ತಿಂಗಳಿಗೆ 55 ಸಾವಿರ ಸಂಬಳ ಸಿಗುವ ಕೆಲಸ, ಬೆಂಗಳೂರು ಬಿಇಎಲ್ ನಲ್ಲಿ 200 ಕ್ಕೂ ಹೆಚ್ಚು ಉದ್ಯೋಗಾವಕಾಶ. ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ಹಲವು ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಿದ್ದು, ನೀವು ನಿಮ್ಮ ವಿದ್ಯಾರ್ಹತೆಗೆ ಅನುಗುನವಾಗಿ ಉದ್ಯೋಗವನ್ನು ಆಯ್ದುಕೊಳ್ಳಲು ತಮ್ಮಲ್ಲಿ ಇದು ಸರಿಯಾದ ಸಮಯ. ಹೀಗೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತಿರುವವರಲ್ಲಿ ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕೂಡ ಒಂದು. ಬೆಂಗಳೂರಿನ ಬಿಇಎಲ್ ತನ್ನಲ್ಲಿರುವ ಒಟ್ಟು 247 ಹುದ್ದೆಗಳನ್ನು ಭರ್ತಿ ಮಾಡಲು ನಿರ್ಣಯಿಸಿದೆ. ಬನ್ನಿ ಈ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ.

ಪ್ರಾಜೆಕ್ಟ್ ಎಂಜಿನಿಯರ್, ಟ್ರೇನಿ ಆಫೀಸರ್ ಮತ್ತು ಟ್ರೇನಿ ಎಂಜಿನಿಯರ್ ಸೇರಿದಂತೆ 247 ಖಾಲಿ ಇರುವ ಹುದ್ದೆಗಳಿಗೆ ಬಿಇಎಲ್ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಜನವರಿ 21 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 14, 2022. ಇನ್ನು ಬಿಇ, ಬಿಟೆಕ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಸಲ್ಲಿಸಲು ಅರ್ಹರು.

bel jobs 1 | ತಿಂಗಳಿಗೆ 55 ಸಾವಿರ ಸಂಬಳ ಸಿಗುವ ಕೆಲಸ, ಬೆಂಗಳೂರು ಬಿಇಎಲ್ ನಲ್ಲಿ 200 ಕ್ಕೂ ಹೆಚ್ಚು ಉದ್ಯೋಗಾವಕಾಶ. ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತೇ??
ತಿಂಗಳಿಗೆ 55 ಸಾವಿರ ಸಂಬಳ ಸಿಗುವ ಕೆಲಸ, ಬೆಂಗಳೂರು ಬಿಇಎಲ್ ನಲ್ಲಿ 200 ಕ್ಕೂ ಹೆಚ್ಚು ಉದ್ಯೋಗಾವಕಾಶ. ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತೇ?? 2

ಅರ್ಜಿಯನ್ನು ಆನ್ ಲೈನ್ ಮೂಲಕ ಸಲ್ಲಿಸಬೇಕು. ಈ ಹುದ್ದೆಗಳಿಗೆ ಮಾಸಿಕ ವೇತನವು 33000 ದಿಂದ 55000 ರೂಪಾಯಿಗಳವರೆಗೆ ನಿಗದಿಪಡಿಸಲಾಗಿರುತ್ತದೆ. ಒಟ್ಟೂ 247 ಹುದ್ದೆಗಳಲ್ಲಿ ಪ್ರಾಜೆಕ್ಟ್ ಎಂಜಿನಿಯರ್ -67, ಟ್ರೇನಿ ಎಂಜಿನಿಯರ್- 169, ಟ್ರೇನಿ ಆಫೀಸರ್- 11 ಹುದ್ದೆಗಳು ಖಾಲಿ ಇವೆ. ಅರ್ಜಿ ಸಲ್ಲಿಸುವವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಕಡ್ಡಾಯವಾಗಿ ಬಿಇ/ ಬಿ.ಟೆಕ್/ಬಿಎಸ್ಸಿ/ ಎಂಬಿಎ ಪೂರ್ಣಗೊಳಿಸಿರುವ ದಾಖಲೆಯನ್ನು ಒದಗಿಸಬೇಕು.

ಅರ್ಜಿದಾರರ ವಯೋಮಿತಿ ಹೀಗಿದೆ. ಪ್ರಾಜೆಕ್ಟ್ ಎಂಜಿನಿಯರ್ -32 ವರ್ಷ, ಟ್ರೇನಿ ಎಂಜಿನಿಯರ್- 28 ವರ್ಷ, ಟ್ರೇನಿ ಆಫೀಸರ್- 28 ವರ್ಷ ವಯಸ್ಸಿನವರಾಗಿರಬೇಕು. ಟ್ರೇನಿ ಎಂಜಿನಿಯರ್ ಹುದ್ದೆಗೆ ಸಾಮಾನ್ಯ, ಒಬಿಸಿ ಮತ್ತು ಈಡಬ್ಲ್ಯೂಎಸ್ ಅಭ್ಯರ್ಥಿಗಳು 200 ರೂ. ಅರ್ಜಿ ಶುಲ್ಕ ಭರಿಸಬೇಕು. ಎಸ್ ಸಿ ಎಸ್ ಟಿ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ. ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗೆ ಸಾಮಾನ್ಯ, ಒಬಿಸಿ ಮತ್ತು ಈ ಡಬ್ಲ್ಯೂ ಎಸ್ ಅಭ್ಯರ್ಥಿಗಳು 500 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಹಾಗೆಯೇ ಎಸ್ ಸಿ ಎಸ್ ಟಿ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ. ಇನ್ನು ಹೆಚ್ಚಿನ ಮಾಹಿತಿಗಾಗಿ ಬಿಇಎಲ್ನ ಅಧಿಕೃತ ವೆಬ್ಸೈಟ್ ಆದ ಬೆಲ್-ಇಂಡಿಯಾ.ಇನ್ ಗೆ ಭೇಟಿ ಕೊಡಿ.

Comments are closed.