ಬೆಂಗಳೂರು ಬುಲ್ಸ್ ಜೊತೆ ಸದಾ ಕಾಣಿಸಿಕೊಳ್ಳುವ ಈ ಚೆಲುವೆ ಯಾರು ಗೊತ್ತೇ? ಇವರ ಬ್ಯಾಕ್ ಗ್ರೌಂಡ್ ಏನು ಗೊತ್ತೇ??

ವಿವೋ ಪ್ರೊ ಕಬಡ್ಡಿ ಲೀಗ್ ಇದು ಎಲ್ಲರೂ ಬಹಳ ಆಸಕ್ತಿ ನೋಡುವ ಕ್ರೀಡಾ ಟೂರ್ನಮೆಂಟ್ ಗಳಲ್ಲಿ ಒಂದು, ಇದರಲ್ಲಿ ನಮ್ಮ ಬೆಂಗಳೂರು ಬುಲ್ಸ್ ತಂಡಕ್ಕೆ ಭಾರಿ ಬೇಡಿಕೆ ಮತ್ತು ಅಭಿಮಾನಿ ಬಳಗ ಎರಡು ದೊಡ್ಡದಾಗಿಯೇ ಇದೆ ಇದೆ ಎಂದು ಹೇಳಬಹುದು. ಇತ್ತೀಚಿನ ವರ್ಷಗಳಲ್ಲಿ ಕಬಡ್ಡಿ ಕ್ರೀಡೆಗೆ ಹೆಚ್ಚು ಅಭಿಮಾನಿಗಳು ಇರುವುದು ಹೆಚ್ಚು ಜನರು ಪಂದ್ಯವನ್ನು ವೀಕ್ಷಿಸುತ್ತಿರುವುದು ಬಹಳ ಸಂತೋಷದ ವಿಚಾರ. ನೀವು ಬೆಂಗಳೂರು ಬುಲ್ಸ್ ತಂಡದ ಪಂದ್ಯಗಳನ್ನು ವೀಕ್ಷಿಸಿದ್ದರೆ, ಅದರಲ್ಲಿ ನೀವು ಒಬ್ಬ ಸುಂದರವಾದ ಹುಡುಗಿಯನ್ನು ನೋಡಿರುತ್ತೀರಿ.

ಇವರು ತಂಡದ ಮುಖ್ಯ ಪಂದ್ಯಗಳಲ್ಲಿ ಬಂದು ಕುಳಿತಿರುತ್ತಾರೆ. ಬಹಳ ಸುಂದರವಾಗಿ ಇರುವ ಈ ಹುಡುಗಿಯ ಮೇಲೆ ಛಾಯಾಗ್ರಹಕರು ಹೆಚ್ಚು ಫೋಕಸ್ ಮಾಡಿ, ಅವರನ್ನು ಪದೇ ಪದೇ ತೋರಿಸುತ್ತಾರೆ ಎಂದು ಹೇಳಬಹುದು. ಬೆಂಗಳೂರು ಬುಲ್ಸ್ ತಂಡದ ಜೊತೆಗೆ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಹುಡುಗಿ ಯಾರು ಎನ್ನುವ ಪ್ರಶ್ನೆ ಹಲವರಲ್ಲಿ ಇದೆ, ಈಕೆ ನಮ್ಮ ತಂಡದ ಲೇಡಿ ಲಕ್ ಇರಬಹೂಡಾ ಎನ್ನುವ ಚರ್ಚೆ ಸಹ ಕೇಳಿಬರುತ್ತಿದೆ. ಆದರೆ ಈಕೆ ನಿಜಕ್ಕೂ ಯಾರು? ನಮ್ಮ ತಂಡದ ಪ್ರಮುಖ ಪಂದ್ಯಗಳಲ್ಲಿ ಬಂದು ಕೂರುವುದು ಏಕೆ? ತಿಳಿಸುತ್ತೇವೆ ನೋಡಿ..

bengaluru bulls krithi | ಬೆಂಗಳೂರು ಬುಲ್ಸ್ ಜೊತೆ ಸದಾ ಕಾಣಿಸಿಕೊಳ್ಳುವ ಈ ಚೆಲುವೆ ಯಾರು ಗೊತ್ತೇ? ಇವರ ಬ್ಯಾಕ್ ಗ್ರೌಂಡ್ ಏನು ಗೊತ್ತೇ??
ಬೆಂಗಳೂರು ಬುಲ್ಸ್ ಜೊತೆ ಸದಾ ಕಾಣಿಸಿಕೊಳ್ಳುವ ಈ ಚೆಲುವೆ ಯಾರು ಗೊತ್ತೇ? ಇವರ ಬ್ಯಾಕ್ ಗ್ರೌಂಡ್ ಏನು ಗೊತ್ತೇ?? 2

ಬೆಂಗಳೂರು ಬುಲ್ಸ್ ತಂಡದ ಜೊತೆಗೆ ಕಾಣಿಸಿಕೊಳ್ಳುವ ಹುಡುಗಿಯ ಹೆಸರು ಕೃತಿ ಮುರಳಿಕೃಷ್ಣ, ಇವರು ಮೂಲತಃ ತಮಿಳು ನಾಡಿನವರು. ಕೃತಿ ಅವರು ಬೆಂಗಳೂರು ಬುಲ್ಸ್ ತಂಡ ಸಿಇಒ ಆಗಿದ್ದಾರೆ. ಇವರು ವಿದೇಶದಲ್ಲಿ ಓದಿಕೊಂಡು ಬಂದಿರುವ ಸುಸಂಸ್ಕೃತ ಹುಡುಗಿ ಆಗಿದ್ದು, ಯೂನಿವರ್ಸಿಟಿ ಆಫ್ ಕೇಂಬ್ರಿಡ್ಜ್, ಯೂನಿವರ್ಸಿಟಿ ಕಾಲೇಜ್ ಲಂಡನ್ ನಲ್ಲಿ ಓದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇವರು ಆಕ್ಟಿವ್ ಆಗಿದ್ದು, ಇನ್ಸ್ಟಗ್ರಾಮ್ ನಲ್ಲಿ ಇವರಿಗೆ 8 ಸಾವಿರಕ್ಕಿಂತ ಹೆಚ್ಚು ಫಾಲೋವರ್ಸ್ ಇದ್ದಾರೆ. ಕೃತಿ ಅವರನ್ನು ನೋಡಿ ಫಿದಾ ಆಗಿರುವವರು ಬಹಳಷ್ಟು ಜನರಿದ್ದು, ಇವರು ಯಾವುದೇ ಹೀರೋಯಿನ್ ಗೆ ಕಡಿಮೆ ಇಲ್ಲ ಎನ್ನುತ್ತಿದ್ದಾರೆ ಬೆಂಗಳೂರು ಬುಲ್ಸ್ ತಂಡದ ಅಭಿಮಾನಿಗಳು.

Comments are closed.