಗಟ್ಟಲೆ, ವಾರಗಟ್ಟಲೆ ಅಲೆದಾಡಬೇಕಾಗುತ್ತದೆ. ಆದರೆ ಇದೀಗ ಸಾಲ ಪಡೆಯಲು ಬರಿ ಕೇವಲ ಕೆಲವು ನಿಮಿಷಗಳು ಸಾಕು ಎಂದರೆ ಆಶ್ಚರ್ಯ ಆಗುತ್ತದೆ ಅಲ್ಲವೇ, ಆದರೆ ಇದು ಪೂರ್ತಿ ಸತ್ಯ. ಕೇವಲ 15 ನಿಮಿಷದಲ್ಲಿ ನಾವು ಸಾಲ ಪಡೆದುಕೊಳ್ಳಬಹುದು. ಅದು ಗೃಹ ಸಾಲವೇ ಇರಲಿ, ವೈಯಕ್ತಿಕ ಸಾಲವೇ ಇರಲಿ ಎಂತದೇ ಲೋನ್ ಕೇವಲ 15 ನಿಮಿಷದಲ್ಲಿ ಪಡೆಯಬಹುದಾಗಿದೆ. ಇದೀಗ ಬ್ಯಾಂಕುಗಳು ಡಿಜಿಟಲ್ ಆಗಿವೆ. ಹೀಗಾಗಿ ಆನ್ಲೈನ್ ಮುಖಾಂತರವೂ ಸಾಲ ಪಡೆಯಬಹುದಾಗಿದೆ. ಇದೇ ಕಾರಣಕ್ಕಾಗಿ ಬ್ಯಾಂಕ್ ಆಫ್ ಬರೋಡ ತನ್ನ ಗ್ರಾಹಕರಿಗಾಗಿ ಇಂತಹ ಹೊಸ ಸಾಲದ ಅನುಕೂಲವನ್ನು ಮಾಡಿಕೊಡುತ್ತಿದೆ. ಈ ರೀತಿಯಾಗಿ ತ್ವರಿತವಾಗಿ ಹೇಗೆ ಸಾಲ ಪಡೆಯುವುದು ಎನ್ನುವುದರ ಸಂಪೂರ್ಣ ವಿವರಣೆ ಇಲ್ಲಿದೆ.
ಗೃಹ ಸಾಲ ಪಡೆಯಬೇಕಾದವರು ಮೊದಲಿಗೆ ಬ್ಯಾಂಕ್ ಆಫ್ ಬರೋಡ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ, ಅದರಲ್ಲಿರುವ ಡಿಜಿಟಲ್ ಹೋಂ ಲೋನ್ ಆಯ್ಕೆಯನ್ನು ಒತ್ತುವುದರ ಮೂಲಕ ಅನೇಕ ಆಪ್ಷನ್ ಗಳು ತೆರೆದುಕೊಳ್ಳುತ್ತವೆ. ಅಲ್ಲಿ ನಮ್ಮ ಸಂಪೂರ್ಣ ವಿವರಗಳನ್ನು ಭರ್ತಿ ಮಾಡಿ ನಾವು ಸಾಲ ಪಡೆಯಲು ನಮ್ಮ ಅರ್ಹತೆಯನ್ನು ತಿಳಿದುಕೊಳ್ಳಬಹುದು. ಗೃಹ ಸಾಲ ಪಡೆಯುವವರಿಗೆ ಶೇಕಡಾ 8.6 ಪ್ರತಿಶತ ಬಡ್ಡಿ ದರ ಇರುತ್ತದೆ. ಇದಲ್ಲದೆ ಈ ರೀತಿ ಗೃಹ ಸಾಲ ಪಡೆಯುವವರಿಗಾಗಿಯೇ ಸಂಸ್ಕರಣ ಶುಲ್ಕ ವಿನಾಯಿತಿ ಪ್ರಯೋಜನವು ಇರಲಿದೆ. ಇನ್ನು ವೈಯಕ್ತಿಕ ಸಾಲ ಪಡೆಯಲು ಬಯಸುವವರು ಮೊದಲಿನಂತೆಯೇ ಬ್ಯಾಂಕ್ ಆಫ್ ಬರೋಡ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ಅಲ್ಲಿ ಪರ್ಸನಲ್ ಲೋನ್ ಆಯ್ಕೆ ತೆರೆದುಕೊಳ್ಳುತ್ತದೆ. ಅದರಲ್ಲಿ ಪೂರ್ವ ಅನುಮೋದಿತ ವಯಕ್ತಿಕ ಸಾಲ ಹಾಗೂ ಡಿಜಿಟಲ್ ವೈಯಕ್ತಿಕ ಸಾಲ ಎನ್ನುವ ಎರಡು ಆಯ್ಕೆಗಳು ನಮಗೆ ಕಾಣಿಸುತ್ತವೆ. ನಮ್ಮ ಅನುಕೂಲಕ್ಕೆ ತಕ್ಕಂತೆ ಸಾಲದ ಆಯ್ಕೆ ಮಾಡಿ ವಿವರಗಳನ್ನು ಭರ್ತಿ ಮಾಡಿ, ನಾವು ಸಾಲ ಪಡೆಯಲು ಅರ್ಹರೆ ಎನ್ನುವುದನ್ನು ಪರೀಕ್ಷಿಸಿಕೊಳ್ಳಬಹುದು. ನಮ್ಮ ಆದ್ಯತೆಯ ಆಯ್ಕೆ ಮಾಡಿಕೊಳ್ಳಬಹುದು. ಡಿಜಿಟಲ್ ವೈಯಕ್ತಿಕ ಸಾಲ ಗರಿಷ್ಠ 10 ಲಕ್ಷದವರೆಗೂ ಪಡೆದುಕೊಳ್ಳಬಹುದಾಗಿದೆ ಹಾಗೂ ಇದರ ಬಡ್ಡಿದರ 11.75 ಪ್ರತಿಶತ ಇರುತ್ತದೆ. ಇದನ್ನು ಓದಿ..Kannada News: ಬಿರಿಯಾನಿ ತಿಂದು ಉಸಿರು ನಿಲ್ಲಿಸಿದ್ದ ಯುವತಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮೊಬೈಲ್ ನಲ್ಲಿ ಸಿಕ್ಕ ಷಾಕಿಂಗ್ ಮಾಹಿತಿ ಏನು ಗೊತ್ತೇ??
ಮಾತ್ರವಲ್ಲದೆ ಇನ್ನು ಬೇರೆ ಬೇರೆ ರೀತಿಯ ಸಾಲಗಳನ್ನು ಪಡೆದುಕೊಳ್ಳುವ ಪ್ರಯೋಜನವನ್ನು ಕೂಡ ಬ್ಯಾಂಕ್ ಆಫ್ ಬರೋಡ ತನ್ನ ಗ್ರಾಹಕರಿಗೆ ಮಾಡಿಕೊಡುತ್ತಿದೆ. ಕೇವಲ 15 ನಿಮಿಷಗಳಲ್ಲಿ ಆನ್ಲೈನ್ ಮುಖಾಂತರ ಸಾಲ ಪಡೆಯಬಹುದಾಗಿದೆ. ಜೊತೆಗೆ ನಮ್ಮ ಮೊಬೈಲ್ ನಂಬರ್ ಹಾಗೂ ಒಟಿಪಿಯನ್ನು ಭರ್ತಿ ಮಾಡಿ ಸಾಲದ ಪ್ರಯೋಜನ ಪಡೆದುಕೊಳ್ಳಬಹುದು. ಇಂತಹದೊಂದು ಮಾಹಿತಿಯನ್ನು ಬ್ಯಾಂಕ್ ಆಫ್ ಬರೋಡ ತನ್ನ ಅಧಿಕೃತ ವೆಬ್ಸೈಟ್ ಹಾಗೂ ವಿವಿಧ ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿಸಿದೆ. ವೈಯಕ್ತಿಕ ಸಾಲ ಪಡೆಯುವ ಉದ್ದೇಶ ಇರುವವರು ಕೇವಲ 15 ನಿಮಿಷದಲ್ಲಿ ಆನ್ಲೈನ್ ಮೂಲಕ ಅರ್ಜಿ ಭರ್ತಿ ಮಾಡಿ ಸಾಲ ಪಡೆಯಬಹುದಾಗಿದೆ. ಜೊತೆಗೆ ಗೃಹ ಸಾಲ ಪಡೆಯಲು ಬಯಸುವವರು ಕೇವಲ 30 ನಿಮಿಷದಲ್ಲಿ ಆನ್ಲೈನ್ ಮುಖಾಂತರ ಬರೋಬ್ಬರಿ 10 ಕೋಟಿಯವರೆಗೂ ಸಾಲ ಪಡೆಯಬಹುದಾಗಿದೆ ಎಂದು ಬ್ಯಾಂಕ್ ಹೇಳಿಕೊಂಡಿದೆ. ಇದನ್ನು ಓದಿ.. Kannada News: ಕ್ರಾಂತಿ ಸಿನಿಮಾ ನೋಡಿ ದಿಡೀರ್ ಎಂದು ದರ್ಶನ್ ಮನೆಗೆ ಹೋದ ರಕ್ಷಿತಾ. ಹೇಳಿದ್ದೇನು ಗೊತ್ತೇ?? ಡಿ ಬಾಸ್ ಕೂಡ ಶಾಕ್ ಆಗಿದ್ದು ಯಾಕೆ ಗೊತ್ತೇ?
Comments are closed.