ಏಷ್ಯಾ ಕಪ್ ನಲ್ಲಿ ಆಡಿದ್ದು ಒಂದು ಪಂದ್ಯ: ಆದರೂ ವಿಶ್ವಕಪ್ ನಿಂದ ಔಟ್ ಫಿಕ್ಸ್: ಹಿರಿಯ ಆಟಗಾರನಿಗೆ ಶಾಕ್ ಕೊಡಲು ಸಿದ್ಧತೆ. ಏನಾಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಭಾರತೀಯ ಕ್ರಿಕೆಟ್ ತಂಡ ಈ ಬಾರಿ ಯುಎಇ ನಲ್ಲಿ ನಡೆದಿರುವ ಏಷ್ಯಾಕಪ್ ನಲ್ಲಿ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡಿದೆ ಎಂದು ಹೇಳಬಹುದಾಗಿದೆ. ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ವಿರುದ್ಧ ಸೂಪರ್ ಫೋರ್ ಹಂತದಲ್ಲಿ ಗೆಲ್ಲುವ ಅವಕಾಶವನ್ನು ತನ್ನ ಕೈಯಾರೆ ಕೈ ಚೆಲ್ಲಿದೆ ಎಂಬುದಾಗಿ ಹೇಳಬಹುದಾಗಿದೆ.

ಏಷ್ಯ ಕಪ್ ಟೂರ್ನಮೆಂಟ್ ನ ಅತ್ಯಂತ ಬಲಿಷ್ಠ ಹಾಗೂ ಕಪ್ ಗೆಲ್ಲುವ ಫೇವರೆಟ್ ತಂಡವಾಗಿ ಕಣಕ್ಕಿಳಿದ ರೋಹಿತ್ ಶರ್ಮ ನಾಯಕತ್ವದ ಭಾರತೀಯ ಕ್ರಿಕೆಟ್ ತಂಡ ಮೊದಲ ಹಂತದಲ್ಲಿ ಉತ್ತಮ ಪ್ರದರ್ಶನವನ್ನು ತೋರ್ಪಡಿಸಿತ್ತು. ಇನ್ನು ಈ ಏಷ್ಯಾ ಕಪ್ ನಲ್ಲಿ ಅತ್ಯಂತ ಅನುಭವಿ ಸ್ಪಿನ್ನರ್ ಆಟಗಾರ ಆಡಿದ್ದು ಕೇವಲ ಒಂದೇ ಪಂದ್ಯ ಆದರೆ ಅವರಿಗೆ ಮುಂದಿನ ದಿನಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನಲ್ಲಿ ಅವಕಾಶ ಬಹುತೇಕ ಸಂಪೂರ್ಣ ಬಂದ್ ಆದಂತಿದೆ. ಹೌದು ಮಿತ್ರರೇ ಆಟಗಾರ ಬೇರೆ ಇನ್ಯಾರೂ ಅಲ್ಲ ಭಾರತೀಯ ಕ್ರಿಕೆಟ್ ತಂಡದ ಬೌಲಿಂಗ್ ಆಲ್ರೌಂಡರ್ ಆಗಿರುವ ರವಿಚಂದ್ರನ್ ಅಶ್ವಿನ್.

ravichandran ashwin | ಏಷ್ಯಾ ಕಪ್ ನಲ್ಲಿ ಆಡಿದ್ದು ಒಂದು ಪಂದ್ಯ: ಆದರೂ ವಿಶ್ವಕಪ್ ನಿಂದ ಔಟ್ ಫಿಕ್ಸ್: ಹಿರಿಯ ಆಟಗಾರನಿಗೆ ಶಾಕ್ ಕೊಡಲು ಸಿದ್ಧತೆ. ಏನಾಗಿದೆ ಗೊತ್ತೇ??
ಏಷ್ಯಾ ಕಪ್ ನಲ್ಲಿ ಆಡಿದ್ದು ಒಂದು ಪಂದ್ಯ: ಆದರೂ ವಿಶ್ವಕಪ್ ನಿಂದ ಔಟ್ ಫಿಕ್ಸ್: ಹಿರಿಯ ಆಟಗಾರನಿಗೆ ಶಾಕ್ ಕೊಡಲು ಸಿದ್ಧತೆ. ಏನಾಗಿದೆ ಗೊತ್ತೇ?? 2

ಸಾಕಷ್ಟು ಸಮಯಗಳಿಂದ ಆರ್ ಅಶ್ವಿನ್ ಅವರು ತಂಡದಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಏಷ್ಯಾ ಕಪ್ ನಲ್ಲಿ ಅವರಿಗೆ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶವನ್ನು ನೀಡಲಾಗಿತ್ತು ಅದರಲ್ಲಿ ರವಿಚಂದ್ರನ್ ಅಶ್ವಿನ್ ರವರು ನಾಲ್ಕು ಓವರ್ ನಲ್ಲಿ 32 ರನ್ನುಗಳನ್ನು ನೀಡಿ ಕೇವಲ ಒಂದು ವಿಕೆಟ್ ಅನ್ನು ಪಡೆದುಕೊಂಡಿದ್ದರು. ಚಹಾಲ್ ಹಾಗೂ ರವಿ ಬಿಷ್ಣೋಯ್ ಅವರಂತಹ ಯುವ ಸ್ಪಿನ್ನರ್ ಗಳ ಪೈಪೋಟಿಯಲ್ಲಿ ರವಿಚಂದ್ರನ್ ಅಶ್ವಿನ್ ರವರು ಮತ್ತೆ ತಂಡದಲ್ಲಿ ಆಡುವುದು ಸಂಪೂರ್ಣ ಅನುಮಾನ ಎಂದು ಹೇಳಬಹುದಾಗಿದೆ. ಹೀಗಾಗಿ ಟಿ ಟ್ವೆಂಟಿ ತಂಡದಲ್ಲಿ ರವಿಚಂದ್ರನ್ ಅಶ್ವಿನ್ ಅವರ ಯುಗಾಂತ್ಯವಾಗಿದೆ ಎಂದು ಹೇಳಬಹುದು.

Comments are closed.