ಒಂದು ಕಡೆ ಲೈಗರ್ ಸಿನಿಮಾ ಸೋತರೂ ಕೂಡ ಕೊನೆಗೂ ತುಸು ನೆಮ್ಮದಿ ಪಡೆದ ವಿಜಯ್: ಈಗಲಾದರೂ ಸರಿ ಹೋಗಿ ಎಂದ ನೆಟ್ಟಿಗರು

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವಿಜಯ್ ದೇವರಕೊಂಡ ನಟನೆಯ ಲೈಗರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಂಪೂರ್ಣವಾಗಿ ನೆಲಕಚ್ಚಿ ಸೋತಿದೆ. ನಾನೇ ಎಲ್ಲ ನನ್ನಿಂದಲೇ ಎಲ್ಲ ಎಂಬುದಾಗಿ ಮರೆಯುತ್ತಿದ್ದ ವಿಜಯ ದೇವರು ಕೊಂಡ ಅವರ ಅಹಂಕಾರಕ್ಕೆ ಬ್ರೇಕ್ ಬಿದ್ದಂತಾಗಿದೆ ಎಂದು ಹೇಳಬಹುದಾಗಿದೆ.

ಲೈಗರ್ ಸಿನಿಮಾದ ಸೋಲಿನಿಂದ ನಿರ್ದೀಶಕ ಹಾಗೂ ನಿರ್ಮಾಪಕ ಆಗಿರುವ ಪರಿ ಜಗನ್ನಾಥ್ ಅವರು ಮುಂದಿನ ಸಿನಿಮಾ ಜನಗಣಮನ ಗೆ ವಿಜಯ್ ದೇವರಕೊಂಡ ಅವರನ್ನು ಹಾಕಿಕೊಳ್ಳುವುದು ಸಂಪೂರ್ಣ ಅನುಮಾನವಾಗಿದೆ. ಲೈಗರ್ ಸಿನಿಮಾದ ಸೋಲಿನಿಂದಾಗಿ ಪುರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ಇಬ್ಬರೂ ಕೂಡ ಸಂಪೂರ್ಣ ಹತಾಶರಾಗಿದ್ದಾರೆ ಎಂದು ಹೇಳಬಹುದಾಗಿದೆ. ಹೀಗಾಗಿ ಮತ್ತೇಂದು ಈ ಕಾಂಬಿನೇಷನ್ ನಲ್ಲಿ ಸಿನಿಮಾ ಬರುವುದು ಸದ್ಯಕ್ಕಂತೂ ಅನುಮಾನವಾಗಿದೆ. ಲೈಗರ್ ಸಿನಿಮಾ ಸೋತಿದ್ದರು ಕೂಡ ಅವಕಾಶಗಳ ಸಂಖ್ಯೆ ವಿಜಯ್ ದೇವರಕೊಂಡ ಅವರಿಗೆ ಕಡಿಮೆಯಾಗಿಲ್ಲ. ಈಗಾಗಲೇ ಸಮಂತಾ ಅವರು ನಾಯಕಿಯಾಗಿ ನಟಿಸಿರುವ ಖುಷಿ ಸಿನಿಮಾದಲ್ಲಿ ನಾಯಕನಾಗಿ ವಿಜಯ್ ದೇವರಕೊಂಡ ನಟಿಸುತ್ತಿದ್ದಾರೆ.

vijay devarakonda 2 | ಒಂದು ಕಡೆ ಲೈಗರ್ ಸಿನಿಮಾ ಸೋತರೂ ಕೂಡ ಕೊನೆಗೂ ತುಸು ನೆಮ್ಮದಿ ಪಡೆದ ವಿಜಯ್: ಈಗಲಾದರೂ ಸರಿ ಹೋಗಿ ಎಂದ ನೆಟ್ಟಿಗರು
ಒಂದು ಕಡೆ ಲೈಗರ್ ಸಿನಿಮಾ ಸೋತರೂ ಕೂಡ ಕೊನೆಗೂ ತುಸು ನೆಮ್ಮದಿ ಪಡೆದ ವಿಜಯ್: ಈಗಲಾದರೂ ಸರಿ ಹೋಗಿ ಎಂದ ನೆಟ್ಟಿಗರು 2

ಕೇವಲ ಇಷ್ಟು ಮಾತ್ರವಲ್ಲದೆ ತೆಲುಗು ಚಿತ್ರರಂಗದ ಸ್ಟಾರ್ ನಿರ್ಮಾಪಕ ದಿಲ್ ರಾಜು ಸಿನಿಮಾದಲ್ಲಿ ವಿಜಯ್ ದೇವರಕೊಂಡ ನಾಯಕನಾಗಿ ನಟಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಲೈಗರ್ ಸಿನಿಮಾದ ಸೋಲಿನಿಂದ ಕಥೆಯಲ್ಲಿ ಆಕ್ಷನ್ ನಿಂದ ಫ್ಯಾಮಿಲಿ ಎಂಟರ್ಟೈನರ್ ಕಥೆಗೆ ಸ್ಥಳಾಂತರ ಮಾಡಲಾಗಿದೆ. ಈಗಾಗಲೇ ನಿರ್ದೇಶಕ ವಿಜಯ್ ದೇವರಕೊಂಡ ಅವರಿಗೆ ಮೂರು ರೀತಿಯ ಕಥೆಗಳನ್ನು ಹೇಳಿದ್ದು, ಅವುಗಳಲ್ಲಿ ಒಂದನ್ನು ವಿಜಯ್ ದೇವರಕೊಂಡ ಆಯ್ಕೆ ಮಾಡಿದರೆ ಈ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂಬುದಾಗಿ ತಿಳಿದು ಬಂದಿದೆ. ಇದನ್ನು ತಿಳಿದುಕೊಂಡಿರುವ ಪ್ರೇಕ್ಷಕರು ಈಗಲಾದರೂ ಬುದ್ಧಿ ಕಲಿತು ಸರಿಯಾಗಿ ಸಿನಿಮಾದ ಕಡೆಗೆ ಗಮನ ಕೊಡಿ ಎಂಬುದಾಗಿ ಬುದ್ದಿ ಹೇಳಿದ್ದಾರೆ.

Comments are closed.