ಅಪ್ಪು ಕುರಿತಾದ ವಿಡಿಯೋ ವಿಚಾರದಲ್ಲಿ ದರ್ಶನ್ ಪರವಾಗಿ ನಿಂತ ವಿನೋದ್ ಪ್ರಭಾಕರ್ ಹೇಳಿದ್ದೇನು ಗೊತ್ತೇ?? ಅಪ್ಪು ಅಭಿಮಾನಿಗಳೇ ಈಗಲಾದರೂ ಒಪ್ಪಿಕೊಳ್ಳುವಿರ??

ನಮಸ್ಕಾರ ಸ್ನೇಹಿತರೇ ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬಗ್ಗೆ ನೀಡಿರುವಂತಹ ಒಂದು ಹೇಳಿಕೆ ಅಭಿಮಾನಿಗಳ ನಡುವೆ ಗೊಂದಲಕ್ಕೆ ಕಾರಣವಾಗಿ ಅದು ಬೇರೆ ರೀತಿ ಅರ್ಥವನ್ನು ಪಡೆದುಕೊಂಡು ಈಗ ಅಪ್ಪು ಹಾಗು ದಚ್ಚು ಅಭಿಮಾನಿಗಳ ನಡುವೆ ಫ್ಯಾನ್ ವಾ’ರ್ ಕ್ರಿಯೇಟ್ ಆಗಿದೆ.

ಇತ್ತೀಚಿಗಷ್ಟೇ ಒಂದು ಸಂದರ್ಶನದಲ್ಲಿ ಮರಣ ಹೊಂದಿದ ನಂತರ ಅಭಿಮಾನಿಗಳು ಏನು ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ, ಉದಾಹರಣೆಗೆ ಅಪ್ಪು ಅವರದ್ದೇ ಸಾಕು. ಆದರೆ ನಾನು ಬದುಕಿದ್ದಾಗಲೇ ನನ್ನ ಅಭಿಮಾನಿಗಳು ನನಗೆ ಎಲ್ಲವನ್ನು ತೋರಿಸಿ ಬಿಟ್ರು ಅಷ್ಟೇ ಸಾಕು ನನಗೆ ಎಂಬುದಾಗಿ ಮೆಚ್ಚುಗೆಯಿಂದ ತಮ್ಮ ಅಭಿಮಾನಿಗಳ ಕುರಿತಂತೆ ದರ್ಶನ್ ರವರು ಹೇಳಿಕೊಂಡಿದ್ದರು. ಆದರೆ ಇದರ ಅರ್ಥವನ್ನು ಬೇರೆ ರೀತಿ ಹರಡುವಂತೆ ಈ ಸಂದರ್ಶನ ಕಂಡುಬಂದಿತ್ತು ಹೀಗಾಗಿ ಅಪ್ಪು ಅಭಿಮಾನಿಗಳು ದರ್ಶನ್ ಅವರ ವಿರುದ್ಧ ರೊಚ್ಚಿಗೆದ್ದು ನಿಮ್ಮ ಕ್ರಾಂತಿ ಸಿನಿಮಾದ ಬಿಡುಗಡೆ ಆಗದಂತೆ ತಡೆಯುತ್ತೇವೆ ಎಂಬುದಾಗಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದರು. ಇದರ ಕುರಿತಂತೆ ಮಾತನಾಡುತ್ತಾ ವಿನೋದ್ ಪ್ರಭಾಕರ್ ರವರು ನಾನು ದರ್ಶನ್ ಹಾಗೂ ಪುನೀತ್ ರಾಜಕುಮಾರ್ ಅವರ ಅನ್ಯೋನತೆಯನ್ನು ಬಲ್ಲವನಾಗಿದ್ದೇನೆ. ಇಬ್ಬರೂ ಕೂಡ ಪರಸ್ಪರರನ್ನು ಗೌರವಿಸುತ್ತಿದ್ದರು ಹಾಗೂ ಪ್ರೀತಿಸುತ್ತಿದ್ದರು. ಎಲ್ಲಕ್ಕಿಂತ ಪ್ರಮುಖವಾಗಿ ಅಂದು ಅಪ್ಪು ಅವರನ್ನು ಕಳೆದುಕೊಂಡಿದ್ದ ಸಂದರ್ಭದಲ್ಲಿ ದರ್ಶನ್ ರವರು ಅಲ್ಲಿದ್ದಾಗ ಯಾವ ರೀತಿಯಲ್ಲಿ ಅಪ್ಪು ಅವರ ಬಾಂಧವ್ಯವನ್ನು ನೆನೆದುಕೊಂಡು ಎಷ್ಟು ಅತ್ತಿದ್ದರು ಎಂಬುದನ್ನು ನಾನು ನೋಡಿದ್ದೇನೆ ಎಂಬುದಾಗಿ ಹೇಳಿದ್ದಾರೆ.

