BMRCL Recruitment 2022: ತಿಂಗಳಿಗೆ ಲಕ್ಷಾಂತರ ಸಂಬಳ ನೀಡುವ ವಿವಿಧ ಹುದ್ದೆಗಳು ಖಾಲಿ ಇವೆ. ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿದ್ದು, ಹಲವು ಯುವ ಯುವತಿಯರಿಗೆ ಸರಿಯಾದ ಉದ್ಯೋಗ ದೊರಕುವಂತಾಗಿದೆ. ಹೀಗೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ಬೆಂಗಳೂರು ಮೆಟ್ರೋ ಕಾರ್ಪೋರೇಶನ್ ಲಿಮಿಟೆಡ್ ಕೂಡ ಮುಂದಾಗಿದೆ. ತನ್ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಲೇಖನದಲ್ಲಿದೆ ಮುಂದೆ ಓದಿ.

ಅಸಿಸ್ಟೆಂಟ್ ಮ್ಯಾನೇಜರ್, ಸೀನಿಯರ್ ಟ್ರಾನ್ಸ್ಪೋರ್ಟ್ ಪ್ಲ್ಯಾನರ್ ಸೇರಿದಂತ್ 11 ಹುದ್ದೆಗಳು ಭರ್ತಿಯಾಗಬೇಕಿದ್ದು, ಬಿಇ, ಬಿ.ಟೆಕ್, ಎಂಬಿಎ, ಸ್ನಾತಕೋತ್ತರ ಪದವಿ ಮುಗಿಸಿರುವವರು ಇದಕ್ಕೆ ಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಸಲ್ಲಿಕೆ ಇದೇ ತಿಂಗಳು ಅಂದರೆ ಜನವರಿ 21ರಿಂದ ಆರಂಭವಾಗಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 21, 2022.

ಚೀಫ್ ಎಂಜಿನಿಯರ್ಸ್/ಅಡ್ವೈಸರ್ಸ್ ನಲ್ಲಿ 4 ಹುದ್ದೆ, ಸೀನಿಯರ್ ಟ್ರಾನ್ಸ್ಪೋರ್ಟ್ ಪ್ಲ್ಯಾನರ್ (ಕನ್ಸಲ್ಟೆಂಟ್)ನಲ್ಲಿ 1 ಹುದ್ದೆ ಹಾಗೂ ಅಸಿಸ್ಟೆಂಟ್ ಮ್ಯಾನೇಜರ್(ಪ್ರಾಪರ್ಟಿ ಡೆವಲಪ್ಮೆಂಟ್)- 6 ಹುದ್ದೆಗಳು ಖಾಲಿ ಇವೆ. ಚೀಫ್ ಎಂಜಿನಿಯರ್ಸ್/ಅಡ್ವೈಸರ್ಸ್-ಸಿವಿಲ್ ಗೆ ಎಂಜಿನಿಯರಿಂಗ್ನಲ್ಲಿ ಬಿಇ, ಬಿ.ಟೆಕ್, ಸೀನಿಯರ್ ಟ್ರಾನ್ಸ್ಪೋರ್ಟ್ ಪ್ಲ್ಯಾನರ್(ಕನ್ಸಲ್ಟೆಂಟ್)ಗೆ ಸಿವಿಲ್ ಎಂಜಿನಿಯರಿಂಗ್, ಟ್ರಾನ್ಸ್ಪೋರ್ಟ್ ಪ್ಲ್ಯಾನಿಂಗ್ನಲ್ಲಿ ಸ್ನಾತಕೋತ್ತರ ಪದವಿ, ಅಸಿಸ್ಟೆಂಟ್ ಮ್ಯಾನೇಜರ್(ಪ್ರಾಪರ್ಟಿ ಡೆವಲಪ್ಮೆಂಟ್) ಹುದ್ದೆಗೆ ಎಂಬಿಎ, ಎಕನಾಮಿಕ್ಸ್/ಕಾಮರ್ಸ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವವರು ಅರ್ಜಿ ಸಲ್ಲಿಸಬಹುದು.

ಚೀಫ್ ಎಂಜಿನಿಯರ್ಸ್/ಅಡ್ವೈಸರ್ಸ್ ಹುದ್ದೆಗೆ ಕನಿಷ್ಠ 18 ವರ್ಷ ಅನುಭವ, ಸೀನಿಯರ್ ಟ್ರಾನ್ಸ್ಪೋರ್ಟ್ ಪ್ಲ್ಯಾನರ್ (ಕನ್ಸಲ್ಟೆಂಟ್)- 8ರಿಂದ 10 ವರ್ಷ ಅನುಭವ ಹಾಗೂ ಅಸಿಸ್ಟೆಂಟ್ ಮ್ಯಾನೇಜರ್(ಪ್ರಾಪರ್ಟಿ ಡೆವಲಪ್ಮೆಂಟ್)-ಕನಿಷ್ಠ 5 ವರ್ಷ ಅನುಭವವಿರಬೇಕು. ಇನ್ನು ಅರ್ಜಿ ಸಲ್ಲಿಸಲು ವಯೋಮಿತಿಯ ಬಗ್ಗೆ ಹೇಳುವುದಾದರೆ, ಚೀಫ್ ಎಂಜಿನಿಯರ್ಸ್/ಅಡ್ವೈಸರ್ಸ್- 55-63 ವರ್ಷ, ಸೀನಿಯರ್ ಟ್ರಾನ್ಸ್ಪೋರ್ಟ್ ಪ್ಲ್ಯಾನರ್(ಕನ್ಸಲ್ಟೆಂಟ್)-ಬಿಎಂಆರ್ಸಿಎಲ್ ನೇಮಕಾತಿ ಪ್ರಕಾರ, ಅಸಿಸ್ಟೆಂಟ್ ಮ್ಯಾನೇಜರ್(ಪ್ರಾಪರ್ಟಿ ಡೆವಲಪ್ಮೆಂಟ್)- 35 ವರ್ಷವಾಗಿರಬೇಕು.

ಚೀಫ್ ಎಂಜಿನಿಯರ್ಸ್/ಅಡ್ವೈಸರ್ಸ್ ಹುದ್ದೆ ತಿಂಗಳಿಗೆ ರೂ.1,40,000-1,80,000, ಸೀನಿಯರ್ ಟ್ರಾನ್ಸ್ಪೋರ್ಟ್ ಪ್ಲ್ಯಾನರ್ (ಕನ್ಸಲ್ಟೆಂಟ್)- ತಿಂಗಳಿಗೆ ರೂ. 1,00,000, ಅಸಿಸ್ಟೆಂಟ್ ಮ್ಯಾನೇಜರ್ (ಪ್ರಾಪರ್ಟಿ ಡೆವಲಪ್ಮೆಂಟ್)- ತಿಂಗಳಿಗೆ ರೂ.50,000 ವೇತನ ಪಡೆಯಬಹುದು. ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ಪತ್ರವನ್ನು ಸ್ವತಃ ದಾಖಲೆಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ಜನರಲ್ ಮ್ಯಾನೇಜರ್(HR), ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್, 3ನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್, ಕೆ.ಹೆಚ್. ರಸ್ತೆ, ಶಾಂತಿನಗರ, ಬೆಂಗಳೂರು-560027. ಇನ್ನು ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ಮೆಟ್ರೋದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು.

Comments are closed.