ನನ್ನ ಹೆಂಡತಿನ ಮೀಟ್ ಮಾಡೋಕೆ ಆಗ್ತಾ ಇಲ್ಲ: ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದ ಚಂದನ್. ಅದ್ಯಾಕಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಬಿಗ್ ಬಾಸ್ ನಲ್ಲಿ ಪರಿಚಿತರಾಗಿ ದಸರಾದಲ್ಲಿ ಪ್ರಪೋಸ್ ಮಾಡಿ ನಂತರ ಸದ್ದಿಲ್ಲದ ಮದುವೆಯಾದ ಜೋಡಿ ಚಂದನ್ ಶೆಟ್ಟಿ ಹಾಗೂ ನಿವೇದಿತ ಗೌಡ. ಇವರಿಬ್ಬರು ಯಾವಾಗ ಪ್ರೀತಿ ಮಾಡಿ ಯಾವಾಗ ಮದುವೆ ಆದರು ಎನ್ನುವುದೇ ಎಲ್ಲರಿಗೂ ತಿಳಿಯದಂತಾಯಿತು. ಇಬ್ಬರ ನಡುವೆ ಹಲವಾರು ವರ್ಷಗಳ ವಯಸ್ಸಿನ ಅಂತರವಿದ್ದರೆ ಕೂಡ ಪ್ರೀತಿಯ ಮುಂದೆ ವಯಸ್ಸಿನ ಅಡ್ಡಿ ಆ’ತಂಕಗಳು ಏನು ಇಲ್ಲ ಎಂಬುದನ್ನು ಇವರು ಸಾಬೀತುಪಡಿಸಿದ್ದಾರೆ. ಇನ್ನು ಇತ್ತೀಚಿಗಷ್ಟೇ ನಿವೇದಿತಾ ಗೌಡ ಅವರು ಮಿಸ್ಸಸ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದಿರುವುದು ನಿಜಕ್ಕೂ ಕೂಡ ಕನ್ನಡಿಗರು ಹೆಮ್ಮೆ ಪಡುವಂತಹ ವಿಚಾರ.

ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇಬ್ಬರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಸೆಲೆಬ್ರೆಟಿಗಳು. ಇನ್ನು ಇತ್ತೀಚಿಗಷ್ಟೇ ಚಂದನ್ ಶೆಟ್ಟಿ ನಾಯಕ ನಟನಾಗಿ ನಟಿಸಿರುವ ಎಲ್ಲರ ಕಾಲ್ ಎಳಿತದೆ ಕಾಲ ಏನು ಸಿನಿಮಾದ ಹಾಡು ಕೂಡ ಬಿಡುಗಡೆಯಾಗಿದ್ದು ಅತಿ ಶೀಘ್ರದಲ್ಲಿ ಸಿನಿಮಾ ಕೂಡ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಸದಕಾಲ ಗಾಯಕನಾಗಿ ಸಂಗೀತ ನಿರ್ದೇಶಕನಾಗಿ ಕಾಣಿಸಿಕೊಳ್ಳುತ್ತಿದ್ದ ಚಂದನ್ ಶೆಟ್ಟಿ ಈ ಬಾರಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಸಂದರ್ಶನದಲ್ಲಿ ಮಾತನಾಡಿರುವ ಚಂದನ್ ಶೆಟ್ಟಿ ತಮ್ಮ ಪತ್ನಿಯ ಕುರಿತಂತೆ ಕೂಡ ಮಾತನಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಿವೇದಿತ ಗೌಡ ಅವರನ್ನು ಹೆಚ್ಚಾಗಿ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಆಕೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬುದಾಗಿ ಹೇಳಿದ್ದಾರೆ.

chanvi | ನನ್ನ ಹೆಂಡತಿನ ಮೀಟ್ ಮಾಡೋಕೆ ಆಗ್ತಾ ಇಲ್ಲ: ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದ ಚಂದನ್. ಅದ್ಯಾಕಂತೆ ಗೊತ್ತೇ??
ನನ್ನ ಹೆಂಡತಿನ ಮೀಟ್ ಮಾಡೋಕೆ ಆಗ್ತಾ ಇಲ್ಲ: ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದ ಚಂದನ್. ಅದ್ಯಾಕಂತೆ ಗೊತ್ತೇ?? 2

ಚಂದನ್ ಶೆಟ್ಟಿ ಅವರಿಗೆ ಚಿತ್ರೀಕರಣ ಇದ್ದ ಸಂದರ್ಭದಲ್ಲಿ ನಿವೇದಿತ ಮನೆಯಲ್ಲಿ ಇರುತ್ತಾರೆ. ನಿವೇದಿತ ಅವರಿಗೆ ಚಿತ್ರೀಕರಣ ಇರುವ ಸಂದರ್ಭದಲ್ಲಿ ಚಂದನ್ ಶೆಟ್ಟಿ ಅವರು ವಿರಾಮದಲ್ಲಿ ಇರುತ್ತಾರೆ ಹೀಗಾಗಿ ಒಬ್ಬರನ್ನೊಬ್ಬರು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ವಾರಾಂತ್ಯದ ಎರಡು ದಿನಗಳಲ್ಲಿ ಮಾತ್ರ ದಂಪತಿಗಳಿಬ್ಬರು ಭೇಟಿಯಾಗಲು ಸಾಧ್ಯವಾಗುತ್ತಿದೆ. ಇಬ್ಬರು ಕೂಡ ಈಗ ಚಿತ್ರರಂಗದಲ್ಲಿ ಬ್ಯುಸಿ ಆಗುತ್ತಿದ್ದಾರೆ ಎಂಬುದಾಗಿ ಈ ಮೂಲಕ ನಾವು ಅರ್ಥೈಸಿಕೊಳ್ಳಬಹುದಾಗಿದೆ. ಚಂದನ್ ಶೆಟ್ಟಿ ಅವರು ತಮ್ಮ ಹೆಂಡತಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎನ್ನುವ ಹೇಳಿಕೆ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Comments are closed.