ಶ್ರೀ ಮಲೆ ಮಹದೇಶ್ವರ ಸ್ವಾಮಿ ಯವರ ಪೂಜೆ ಮಾಡುವ ಬೇಡಗಂಪಣ ಜನಾಂಗದವರ ಪರಿಸ್ಥಿತಿ ಸರ್ಕಾರಕ್ಕೆ ಕಾಣುತ್ತಿಲ್ಲವೇ??

ಶ್ರೀ ಮಲೆ ಮಹದೇಶ್ವರ ಸ್ವಾಮಿ ಯವರ ಪೂಜೆ ಮಾಡುವ ಬೇಡಗಂಪಣ ಜನಾಂಗದವರ ಬೆಟ್ಟದ ಸುತ್ತಮುತ್ತಲಿನ ಗ್ರಾಮದಜನಗಳ ದುಸ್ಥಿತಿ ಪ್ರಸ್ತುತ ಇವಾಗಲು ಸುಧಾರಿಸಿಲ್ಲಾ…ಈಗಲೂ ಆಗೆ ಇದೆ ಈಗೆ ಇರೋದು. ಈ ಭಾಗದ ಜನರ ದುರ್ದೈವ ಪರಿಸ್ಥಿತಿ ಅಲ್ಪ ಸಾಂಖ್ಯಾತರಲ್ಲೇ ಅಲ್ಪರು ಇಲ್ಲಿನ ಜನಾಂಗದವರು.

ಸರ್ಕಾರಿ ಸವಲತ್ತಿನಿಂದ ವಂಚಿತವಾಗಿರುವ ಸಮುದಾಯವೆಂದರೆ ಬೇಡಗಂಪಣ ಸಮುದಾಯದವರೇ ಬಾಗಶ ಸತ್ಯ. ರಾತ್ರಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಆಸ್ಪತ್ರೆ ಗೆ ಬರುತ್ತಿರುವಾಗ ಆಂಬುಲೆನ್ಸ್ ಇಲ್ಲಾ ವಾಹನದ ವ್ಯವಸ್ಥೆ ಇಲ್ಲಾ ಇಂತ ಪರಿಸ್ಥಿತಿಲಿ ಆ ಹೆಣ್ಣು ಮಗು ಅನುಭವಿಸುವ ನೋವು ಮಹದೇಶ್ವರನ ಪಾದಕ್ಕೆ ಪ್ರಿಯವಾಗಬೇಕು.

ಬಹಳಷ್ಟು ಬಾರಿ ಬೆಟ್ಟಕ್ಕೆ ಹೋದಾಗಲೆಲ್ಲಾ ಅಲ್ಲಿನ ಜನರ ಪರಿಸ್ಥಿತಿ ನೋಡಿ ತುಂಬಾ ಬೇಸರ ತರುತ್ತದೆ, ಕೇವಲ ದೇವಸ್ಥಾನದ ಸುತ್ತ ಮುತ್ತ ಮಾತ್ರ ಅಭಿವೃದ್ಧಿ ಮಾಡಿ, ಅಲ್ಲಿನ ಸ್ಥಳೀಯ ಜನರ ಜೀವನ ನಡೆಸಲು ಯಾವುದೇ ರೀತಿಯ ಅನುಕೂಲ ಮಾಡಿಕೊಟ್ಟಿಲ್ಲಾ ಪ್ರಾಧಿಕಾರ ಅಥವಾ ಜಿಲ್ಲಾಡಳಿತ.

Dr ಶಿವರಾಜಪ್ಪ ರವರು ಬೇಡಗಂಪಣ ಜನಾಂಗದವರ ಬಗ್ಗೆ ಪುಸ್ತಕ ಬರೆದು ಡಾಕ್ಟರೇಟ್ ಪದವಿ ಪಡೆದಕೊಂಡರು ಆದ್ರೂ ಈ ಸಮುದಾಯ ಕ್ಕೆ ಉಪಯೋಗವಾಗಿಲ್ಲ . ವಿಧಾನಸೌದ ದಲ್ಲಿ ಈ ಸಮುದಾಯದ ಬಗ್ಗೆ ಮಾತಾಡಿ ಅವರ ಬೇಳೆ ಬೇಯ್ಸ್ಕೊಂಡ್ರು ಆದರೆ ಹನೂರು ತಾಲ್ಲೂಕಿನಲ್ಲಿ ಬೆಟ್ಟ ಅಂದ್ರೆ ಯಾವ ತಾಲ್ಲೂಕಿನಲ್ಲಿದೆ ಅನ್ನೋ ಮನಸ್ಥಿತಿ ಯಲ್ಲಿದ್ದಾರೆ. ಏನು ಮಾಡೋದು..

ಇನ್ನು ಮುಂದಾದ್ರು ಈ ಸಮುದಾಯ ಉತ್ತುಂಗತ ಸ್ಥಾನಕ್ಕೆ ಹೋಗುವಂತೆ ಶ್ರಮ ವಹಿಸೋಣ ನನ್ನದೊಂದು ಅಭಿಲಾಷೆ ಇದೆ. ದಯಮಾಡಿ ಕೈ ಜೋಡಿಸಿ ಈ ಭಾಗದ ಜನರಿಗೆ ಉತ್ತಮ ವಾದ ಶಿಕ್ಷಣ ಕೊಡಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿ ಅವರಿಗೆ ಮೂಲ ಭೂತ ಸೌಕರ್ಯಗಳನ್ನು ಒದಗಿಸಿ ಎಂಬುದು ಈ ಭಾಗದ ಜನರ ಪರವಾಗಿ ನಮ್ಮೆಲ್ಲರ ಆಸೆ ಯಾಗಿದೆ

Comments are closed.