ಜಾಹೀರಾತಿಗಾಗಿ 7 ಕೋಟಿ ಖರ್ಚು ಮಾಡಿ, ಬರೋಬ್ಬರಿ 35 ಕೋಟಿ ನಷ್ಟ ಅನುಭವಿಸಿದ ಕೂ ಅಪ್ಲಿಕೇಶನ್, ಆದರೂ ಖುಷಿಯಾಗಿದ್ದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಟ್ವಿಟರ್ ಆಪ್ ಪರ್ಯಾಯವಾಗಿ ಕೂ ಮತ್ತು ಸ್ಥಳೀಯ ಭಾಷೆಯ QnA ಅಪ್ಲಿಕೇಶನ್ ವೊಕಲ್ ನ ಮಾತೃ ಸಂಸ್ಥೆ ಬಾಂಬಿನಾಟ್ ಟೆಕ್ನಾಲಜಿಸ್ ರೂ. 35.18 ಕೋಟಿ ನಷ್ಟ ಅನುಭವಿಸಿದೆ ಎಂದು ಮೂಲಗಳು ತಿಳಿಸಿವೆ. ಜನರು ತಮ್ಮದೇ ಸ್ಥಳೀಯ ಭಾಷೆಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡುವಂಥ ಮೇಡ್-ಇನ್-ಇಂಡಿಯಾ ಕೂ, ಅಪ್ಲಿಕೇಶನ್ ಪ್ರಾರಂಭವಾಗಿದು ಮಾರ್ಚ್ 2020 ರಲ್ಲಿ. ಅತ್ಯಂತ ಕದಿಮೆ ಸಮಯದಲ್ಲಿ ಅಂದರೆ ಕೇವಲ 20 ತಿಂಗಳಲ್ಲಿ 1.5 ಕೋಟಿ ಬಳಕೆದಾರರನ್ನು ಹೊಂದಿರುವ ಆಪ್ ಆಗಿದ್ದು ಈಗಾಗಲೇ 9 ಭಾರತೀಯ ಭಾಷೆಗಳಲ್ಲಿ ಸೇವೆ ಒದಗಿಸುತ್ತಿದೆ.

ಕೂ ಆಪ್ ಒಂದು ಮೈಕ್ರೋ-ಬ್ಲಾಗಿಂಗ್ ವೇದಿಕೆಯಾಗಿದೆ. ಸ್ಥಾಪಿತವಾಯಿತು, ಇದು ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ. ಇಲ್ಲಿ ಭಾರತದ ವಿವಿಧ ಪ್ರದೇಶಗಳ ಜನರು ತಮ್ಮ ಮಾತೃಭಾಷೆಯಲ್ಲಿಯೇ ತಮ್ಮ ಮನದಾಳವನ್ನು ವ್ಯಕ್ತಪಡಿಸಿಕೊಳ್ಳಬಹುದು. ನಮ್ಮ ದೇಶಿಯ ಭಾಷೆಗಳಿಗೆ ಆದ್ಯತೆ ನೀಡುವ ಧ್ವನಿಗಳಿಗೆ ಕೂ ಒಂದು ಅತ್ಯುತ್ತಮ ವೇದಿಕೆ ಎನ್ನಬಹುದು.

koo app 1 | ಜಾಹೀರಾತಿಗಾಗಿ 7 ಕೋಟಿ ಖರ್ಚು ಮಾಡಿ, ಬರೋಬ್ಬರಿ 35 ಕೋಟಿ ನಷ್ಟ ಅನುಭವಿಸಿದ ಕೂ ಅಪ್ಲಿಕೇಶನ್, ಆದರೂ ಖುಷಿಯಾಗಿದ್ದು ಯಾಕೆ ಗೊತ್ತೇ??
ಜಾಹೀರಾತಿಗಾಗಿ 7 ಕೋಟಿ ಖರ್ಚು ಮಾಡಿ, ಬರೋಬ್ಬರಿ 35 ಕೋಟಿ ನಷ್ಟ ಅನುಭವಿಸಿದ ಕೂ ಅಪ್ಲಿಕೇಶನ್, ಆದರೂ ಖುಷಿಯಾಗಿದ್ದು ಯಾಕೆ ಗೊತ್ತೇ?? 2

ಇನ್ನು ಈ ಕಂಪನಿಯ 21ರ ಹಣಕಾಸು ವರ್ಷದಲ್ಲಿ ನಷ್ಟ ಹೆಚ್ಚಳವಾಗಿದೆ ಅಂದರೆ ಹಣಕಾಸುವರ್ಷ 2020ರಲ್ಲಿ ಉಂಟಾದ ರೂ. 12 ಕೋಟಿಗಿಂತ ಸುಮಾರು 3 ಪಟ್ಟು ಹೆಚ್ಚು ನಷ್ಟವಾಗಿದೆ ಎಂದು ಕಂಪನಿ ತಿಳಿಸಿದೆ. ಹಣಕಾಸು ವರ್ಷ21ರಲ್ಲಿ ಬ್ಯಾಂಕ್ ಠೇವಣಿ, ವಿವಿಧ ಆದಾಯ ಮತ್ತು ಇತರ ಹೂಡಿಕೆಗಳ ಮೇಲಿನ ಬಡ್ಡಿಯನ್ನು ಸೇರಿ ಒಟ್ಟು ರೂ. 78 ಲಕ್ಷ ಆದಾಯ ಗಳಿಸಿದೆ ಎಂದು Inc42 ವರದಿ ಮಾಡಿದೆ.

ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಆಗಿರುವ ಕೂ ಒಟ್ಟು ರೂ.24.7 ಕೋಟಿ ಖರ್ಚು ಮಾಡಿದ್ದು, ಇದು ಮಾರ್ಚ್ 31, 2020 ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಖರ್ಚು 75% ನಷ್ಟು ಏರಿಕೆಯಾಗಿದೆ. ಇನ್ನು ಎಂಪ್ಲಾತಿ ಬೆನಿಫಿಟ್ಸ್ ಗಾಗಿ ರೂ. 9 ಕೋಟಿ, ಇತರ ವೆಚ್ಚ ರೂ. 15 ಕೋಟಿ ಆಗಿದೆ. ರೂ. 11 ಕೋಟಿ ಹಿಂದಿನ ಅವಧಿಯ ವೆಚ್ಚಗಳಿಗಾಗಿ ವ್ಯಯವಾಗಿವೆ. ಇನ್ನು ಸ್ಟಾರ್ಟ್ಅಪ್ ಜಾಹೀರಾತುಗಳು ಮತ್ತು ವ್ಯಾಪಾರ ಪ್ರಚಾರಗಳಿಗಾಗಿ ರೂ. 7 ಕೋಟಿ, ತಂತ್ರಜ್ಞಾನಕ್ಕಾಗಿ ರೂ. 4 ಕೋಟಿ ಮತ್ತು ಕಾನೂನು ಮತ್ತು ವೃತ್ತಿಪರ ಶುಲ್ಕಗಳಿಗಾಗಿ ರೂ. 1 ಕೋಟಿ ವ್ಯಯಿಸಲಾಗಿದೆ. ಇದರಲ್ಲಿ ಕೂ ಜಾಹಿರಾತಿಗಾಗಿ ರೂ. 2 ಕೋಟಿ ಖರ್ಚು ಮಾಡಿತ್ತು.

Comments are closed.