ರಶ್ಮಿಕಾ ರವರಿಗೆ ಮೊದಲ ಶಾಕ್ ನೀಡಿದ ಕೃತಿ ಶೆಟ್ಟಿ: ತೆಲುಗಿನಲ್ಲಿ ಶುರುವಾಯಿತು ಕನ್ನಡತಿಯರ ನಡುವೆ ಬಿಗ್ ಫೈಟ್. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೆ ಕನ್ನಡ ಚಿತ್ರರಂಗದಿಂದ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟು ಈಗಾಗಲೇ ಭಾರತೀಯ ಚಿತ್ರರಂಗದ ಪ್ರತಿಯೊಂದು ಪ್ರಮುಖ ಭಾಷಾ ಚಿತ್ರರಂಗದಲ್ಲಿ ಅತ್ಯಂತ ಬಹು ಬೇಡಿಕೆಯನ್ನು ಹೊಂದಿರುವ ನಟಿ ಎಂದರೆ ಅದು ಕೊಡಗಿನ ಕುವರಿ ರಶ್ಮಿಕ ಮಂದಣ್ಣ. ರಶ್ಮಿಕ ಮಂದಣ್ಣ ಈಗಾಗಲೇ ದಕ್ಷಿಣ ಭಾರತ ಚಿತ್ರರಂಗ ಸೇರಿದಂತೆ ಬಾಲಿವುಡ್ ಚಿತ್ರರಂಗದಲ್ಲಿ ಕೂಡ ಸ್ಟಾರ್ ನಟರೊಂದಿಗೆ ನಟಿಸುವ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಅತ್ಯಂತ ಕಡಿಮೆ ವಯಸ್ಸಿನಲ್ಲಿ ಪಂಚ ಭಾಷೆ ತಾರೆಯಾಗಿ ಮಿಂಚುತ್ತಿರುವ ರಶ್ಮಿಕ ಮಂದಣ್ಣನವರ ಸಾಧನೆ ನಿಜಕ್ಕೂ ಕೂಡ ಪ್ರತಿಯೊಬ್ಬರು ಪ್ರಶಂಶಿಸುವಂತದ್ದು. ಇನ್ನು ಅದೇ ಹಾದಿಯಲ್ಲಿ ಮತ್ತೊಬ್ಬ ಕನ್ನಡತಿ ಅಂದರೆ ಕನ್ನಡ ಮೂಲದ ನಟಿ ಆಗಿರುವ ಪ್ರತಿ ಶೆಟ್ಟಿ ಅವರು ಕೂಡ ತೆಲುಗು ಚಿತ್ರರಂಗದಲ್ಲಿ ಈಗ ಅತ್ಯಂತ ಕಡಿಮೆ ವಯಸ್ಸಿನಲ್ಲಿ ತಮ್ಮ ಸಿನಿಮಾ ಕರಿಯರ್ ಅನ್ನು ದೊಡ್ಡ ಮಟ್ಟದಲ್ಲಿ ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದೇ ಆಗಸ್ಟ್ 12ರಂದು ಬಿಡುಗಡೆಯಾಗಲು ಸಜ್ಜಾಗಿರುವ ನಿತಿನ್ ನಟನೆಯ ಮಾಚಾರ್ಲಾ ನಿಯೋಜಕ ವರ್ಗಂ ಸಿನಿಮಾದಲ್ಲಿ ನಾಯಕಿಯಾಗಿ ಕೃತಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಹಾಡುಗಳು ಈಗಾಗಲೇ ಯೂಟ್ಯೂಬ್ ಸೇರಿದಂತೆ ಹಲವಾರು ಪ್ಲಾಟ್ಫಾರ್ಮ್ ಗಳಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಕಂಡಿದೆ. ಆದರೆ ಕೃತಿ ಶೆಟ್ಟಿ ಅವರಿಗಿಂತ ಮುಂಚೆ ಈ ಚಿತ್ರಕ್ಕೆ ನಾಯಕಿಯಾಗುವ ಅವಕಾಶ ಸಿಕ್ಕಿದ್ದು ಮಾತ್ರ ರಶ್ಮಿಕ ಮಂದಣ್ಣನವರಿಗೆ ಎಂಬುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ.

