Kannada Astrology: ಮಂಗಳ ದೇವನ ರಾಶಿ ಪ್ರವೇಶ ಮಾಡಿದ ರಾಹು: ಇನ್ನು ಮುಂದೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ. ಯಾರ್ಯಾರಿಗೆ ಗೊತ್ತೇ??
Kannada Astrology: ಈ ವರ್ಷ ಅಕ್ಟೋಬರ್ ತಿಂಗಳಿಗೆ ರಾಹು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಅಲ್ಲಿಯವರೆಗೂ ಕೂಡ ವೃಷಭ ರಾಶಿಯಲ್ಲಿ ರಾಹು ವಿರಾಜಮಾನನಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿರುತ್ತಾನೆ. ಇತ್ತ ಕುಂಭ ರಾಶಿಯಲ್ಲಿ ಶನಿಯ ಸಂಚಾರದಿಂದಾಗಿ ರಾಹು ಮತ್ತು ಶನಿ ಗ್ರಹಗಳು ತಮ್ಮ ಕೇಂದ್ರ ಸ್ಥಾನವನ್ನು ಭದ್ರಪಡಿಸಿಕೊಂಡಿವೆ. ಹೀಗಾಗಿ ರಾಹು ಮತ್ತು ಶನಿಯ ಪರಿಣಾಮದಿಂದ ವೃಷಭ ರಾಶಿಯವರಿಗೆ ಅತ್ಯುತ್ತಮ ಶುಭ ಲಾಭಗಳು ದೊರೆಯಲಿವೆ. ಜೊತೆಗೆ ರಾಹು ಮತ್ತು ಶನಿಯ ಈ ರಾಶಿ ಪರಿವರ್ತನೆಯಿಂದಾಗಿ ಕುಂಭ ರಾಶಿಯವರೆಗೂ ಅತ್ಯುತ್ತಮ ಪ್ರಯೋಜನಗಳು ಆಗಲಿದೆ. ಹಾಗಿದ್ದರೆ ಈ ರಾಶಿ ಸಂಕ್ರಮಣದಿಂದ ಯಾವೆಲ್ಲ ರಾಶಿಯವರಿಗೆ ಅದೃಷ್ಟದ ಫಲಗಳು ಸಿದ್ಧಿಸಲಿದೆ ಎನ್ನುವುದನ್ನು ಇಲ್ಲಿ ತಿಳಿಯಿರಿ.
ಮಿಥುನ ರಾಶಿ: ರಾಹುವಿನ ರಾಶಿ ಸಂಕ್ರಮಣವು ಮಿಥುನ ರಾಶಿಯ ಏಕಾದಶ ಭಾವದಲ್ಲಿ ಸಂಭವಿಸಲಿದೆ. ಇದರಿಂದಾಗಿ ನೀವು ಮಾಡುವ ಕೆಲಸದಲ್ಲಿ ನಿಮಗೆ ಯಶಸ್ಸು ಸಿಗುತ್ತದೆ. ನಿಮ್ಮ ಕೆಲಸದಿಂದ ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ. ಆರ್ಥಿಕ ಲಾಭವಾಗಲಿದೆ. ಹೊಸ ಉದ್ಯೋಗವು ನಿಮ್ಮನ್ನು ಹುಡುಕಿ ಬರಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭ ಬರಲಿದೆ. ಆರ್ಥಿಕ ಲಾಭವಾಗಿ, ಕುಟುಂಬದಲ್ಲಿ ಸಂತೋಷ ನೆಲೆಸಲಿದೆ. ನಿಮ್ಮ ಜೀವನದಲ್ಲಿ ಅನೇಕ ಮಹತ್ವದ ಬೆಳವಣಿಗೆಗಳು ನಡೆಯಲಿವೆ. ನಿಮಗೆ ಆರ್ಥಿಕ ಸಮಸ್ಯೆ ಕಾಡುತ್ತಿದ್ದರೆ ಅದು ನಿವಾರಣೆಯಾಗಲಿದೆ. ನಿಮ್ಮ ಆರೋಗ್ಯ ಸಮಸ್ಯೆಯೂ ಸರಿ ಹೋಗುತ್ತದೆ. ನಿಮ್ಮ ಕೆಲಸದ ಜವಾಬ್ದಾರಿಯನ್ನು ಪರೀಕ್ಷಿಸಲಾಗುತ್ತದೆ. ಇದನ್ನು ಓದಿ..Kannada Astrology: ಕಷ್ಟದಲ್ಲಿ ಬಳಲುತ್ತಿದ್ದ ರಾಶಿಗಳಿಗೆ ಕೊನೆಗೂ ಅದೃಷ್ಟ: ಇನ್ನು ಈ ರಾಶಿಯವರನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಶುಕ್ರ ದೆಸೆ ಯಾರಿಗೆ ಗೊತ್ತೆ?
