ಇದ್ದಕ್ಕಿದ್ದ ಹಾಗೆ ಏಕದಿನ ಕ್ರಿಕೆಟ್ ನಿವೃತ್ತಿ ಘೋಷಣೆ ಮಾಡಿ ಬೆನ್ ಸ್ಟೋಕ್ಸ್: 31 ವಯಸ್ಸಿಗೆ ಹೀಗೆ ಮಾಡಲು ಕಾರಣವೇನು ಗೊತ್ತೇ?

ನಮಸ್ಕಾರ ಸ್ನೇಹಿತರೆ ಈಗಾಗಲೇ ರೋಹಿತ್ ಶರ್ಮ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಇಂಗ್ಲೆಂಡ್ ತಂಡವನ್ನು ಟಿ-ಟ್ವೆಂಟಿ ಹಾಗೂ ಏಕದಿನ ಸರಣಿಯಲ್ಲಿ ಸೋಲಿಸುವ ಮೂಲಕ ದಾಖಲೆಯನ್ನು ನಿರ್ಮಿಸಿದೆ. ಆದರೆ ಇದರ ನಡುವಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಮತ್ತೊಂದು ಶಾಕಿಂಗ್ ಆ’ಘಾತ ಸಿಕ್ಕಿದೆ. ಹೌದು ಗಳೇ 2019 ರಲ್ಲಿ ಇಂಗ್ಲೆಂಡ್ ತಂಡ ಏಕದಿನ ವಿಶ್ವಕಪ್ ಗೆಲ್ಲಲು ಸಹಾಯ ಮಾಡಿದ ತಂಡದ ಸಾರ್ವಕಾಲಿಕ ಸರ್ವಶ್ರೇಷ್ಠ ಆಲ್-ರೌಂಡರ್ ಆಟಗಾರರಲ್ಲಿ ಒಬ್ಬರಾಗಿರುವ ಬೆನ್ ಸ್ಟೋಕ್ಸ್ ರವರು ಇಂಗ್ಲೆಂಡ್ ತಂಡದ ಏಕದಿನ ಕ್ರಿಕೆಟ್ ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ.

ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿರುವ ಬೆನ್ ಸ್ಟೋಕ್ಸ್ ರವರು ಕೇವಲ ಮೂವತ್ತೊಂದು ವರ್ಷ ವಯಸ್ಸಿಗೆ ಅದರಲ್ಲೂ ವಿಶೇಷವಾಗಿ ಮುಂದಿನ ವರ್ಷ ಏಕದಿನ ವಿಶ್ವಕಪ್ ಇರುವ ಮುನ್ನವೇ ಏಕದಿನ ಕ್ರಿಕೆಟ್ ನಿಂದ ನಿವೃತ್ತಿಯನ್ನು ಘೋಷಿಸಿರುವುದು ನಿಜಕ್ಕೂ ಕೂಡ ತಂಡಕ್ಕೆ ಬೇಸರದ ಸಂಗತಿಯಾಗಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಬಹುದು. ಹೌದು ಗೆಳೆಯರೇ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಆಡುವ ಮೊದಲ ಪಂದ್ಯವೇ ಅವರ ಏಕದಿನ ಕರಿಯರ್ ನ ಕೊನೆಯ ಪಂದ್ಯ ಆಗಿರಲಿದೆ. ಈ ಕುರಿತಂತೆ ಸ್ವತಹ ಬೆನ್ ಸ್ಟೋಕ್ಸ್ ರವರೇ ತನ್ನ ಕೊನೆಯ ಏಕದಿನ ಪಂದ್ಯವನ್ನು ದರ್ಹಮ್ ನಲ್ಲಿ ಆಡಲಿದ್ದೇನೆ ಎಂಬುದಾಗಿ ಟ್ವೀಟ್ ಮಾಡಿ ಹೇಳಿದ್ದಾರೆ.

ben | ಇದ್ದಕ್ಕಿದ್ದ ಹಾಗೆ ಏಕದಿನ ಕ್ರಿಕೆಟ್ ನಿವೃತ್ತಿ ಘೋಷಣೆ ಮಾಡಿ ಬೆನ್ ಸ್ಟೋಕ್ಸ್: 31 ವಯಸ್ಸಿಗೆ ಹೀಗೆ ಮಾಡಲು ಕಾರಣವೇನು ಗೊತ್ತೇ?
ಇದ್ದಕ್ಕಿದ್ದ ಹಾಗೆ ಏಕದಿನ ಕ್ರಿಕೆಟ್ ನಿವೃತ್ತಿ ಘೋಷಣೆ ಮಾಡಿ ಬೆನ್ ಸ್ಟೋಕ್ಸ್: 31 ವಯಸ್ಸಿಗೆ ಹೀಗೆ ಮಾಡಲು ಕಾರಣವೇನು ಗೊತ್ತೇ? 2

ಇನ್ನು ಈ ಕುರಿತಂತೆ ಮಾತನಾಡಿರುವ ಬೆನ್ ಸ್ಟೋಕ್ಸ್ ರವರು ಮೂರು ಫಾರ್ಮೆಟ್ ಗಳಲ್ಲಿ ಆಡಲು ನನ್ನ ದೇಹ ಸಪೋರ್ಟ್ ಮಾಡುತ್ತಿಲ್ಲ ಹಾಗೂ ಇದು ತ್ರಾಸದಾಯಕವಾಗಿದೆ. ಇದರಿಂದಾಗಿ ತಂಡಕ್ಕೆ ನನ್ನ 100% ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಫಾರ್ಮೆಟ್ ನಲ್ಲಿ ನನ್ನ ನಿವೃತ್ತಿಯಿಂದ ಬೇರೆ ಅತ್ಯಂತ ಪ್ರತಿಭಾನ್ವಿತ ಆಟಗಾರರಿಗೆ ಅವಕಾಶ ಸಿಗಲಿದೆ ಎಂಬುದಾಗಿ ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಆದರೆ ಕಂಡಿತವಾಗಿ ಇಂಗ್ಲೆಂಡ್ ತನ್ನ ಅತ್ಯಂತ ಶ್ರೇಷ್ಠ ಆಟಗಾರನ ಸೇವೆಯನ್ನು ಏಕದಿನ ಕ್ರಿಕೆಟ್ನಲ್ಲಿ ಕಳೆದುಕೊಳ್ಳಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

Comments are closed.