ಬಿಡುಗಡೆಯಾಯಿತು ಹೊಸ ಬ್ರಾಂಡ್ ಮೌಲ್ಯ, ಕೊಹ್ಲಿ ನಾಯಕತ್ವ ಕಳೆದುಕೊಂಡ ಮೇಲೆ ಟಾಪ್ 4 ಕ್ರಿಕೆಟಿಗರ ಮೌಲ್ಯ ಹೇಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಜಗತ್ತು ಓಡುತ್ತಿರುವುದೇ ಬ್ರಾಂಡ್ ನ ಹಿಂದೆ. ಅದರಲ್ಲೂ ಸೆಲೆಬ್ರೆಟಿಗಳು ಕೆಲಸ ಮಾಡುವುದೇ ತಮ್ಮ ಬ್ರಾಂಡ್ ಇಮೇಜ್ ಹೆಚ್ಚಿಸಿಕೊಳ್ಳಲು. ಇನ್ನು ಕ್ರೀಡಾ ಪಟುಗಳಾದ ಕ್ರಿಕೇಟಿಗರು ಸಹ ಬ್ರಾಂಡ್ ಸೃಷ್ಠಿಸಿ ಅದನ್ನು ಪೋಷಿಸುತ್ತಾರೆ. ಕೆಲವು ಕ್ರಿಕೇಟಿಗರ ಬ್ರಾಂಡ್ ಮೌಲ್ಯ, ಅವರು ಉತ್ತಮ ಫಾರ್ಮ್ ನಲ್ಲಿದ್ದಾಗ ಹೆಚ್ಚು ಇರುತ್ತದೆ, ಅದೇ ಫಾರ್ಮ್ ಕಳೆದುಕೊಂಡಾಗ ಕುಸಿಯುತ್ತದೆ. ಸದ್ಯ ಅತಿಹೆಚ್ಚು ಬ್ರಾಂಡ್ ವ್ಯಾಲ್ಯೂ ಹೊಂದಿರುವ ಭಾರತದ ಟಾಪ್ – 4 ಕ್ರಿಕೇಟಿಗರು ಯಾರು ಮತ್ತು ಅವರ ಬ್ರಾಂಡ್ ಮೌಲ್ಯವೆಷ್ಟು ಎಂಬುದನ್ನ ತಿಳಿಯೋಣ ಬನ್ನಿ.

ಟಾಪ್ 4 : ರೋಹಿತ್ ಶರ್ಮಾ – ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಭಾರತದ ಅತಿಹೆಚ್ಚು ಬ್ರಾಂಡ್ ವ್ಯಾಲ್ಯೂ ಹೊಂದಿರುವ ಆಟಗಾರರಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.ಇವರ ಒಟ್ಟು ಬ್ರಾಂಡ್ ಮೌಲ್ಯ 23 ಮಿಲಿಯನ್ ತಲುಪಿದೆ.

ಟಾಪ್ 3 : ಸಚಿನ್ ತೆಂಡೂಲ್ಕರ್ – ಕ್ರಿಕೇಟ್ ನ ದೇವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಕ್ರಿಕೇಟ್ ನಿಂದ ನಿವೃತ್ತಿ ಘೋಷಿಸಿ ಹತ್ತು ವರ್ಷಗಳಾದರೂ ತಮ್ಮ ಬ್ರಾಂಡ್ ಮೌಲ್ಯವನ್ನ ಹಾಗೆಯೇ ಇರಿಸಿಕೊಂಡಿದ್ದಾರೆ. ಇವರ ಒಟ್ಟು ಬ್ರಾಂಡ್ ವ್ಯಾಲ್ಯೂ 25 ಮಿಲಿಯನ್.

ಟಾಪ್ 2 : ಎಂ.ಎಸ್.ಧೋನಿ : ಚಾಣಕ್ಯ ಖ್ಯಾತಿಯ ಭಾರತ ತಂಡದ ಯಶಸ್ವಿ ನಾಯಕ ವಿಕೇಟ್ ಕೀಪರ್ ಎಂ.ಎಸ್.ಧೋನಿ ಸದ್ಯ ಅಂತರಾಷ್ಟ್ರೀಯ ಕ್ರಿಕೇಟ್ ನಿಂದ ನಿವೃತ್ತಿ ಹೊಂದಿದರೂ ಅವರ ಬ್ರಾಂಡ್ ಮೌಲ್ಯ ಕೊಂಚವೂ ಕುಸಿದಿಲ್ಲ. ಸದ್ಯ ಅವರ ಬ್ರಾಂಡ್ ವ್ಯಾಲ್ಯೂ 41 ಮಿಲಿಯನ್ ನಷ್ಟು.

ಟಾಪ್ 1 : ವಿರಾಟ್ ಕೊಹ್ಲಿ – ಕಿಂಗ್ ಕೊಹ್ಲಿ, ಭಾರತ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದರೂ, ಅವರ ಬ್ರಾಂಡ್ ಕಡಿಮೆಯಾಗಿಲ್ಲ. ಜಾಹೀರಾತುದಾರರು ಕೊಹ್ಲಿ ಬ್ರಾಂಡ್ ಗೆ ಮುಗಿ ಬೀಳುತ್ತಿದ್ದಾರೆ. ಇವರ ಒಟ್ಟು ಬ್ರಾಂಡ್ ಮೌಲ್ಯ ಬರೋಬ್ಬರಿ 237 ಮಿಲಿಯನ್. ಇನ್ನು ಮುಂದೆ ಕೊಹ್ಲಿಯ ಬ್ರಾಂಡ್ ಮೌಲ್ಯ ಹೀಗೆ ಇರುತ್ತದೆಯೋ ಅಥವಾ ಕಡಿಮೆಯಾಗುತ್ತದೆಯೋ ಎಂಬುದನ್ನ ಕಾದು ನೋಡಬೇಕು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.