ಕರ್ಕ ರಾಶಿ: ರಾಹುವಿನ ರಾಶಿ ಪರಿವರ್ತನೆಯು ಕರ್ಕ ರಾಶಿಯ ಜಾತಕದ ಪ್ರಕಾರ ದಶಮ ಭಾವದಲ್ಲಿ ಗೋಚರಿಸಲಿದೆ. ನಿಮ್ಮ ಪರಿಶ್ರಮ ನಿಮಗೆ ಒಳ್ಳೆಯದನ್ನೇ ಮಾಡುತ್ತದೆ. ಈ ರಾಶಿಯವರು ಇಂದಿನಿಂದ ಇವರು ತೆಗೆದುಕೊಳ್ಳುವ ನಿರ್ಧಾರಗಳು ಇವರನ್ನು ಉತ್ತಮ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತವೆ. ಇವರು ಯಶಸ್ಸಿನ ಮೆಟ್ಟಿಲನ್ನು ಏರುತ್ತಾರೆ ಎಂದು ಹೇಳುತ್ತಿದೆ ಜ್ಯೋತಿಷ್ಯಶಾಸ್ತ್ರ. ವೈವಾಹಿಕ ಜೀವನದಲ್ಲಿ ಸಂತೋಷವನ್ನು ಹೊಂದುತ್ತಾರೆ. ಈ ರಾಶಿಯವರು ಉದ್ಯೋಗ ಹಾಗೂ ಕೆಲಸದಲ್ಲಿ ಯಶಸ್ಸನ್ನು ಗಳಿಸುತ್ತಾರೆ. ನಾಯಕತ್ವದ ಜವಾಬ್ದಾರಿಯನ್ನು ತೆಗೆದುಕೊಂಡರೆ ಯಶಸ್ಸು ಇವರಿಗೆ ಜಾಸ್ತಿ ಆಗುತ್ತದೆ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಬಗೆಹರಿಯುತ್ತವೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ಜಾತಕದ ಅನುಸಾರ ರಾಹು ಗ್ರಹದ ರಾಶಿ ಪರಿವರ್ತನೆ ಷಷ್ಟಮ ಭಾವದಲ್ಲಿ ಕಂಡು ಬರಲಿದೆ. ವಿದ್ಯಾರ್ಥಿಗಳು ಶ್ರಮ ಪಟ್ಟರೆ ಇವರಿಗೆ ಖಂಡಿತ ಒಳ್ಳೆಯ ಫಲ ಅನ್ನುವುದು ಸಿಕ್ಕೇ ಸಿಗುತ್ತದೆ. ಈ ರಾಶಿಯವರು ಸ್ವಲ್ಪ ಬುದ್ಧಿವಂತಿಕೆಯಿಂದ ಕೆಲಸ ಮಾಡಿದರೆ ಯಶಸ್ಸು ನಿಮ್ಮದಾಗುತ್ತದೆ. ನೀವು ನಿಮ್ಮ ಕೋರಿಕೆಯನ್ನು ಈಡೇರಿಸಿಕೊಳ್ಳಲು ಇದು ಬಹಳ ಒಳ್ಳೆಯ ಸಮಯ ಅಂತ ಹೇಳಬಹುದು. ಇಷ್ಟು ದಿನ ಕಷ್ಟಪಟ್ಟು ಮಾಡಿದ ಕೆಲಸಕ್ಕೆ ಒಳ್ಳೆಯ ಲಾಭ ಸಿಗುವ ಸಮಯ ಅಂತ ಹೇಳಬಹುದು. ಮಕ್ಕಳ ವಿದ್ಯಾಭ್ಯಾಸ ಶುರು ಆಗುತ್ತಿದ್ದರೆ ನಿಮ್ಮ ಜೀವನದ ಸುಖಮಯ ದಿನಗಳು ಇನ್ನು ಮುಂದೆ ಆರಂಭವಾಗುತ್ತದೆ. ಇದನ್ನು ಓದಿ..Kannada Astrology: ಅಸ್ತಮವಾಗುತ್ತಿದ್ದಾನೆ ಶನಿ ದೇವ: ಈ ರಾಶಿಗಳ ಕಷ್ಟ ಕೊನೆಗೂ ಅಂತ್ಯವಾಗಿ ಧನಲಾಭ, ಅದೃಷ್ಟ ಹುಡುಕಿಕೊಂಡು ಬರುತ್ತದೆ. ಯಾರಿಗೆ ಗೊತ್ತೆ??
ಕುಂಭ ರಾಶಿ: ರಾಹು ರಾಶಿಯು ಕುಂಭ ರಾಶಿಯ ಜಾತಕದ ಪ್ರಕಾರ ತೃತೀಯ ಭಾವದಲ್ಲಿ ರಾಶಿ ಪರಿವರ್ತನೆಯ ಗೊಚರ ಆಗಲಿದೆ. ರಾಹು ರಾಶಿ ಪರಿವರ್ತನೆಯಿಂದಾಗಿ ಈ ರಾಶಿಯವರ ಮೇಲು ಅದೃಷ್ಟದ ಹರಿದು ಬರಲಿದೆ, ಈ ರಾಶಿಯ ಜನರು ಒಳ್ಳೆಯ ಅದೃಷ್ಟಗಳನ್ನು ಪಡೆಯಲಿದ್ದಾರೆ. ಸಾಕಷ್ಟು ದಿನಗಳಿಂದ ತೊಡಕುಗಳನ್ನು ಎದುರಿಸಿ ಅರ್ಧಕ್ಕೆ ನಿಂತು ಹೋಗಿದ್ದ ಕೆಲಸಗಳು ಇನ್ನು ಮುಂದೆ ಪೂರ್ತಿಯಾಗಲಿವೆ. ಜೀವನ ಇನ್ನು ಮುಂದೆ ಸರಿದೂಗಿಸಿಕೊಂಡು ಹೋಗುವುದಲ್ಲದೆ, ಕುಟುಂಬದಲ್ಲಿ ನೆಮ್ಮದಿ ನೆಲೆಸಲಿದೆ. ನಿಮ್ಮ ಮೇಲೆ ನಿಮ್ಮ ಸುತ್ತಲಿನವರಿಗೆ ಗೌರವ ಹೆಚ್ಚಾಗುತ್ತದೆ.
Comments are closed.