ಬಿಗ್ ಬಾಸ್ ಮನೆಯಲ್ಲಿ ಶುರುವಾಯಿತು ಪ್ರೇಮ ಪಕ್ಷಿಗಳ ಕಲರವ. ನೋಡುಗರಿಗೆ ಹಬ್ಬ: ಅಂದು ದಿವ್ಯ -ಅರವಿಂದ್. ಇಂದು ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪ್ರತಿ ಬಾರಿ ಬಿಗ್ ಬಾಸ್ ಪ್ರಾರಂಭ ಆದಾಗಲು ಕೂಡ ಒಂದಲ್ಲ ಒಂದು ವಿಚಾರಗಳು ಕೇಂದ್ರ ಬಿಂದುವಾಗಿ ಬಿಗ್ ಬಾಸ್ ಪ್ರೇಕ್ಷಕರನ್ನು ರಂಜಿಸುತ್ತದೆ ಹಾಗೂ ಅದೇ ವಿಷಯಕ್ಕಾಗಿ ಪ್ರೇಕ್ಷಕರು ಬಿಗ್ ಬಾಸ್ ನೋಡಲು ಕೂಡ ಪ್ರಾರಂಭಿಸುತ್ತಾರೆ ಎಂಬುದು ಪ್ರತಿಯೊಂದು ಸೀಸನ್ಗಳಲ್ಲಿಯೂ ಕೂಡ ಸಾಬೀತಾಗಿರುವಂತಹ ವಿಚಾರ. ಕಳೆದ ಬಾರಿ ಬಿಗ್ ಬಾಸ್ ನಲ್ಲಿ ದಿವ್ಯ ಹಾಗೂ ಅರವಿಂದ್ ರವರ ಪ್ರೇಮಕಹಾನಿಯನ್ನು ನೋಡಲು ಪ್ರತಿ ಪ್ರೇಕ್ಷಕರು ಕೂಡ ದಿನ ಸಂಜೆ ಆಯ್ತು ಎಂದರೆ ಸಾಕು ಬಿಗ್ ಬಾಸ್ ನೋಡಲು ಟಿವಿಯ ಎದುರು ಕುಳಿತುಕೊಳ್ಳುತ್ತಿದ್ದರು.

ಆದರೆ ಈಗ ಪ್ರಾರಂಭವಾಗಿರುವ ಬಿಗ್ ಬಾಸ್ ಓಟಿಟಿ ಸೀಸನ್ 1 ಕೂಡ ಪ್ರಾರಂಭದಲ್ಲಿಯೇ ಇಂತಹ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿದೆ ಎಂಬುದನ್ನು ಹೇಳಬಹುದಾಗಿದೆ ಯಾಕೆಂದರೆ ಇಲ್ಲಿ ಕೂಡ ಒಂದು ಲವ್ ಸ್ಟೋರಿ ಪ್ರಾರಂಭವಾಗಿದೆ. ಹಾಗಿದ್ದರೆ ಇದು ಯಾರ ನಡುವೆ ಎಂಬುದಾಗಿ ಪ್ರೇಕ್ಷಕರು ಊಹಿಸಿರುವ ಊಹೆಯನ್ನು ನಿಮಗೆ ಹೇಳುತ್ತೇವೆ ಬನ್ನಿ. ಇತ್ತೀಚಿಗಷ್ಟೇ ರಾಕೇಶ್ ಅಡಿಗ ಡೈನಿಂಗ್ ಟೇಬಲ್ ನಲ್ಲಿ ಕುಳಿತುಕೊಂಡು ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಸ್ಪೂರ್ತಿ ಗೌಡ ಅವರ ಕೈಯನ್ನು ಹಿಡಿದುಕೊಂಡು ಹಣ ನಿಮ್ಮ ಜೀವನದಲ್ಲಿ ಅರ್ಧಂಬರ್ಧ ಬರುತ್ತದೆ ಎಂಬುದಾಗಿ ಹೇಳುತ್ತಾರೆ. ಆಗ ರಾಕೇಶ್ ಗೌಡ ನಿಮಗೆ ಭವಿಷ್ಯ ಹೇಳಲು ಚೆನ್ನಾಗಿ ಬರುವುದಿಲ್ಲ ಎಂಬುದಾಗಿ ಅವರ ಕೈಯನ್ನು ಹಿಡಿದು ನಿಮಗೆ ಬಿಗ್ ಬಾಸ್ ಮನೆಯಲ್ಲಿ ಒಬ್ಬರ ಮೇಲೆ ಲವ್ ಶುರುವಾಗುತ್ತದೆ ಎಂಬುದಾಗಿ ಹೇಳುತ್ತಾರೆ.

guru 5 | ಬಿಗ್ ಬಾಸ್ ಮನೆಯಲ್ಲಿ ಶುರುವಾಯಿತು ಪ್ರೇಮ ಪಕ್ಷಿಗಳ ಕಲರವ. ನೋಡುಗರಿಗೆ ಹಬ್ಬ: ಅಂದು ದಿವ್ಯ -ಅರವಿಂದ್. ಇಂದು ಯಾರು ಗೊತ್ತೇ??
ಬಿಗ್ ಬಾಸ್ ಮನೆಯಲ್ಲಿ ಶುರುವಾಯಿತು ಪ್ರೇಮ ಪಕ್ಷಿಗಳ ಕಲರವ. ನೋಡುಗರಿಗೆ ಹಬ್ಬ: ಅಂದು ದಿವ್ಯ -ಅರವಿಂದ್. ಇಂದು ಯಾರು ಗೊತ್ತೇ?? 2

ನಂತರ ಮುಂದುವರೆದು ರಾಕೇಶ್ ಅಡಿಗ ನೀವು ಲವ್ ನಲ್ಲಿ ಬೀಳುವ ವ್ಯಕ್ತಿ ನಿಮ್ಮ ಕೈ ಹಿಡಿದುಕೊಂಡು ಭವಿಷ್ಯವನ್ನು ನುಡಿಯುತ್ತಿದ್ದಾರೆ ಎಂಬುದಾಗಿ ಅವರನ್ನೇ ಫ್ಲಟ್ ಮಾಡುವ ರೀತಿಯಲ್ಲಿ ಪೂರ್ತಿ ಗೌಡ ಅವರಿಗೆ ಹೇಳುತ್ತಾರೆ. ಈ ಎಪಿಸೋಡ್ ಅನ್ನು ವೀಕ್ಷಿಸಿರುವ ಪರೀಕ್ಷಕರು ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡಮನೆಯಲ್ಲಿ ಮತ್ತೊಂದು ಲವ್ ಸ್ಟೋರಿ ಪ್ರಾರಂಭವಾಗಿದೆ, ಇದು ಎಷ್ಟು ದಿನ ನಡೆಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂಬುದನ್ನು ಹೇಳಲು ಪ್ರಾರಂಭಿಸಿದ್ದಾರೆ. ದೊಡ್ಮನೆಯ ಈ ತಾಜಾ ಲವ್ ಸ್ಟೋರಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Comments are closed.