ಎಲ್ಲರೂ 5 ಜಿ ಕಡೆ ಗಮನ ಹರಿಸುತ್ತಿದ್ದರೇ ಜಿಯೋ ಒಂದು ಹೆಜ್ಜೆ ಮುಂದೆ ಹೋಗಿ 6 ಜಿ ಕಡೆ ಚಿತ್ತ, ಇದರ ವೇಗ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇದೀಗ ಜನರ ಎಲ್ಲಾ ಕೆಲಸಗಳೂ ನಡೆಯುವುದು ಇಂಟರ್ ನೆಟ್ ಮೂಲಕವೇ! ಹಾಗಾಗಿ ಇಂಟರ್ ನೆಟ್ ವೇಗ ಎಷ್ಟಿದ್ದರೂ ಕಡಿಮೆಯೆ. ಕ್ಷಣಾರ್ಧದಲ್ಲಿ ಯಾವ ಅಂತರ್ಜಾಲದ ಮೂಲಕ ಡೌನ್ ಲೋಡ್ ಅಪ್ಲೋಡ್ ಮಾಡಬಹುದು ಎಂದು ಹುಡುಕುತ್ತಲೇ ಇರುತ್ತೇವೆ. ಹಾಗಾಗಿ ಇತ್ತೀಚಿಗೆ 2022ರಲ್ಲಿ ಭಾರತದಲ್ಲೆಡೆ 5 ಜಿ ನೆಟ್ ದೊರೆಯುವಂತೆ ಮಾಡಲು ಹಲವು ಟೆಲಿಕಾಂ ಕಂಪನಿಗಳು ಪ್ರಯತ್ನಿಸುತ್ತಿವೆ. ಆದರೆ ಭಾರತದ ಪ್ರಸಿದ್ಧ ಟೆಲಿಕಾಂ ಕಂಪನಿಯಾದ ಜಿಯೋ ಇದೆಲ್ಲದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ 6ಜಿ ಯತ್ತ ತನ್ನ ಚಿತ್ತವನ್ನು ಹರಿಸಿದೆ.

ಭಾರತದಲ್ಲಿ ಜಿಯೋ 5ಜಿ ಸೇವೆಗಳಳು ಇನ್ನೂ ಲಭ್ಯವಿಲ್ಲ ಆದರೆ ಜಿಯೋದ ಅಂಗಸಂಸ್ಥೆ ಎಸ್ಟೋನಿಯಾ 6ಜಿ ಸೇವೆಗಾಗಿ ಕೆಲಸ ಮಾಡುತ್ತಿದೆ. 6G ನೆಟ್‌ವರ್ಕ್‌ಗಳ ಬಗ್ಗೆ ಸಂಶೋಧನೆ ನಡೆಸಲು ಔಲು ವಿಶ್ವವಿದ್ಯಾನಿಲಯದೊಂದಿಗೆ ಕೈಜೋಡಿಸುವುದಾಗಿ ಜಿಯೋ ಎಸ್ಟೋನಿಯಾ ಈಗಾಗಲೇ ಘೋಷಿಸಿದೆ. ಮುಂಬರುವ ನೆಟ್ ಬೇಡಿಕೆಯನ್ನು ಎದುರಿಸಲು 6ಜಿ ನೆಟ್ವರ್ಕ್ ಬಗ್ಗೆ ಯೋಚಿಸಲಾಗುತ್ತಿದ್ದು ಇದು 5ಜಿ ಗಿಂತ 100 ಪಟ್ಟು ಹೆಚ್ಚು ವೇಗವನ್ನು ಹೊಂದಿರುತ್ತದೆ ಎನ್ನಲಾಗಿದೆ.

jio 6g | ಎಲ್ಲರೂ 5 ಜಿ ಕಡೆ ಗಮನ ಹರಿಸುತ್ತಿದ್ದರೇ ಜಿಯೋ ಒಂದು ಹೆಜ್ಜೆ ಮುಂದೆ ಹೋಗಿ 6 ಜಿ ಕಡೆ ಚಿತ್ತ, ಇದರ ವೇಗ ಎಷ್ಟು ಗೊತ್ತೇ??
ಎಲ್ಲರೂ 5 ಜಿ ಕಡೆ ಗಮನ ಹರಿಸುತ್ತಿದ್ದರೇ ಜಿಯೋ ಒಂದು ಹೆಜ್ಜೆ ಮುಂದೆ ಹೋಗಿ 6 ಜಿ ಕಡೆ ಚಿತ್ತ, ಇದರ ವೇಗ ಎಷ್ಟು ಗೊತ್ತೇ?? 2