raash kriti | ರಶ್ಮಿಕಾ ರವರಿಗೆ ಮೊದಲ ಶಾಕ್ ನೀಡಿದ ಕೃತಿ ಶೆಟ್ಟಿ: ತೆಲುಗಿನಲ್ಲಿ ಶುರುವಾಯಿತು ಕನ್ನಡತಿಯರ ನಡುವೆ ಬಿಗ್ ಫೈಟ್. ಏನು ಗೊತ್ತೇ??
ರಶ್ಮಿಕಾ ರವರಿಗೆ ಮೊದಲ ಶಾಕ್ ನೀಡಿದ ಕೃತಿ ಶೆಟ್ಟಿ: ತೆಲುಗಿನಲ್ಲಿ ಶುರುವಾಯಿತು ಕನ್ನಡತಿಯರ ನಡುವೆ ಬಿಗ್ ಫೈಟ್. ಏನು ಗೊತ್ತೇ?? 2

ಈ ಹಿಂದೆ ನಿತಿನ್ ಹಾಗು ರಶ್ಮಿಕಾ ಮಂದಣ್ಣ ಕಾಂಬಿನೇಷನ್ನಲ್ಲಿ ಮೂಡಿ ಬಂದಿರುವ ಭೀಷ್ಮ ಸಿನಿಮಾ ಕೂಡ ದೊಡ್ಡಮಟ್ಟದ ಯಶಸ್ಸನ್ನು ಖಂಡಿತ ಹೀಗಾಗಿ ಅವರನ್ನೇ ಈ ಸಿನಿಮಾಗೂ ಕೂಡ ಕರೆತರಬೇಕು ಎಂಬುದಾಗಿ ದೊಡ್ಡಮಟ್ಟದ ಸಂಭಾವನೆಯನ್ನು ಕೂಡ ರಶ್ಮಿಕ ಮಂದಣ್ಣನವರಿಗೆ ನಿರ್ಮಾಪಕರು ನೀಡಲು ರೆಡಿಯಾಗಿದ್ದರು. ಆದರೆ ಮಾಹಿತಿಗಳ ಪ್ರಕಾರ ಡೇಟ್ಸ್ ಹೊಂದಾಣಿಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ರಶ್ಮಿಕ ಮಂದಣ್ಣ ಈ ಸಿನಿಮಾವನ್ನು ಮಾಡಲು ಸಾಧ್ಯವಾಗಿಲ್ಲ ಎಂಬುದಾಗಿ ತಿಳಿದು ಬಂದಿದೆ. ಇನ್ನೂ ಕೆಲವು ಮಾಹಿತಿಗಳ ಪ್ರಕಾರ ಭೀಷ್ಮ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ರಶ್ಮಿಕಾ ಮತ್ತು ನಿತಿನ್ ನಡುವೆ ಜಗಳವಾಗಿದೆ ಹೀಗಾಗಿ ನಿತಿನ್ ಅವರೇ ರಶ್ಮಿಕ ಮಂದಣ್ಣ ಬೇಡ ಎಂಬುದಾಗಿ ಹೇಳಿದ್ದಾರೆ ಎಂಬ ಸುದ್ದಿಗಳು ಕೂಡ ಓಡಾಡುತ್ತಿವೆ. ಅದೇನೇ ಆಗಿರಲಿ ಒಟ್ಟಾರೆಯಾಗಿ ಈ ಸಿನಿಮಾ ಮಾಸ್ ಹಾಗೂ ಪಕ್ಕ ಕಮರ್ಷಿಯಲ್ ಎಲಿಮೆಂಟ್ಸ್ ಹೊಂದಿದ್ದು ಕೃತಿ ಶೆಟ್ಟಿ ಅವರ ಸಿನಿಮಾ ಕರಿಯರ್ ಅನ್ನು ಇನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಸಹಕಾರಿಯಾಗಲಿ ಎಂಬುದಾಗಿ ಬಯಸೋಣ.

Comments are closed.