appu dboss | ಅಪ್ಪು ಕುರಿತಾದ ವಿಡಿಯೋ ವಿಚಾರದಲ್ಲಿ ದರ್ಶನ್ ಪರವಾಗಿ ನಿಂತ ವಿನೋದ್ ಪ್ರಭಾಕರ್ ಹೇಳಿದ್ದೇನು ಗೊತ್ತೇ?? ಅಪ್ಪು ಅಭಿಮಾನಿಗಳೇ ಈಗಲಾದರೂ ಒಪ್ಪಿಕೊಳ್ಳುವಿರ??
ಅಪ್ಪು ಕುರಿತಾದ ವಿಡಿಯೋ ವಿಚಾರದಲ್ಲಿ ದರ್ಶನ್ ಪರವಾಗಿ ನಿಂತ ವಿನೋದ್ ಪ್ರಭಾಕರ್ ಹೇಳಿದ್ದೇನು ಗೊತ್ತೇ?? ಅಪ್ಪು ಅಭಿಮಾನಿಗಳೇ ಈಗಲಾದರೂ ಒಪ್ಪಿಕೊಳ್ಳುವಿರ?? 2

ಯಾವುದೋ ಒಂದು ಆನ್ಲೈನ್ ಪೇಜ್ ಮಾಡಿರುವ ತಪ್ಪಿನಿಂದಾಗಿ ಕುಟುಂಬದಂತೆ ಇರುವ ಕನ್ನಡ ಚಿತ್ರರಂಗದಲ್ಲಿ ಫ್ಯಾನ್ ವಾರ್ ಗಳು ನಡೆಯುವುದು ಸರಿಯಲ್ಲ. ಅದರಲ್ಲೂ ವಿಶೇಷವಾಗಿ ದರ್ಶನ್ ಅವರ ಫೋಟೋವನ್ನು ಹಾಕಿಕೊಂಡು ಅಪ್ಪು ಅವರ ವಿರುದ್ಧ ಮಾತನಾಡಿ ದರ್ಶನ್ ರವರ ಹೆಸರಿಗೆ ಧಕ್ಕೆ ತರಬೇಡಿ ಎಂಬುದಾಗಿ ಕೂಡ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ. ಇದು ಕೇವಲ ವಿನೋದ್ ಪ್ರಭಾಕರ್ ಅವರ ವಿನಂತಿ ಮಾತ್ರವಲ್ಲದೆ ಪ್ರತಿಯೊಬ್ಬರೂ ಕೂಡ ಕನ್ನಡ ಚಿತ್ರರಂಗದಲ್ಲಿ ಮತ್ತೆ ನಟರ ಅಭಿಮಾನಿಗಳ ನಡುವೆ ಮನಸ್ತಾಪ ಮೂಡಿ ಬರದೇ ಇರಲಿ ಎಂಬುದಾಗಿ ಹಾರೈಸುತ್ತಿದ್ದಾರೆ.

Comments are closed.