ಜೊಯೋ ತನ್ನ ಹೊಸ ಸಂಶೋಧನೆ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದೆ. “ಈ ಪಾಲುದಾರಿಕೆಯು ವೈಮಾನಿಕ ಮತ್ತು ಬಾಹ್ಯಾಕಾಶ ಸಂವಹನಗಳು, ಹೊಲೊಗ್ರಾಫಿಕ್ ಬೀಮ್‌ಫಾರ್ಮಿಂಗ್, ಮೈಕ್ರೋ-ಎಲೆಕ್ಟ್ರಾನಿಕ್ಸ್, ಸೈಬರ್ ಸೆಕ್ಯುರಿಟಿ ಮತ್ತು ಫೋಟೊನಿಕ್ಸ್‌ನಲ್ಲಿ ಉದ್ಯಮ ಮತ್ತು ಶೈಕ್ಷಣಿಕ ಎರಡರಲ್ಲೂ 3ಡಿ ಸಂಪರ್ಕಿತ ತಂತ್ರಜ್ಞಾನವನ್ನು ಉತ್ತೇಜಿಸುತ್ತದೆ.” ಎಂದಿದೆ. ತಡೆರಹಿತ ಡೇಟಾ ಪ್ರಸರಣಕ್ಕಾಗಿ ಡೌನ್‌ಲಿಂಕ್ ವೇಗವು 1,000 Gbps ನಷ್ಟು ವೇಗವಾಗಿ ಇರುತ್ತದೆ ಎನ್ನಲಾಗಿದೆ.

ತಂತ್ರಜ್ಞಾನದ ವಿಷಯದಲ್ಲಿ, 6ಜಿ ಸೇವೆ 5ಜಿ ಗಿಂತ ದುಪ್ಪಟ್ಟು ಉತ್ತಮವಾಗಿರುತ್ತದೆ. ಇದು ಸೆಲ್-ಫ್ರೀ MIMO, ಹೆಚ್ಚಿನ ಸಾಮರ್ಥ್ಯವನ್ನು ಟೆರಾಹೆರ್ಟ್ಜ್ ಆವರ್ತನಗಳ ಮೂಲಕ ವೇಗ ಮತ್ತು ಉತ್ತಮ ಸಂಪರ್ಕವನ್ನು ತರುವ ಗುರಿ ಇದರದ್ದಾಗಿದೆ. ಜಿಯೋ ಪ್ಲಾಟ್‌ಫಾರ್ಮ್‌ಗಳ ಹಿರಿಯ ಉಪಾಧ್ಯಕ್ಷ ಆಯುಷ್ ಭಟ್ನಾಗರ್, ತಮ್ಮ ಸಂಶೋಧನೆಯ ಬಗ್ಗೆ ಹೇಳಿಕೆ ನೀಡಿದ್ದು, ಇದರ ಆರಂಭಿಕ ಸಂಶೋಧನೆ ಮತ್ತು ಅಭಿವೃದ್ಧಿ ಈಗಾಗಲೇ ಚೀನಾ ಮತ್ತು ಜರ್ಮನಿಯಂತಹ ದೇಶಗಳಲ್ಲಿ ಪ್ರಾರಂಭವಾಗಿದೆ ಎಂದೂ ಹೇಳಿದ್ದಾರೆ. ಇನ್ನು 6ಜಿ ಸೇವೆಯನ್ನು 2025ರವರ ನಂತರವೇ ಬಳಕೆಗೆ ಸಿಗಬಹುದು ಎಂದು ಊಹಿಸಲಾಗಿದೆ ಆದರೆ ದೇಶದಲ್ಲಿ 2023 ಅಥವಾ 2024 ರ ಅಂತ್ಯದ ವೇಳೆಗೆ 6ಜಿ ತಂತ್ರಜ್ಞಾನವನ್ನು ನಿಯೋಜಿಸುವ ವಿಶ್ವಾಸ ಹೊಂದಿದೆ ಜಿಯೋ.

Comments are closed.