ESIC Recruitment 2022: ಬರೋಬ್ಬರಿ 3865 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ರಾಜ್ಯ ನೌಕರರ ವಿಮಾ ನಿಗಮ. SSLC ಪಾಸ್ ಆಗಿದ್ದರೆ ಸಾಕು.

ನಮಸ್ಕಾರ ಸ್ನೇಹಿತರೇ, ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ, ಅದರಲ್ಲೂ ಡಿಗ್ರಿ ಆಗದೇ 10, 12ನೇ ತರಗತಿಯನ್ನು ಮುಗಿಸಿದ್ದರೆ, ನಿಮಗೂ ಉತ್ತಮ ಉದ್ಯೋಗ ಸಿಗುವ ಅವಕಾಶ ಒದಗಿಬಂದಿದೆ. ಹೌದು, ನೌಕರರ ರಾಜ್ಯ ವಿಮಾ ನಿಗಮ ತನ್ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಇದರಲ್ಲಿ ಒಟ್ಟು 3882 ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಬನ್ನಿ ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಕೊಡುತ್ತೇವೆ.

ನೌಕರರ ರಾಜ್ಯ ವಿಮಾ ನಿಗಮದಲ್ಲಿ ಇರುವ ಹುದ್ದೆಗಳಿಗೆ ನೀವು ಅರ್ಹರಾಗಿದ್ದರೆ ಜನವರಿ 15ರಿಂದ ಅರ್ಜಿ ಸಲ್ಲಿಕೆ ಮಾಡಬಹುದು. ಖಾಲಿ ಇರುವ ಹುದ್ದೆಗಳು ಹೀಗಿವೆ. ಮೇಲ್ದರ್ಜೆ ಕ್ಲರ್ಕ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಮತ್ತು ಸ್ಟೆನೋಗ್ರಾಫರ್ ಪೋಸ್ಟ್‌ ಸೇರಿದಂತೆ ಇನ್ನೂ ಹಲವು ವಿಭಾಗಗಳಲ್ಲಿ ಹುದ್ದೆಗಳು ಖಾಲಿ ಇವೆ. ಇನ್ನು ಕೇವಲ 10ನೇ ತರಗತಿ, 12ನೇ ತರಗತಿ ಮುಗಿದಿದ್ದವರು ಹಾಗೂ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದಾಗಿದೆ. ಇನ್ನು ಈ ಹುದ್ದೆಗಳಿಗೆ ನೇಮಕಾತಿಯನ್ನು ನೇರ ನೇಮಕಾತಿ ಮೂಲಕ ನಡೆಸಲಾಗುತ್ತದೆ.

esic recruitment | ESIC Recruitment 2022: ಬರೋಬ್ಬರಿ 3865 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ರಾಜ್ಯ ನೌಕರರ ವಿಮಾ ನಿಗಮ. SSLC ಪಾಸ್ ಆಗಿದ್ದರೆ ಸಾಕು.
ESIC Recruitment 2022: ಬರೋಬ್ಬರಿ 3865 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ರಾಜ್ಯ ನೌಕರರ ವಿಮಾ ನಿಗಮ. SSLC ಪಾಸ್ ಆಗಿದ್ದರೆ ಸಾಕು. 2

ಇನ್ನು ಭಾರತದ ಯಾವುದೇ ಸ್ಥಳದಲ್ಲಿ ಈ ಹುದ್ದೆಗೆ ನೇಮಕಾತಿಗೊಳ್ಳಬಹುದು. ಇನ್ನು ವೇತನದ ಬಗ್ಗೆ ಹೇಳುವುದಾದರೆ ವೇತನ ದರ್ಜೆ ಉತ್ತಮವಾಗಿದ್ದು, ತಿಂಗಳಿಗೆ ರೂ.18,000-81,100 ರೂ.ಗಳವರೆಗೆ ಇರಬಹುದು. ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಜನವರಿ 15, 2022ರಂದು ಆರಂಭವಾಗಿ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 15, 2022. ಇನ್ನು ಈ ಲಿಂಕ್ ಬಳಸಿ https://www.esic.nic.in/ ಅರ್ಜಿ ಸಲ್ಲಿಸಬಹುದು. ನೇರವಾಗಿ ನೇಮಕಾತಿಯಾಗಲಿದ್ದು ಪ್ರಿಲಿಮ್ಸ್-ಮೇನ್ಸ್-ಸ್ಕಿಲ್ ಟೆಸ್ಟ್ ಗಳಿರುತ್ತವೆ. ಇನ್ನು ಅರ್ಜಿ ಸಲ್ಲಿಸಲು ಶುಲ್ಕವು ಈ ರೀತಿ ಇದೆ. ಮೇಲ್ದರ್ಜೆ ಕ್ಲರ್ಕ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಮತ್ತು ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 500 ರೂ ಅರ್ಜಿ ಶುಲ್ಕ ಪಾವತಿಸಬೇಕು. SC/ST/PWD ಅಭ್ಯರ್ಥಿಗಳು 250 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 18 ರಿಂದ 27 ವರ್ಷ.

Comments are closed.