ಒಂದು ವಾರ ಬಿಗ್ ಬಾಸ್ ತಪ್ಪಿಸಿಕೊಂಡಿದ್ದಕ್ಕಾಗಿ ಸುದೀಪ್ ಗೆ ಶಾಕ್ ಕೊಟ್ಟ ವಾಹಿನಿ. ಕಟ್ ಮಾಡಿದ ಸಂಭಾವನೆ ಅದೆಷ್ಟು ಕೋಟಿ ಗೊತ್ತೇ??

ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ 9ನೇ ಸೀಸನ್ ಯಶಸ್ವಿಯಾಗಿ ನಡೆಯುತ್ತಿದೆ. ಈ ಸೀಸನ್ ನಲ್ಲಿ ಸೀನಿಯರ್ಸ್ ವರ್ಸಸ್ ಜೂನಿಯರ್ಸ್ ಎಂಬ ರೀತಿಯಾಗಿ ನಡೆಸಲಾಗುತ್ತಿದೆ. ಈಗಾಗಲೇ ಸಾಕಷ್ಟು ದಿನಗಳು ಕಳೆದಿರುವ ಬಿಗ್ ಬಾಸ್ ನಲ್ಲಿ ದಿನೇ ದಿನೇ ಆಟ ರೋಚಕವಾಗಿ ನಡೆಯುತ್ತಿದೆ. ಪ್ರತಿನಿತ್ಯವು ಆಟಗಾರರಿಗೆ ಬೇರೆ ಬೇರೆ ಚಟುವಟಿಕೆಗಳನ್ನು ನೀಡಲಾಗುತ್ತದೆ. ಪ್ರತಿ ವಾರದ ಕೊನೆಯಲ್ಲಿ ಶನಿವಾರ ಮತ್ತು ಭಾನುವಾರ ಕಿಚ್ಚ ಸುದೀಪ್ ಅವರು ಕಾರ್ಯಕ್ರಮವನ್ನು ನಿರೂಪಿಸುತ್ತಾರೆ. ಪ್ರತಿ ವಾರವು ಒಂದು ಸ್ಪರ್ಧಿಯನ್ನು ಹೊರ ಹಾಕುವುದಲ್ಲದೆ ಪೂರ್ತಿ ಎಲಿಮಿನೇಷನ್ ಪ್ರಕ್ರಿಯೆಯನ್ನು ಅವರು ನಡೆಸುತ್ತಾರೆ. ಇದರ ಜೊತೆಜೊತೆಗೆ ಸುದೀಪ ಅವರೇ ಮನೆಯೊಳಗಿನ ಸ್ಪರ್ಧಿಗಳಿಗೆ ಹೊರಗಿನ ಪ್ರಪಂಚದಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳಲು ಇರುವ ಸೇತುವೆ ಎಂದೇ ಹೇಳಬಹುದು.

ಕಳೆದ 9 ಸೀಜನ್ ಗಳಿಂದಲೂ ಬಿಗ್ ಬಾಸ್ ನಡೆಸಿಕೊಡುತ್ತಿರುವ ಕಿಚ್ಚ ಸುದೀಪ್ ಅವರು ಎಲ್ಲಾ ವಾರಾಂತ್ಯದಲ್ಲೂ ಕೂಡ ಕಾರ್ಯಕ್ರಮವನ್ನು ಬಹಳ ಲವಲವಿಕೆಯಿಂದ ನಡೆಸಿಕೊಡುತ್ತಾರೆ. ಕಳೆದ ಸೀಸನ್ ನಲ್ಲಿ ಅನಾರೋಗ್ಯದ ಕಾರಣದಿಂದಾಗಿ ಕೆಲವು ಸಂಚಿಕೆಗಳಲ್ಲಿ ಅವರು ಭಾಗವಹಿಸಲಾಗಿರಲಿಲ್ಲ. ಅದರ ಹೊರತಾಗಿ ಅವರು ಯಾವ ವಾರವೂ ಕೂಡ ಬಿಗ್ ಬಾಸ್ ಮಿಸ್ ಮಾಡಿಯೇ ಇಲ್ಲ. ಆದರೆ ಮತ್ತೊಮ್ಮೆ ಕಳೆದ ವಾರ ಅವರು ಬಿಗ್ ಬಾಸ್ ಶೋನಿಂದ ಹೊರಗುಳಿದಿದ್ದರು. ಕಳೆದ ಶನಿವಾರ ಮತ್ತು ಭಾನುವಾರ ಅವರು ಕಾರ್ಯಕ್ರಮವನ್ನು ನಿರೂಪಿಸಲು ಸಾಧ್ಯವಾಗಿರಲಿಲ್ಲ. ಹೌದು ತಮ್ಮ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದ ಕಿಚ್ಚ ಸುದೀಪ್ ಅವರು ತಮ್ಮ ಪತ್ನಿ ಯೊಂದಿಗೆ ವಿದೇಶ ಪ್ರವಾಸದಲ್ಲಿದ್ದರು. ಪ್ರವಾಸದ ಸಂಭ್ರಮದಲ್ಲಿದ್ದ ಸುದೀಪ ಅವರಿಗೆ ಕಳೆದ ವಾರ ಬಿಗ್ ಬಾಸ್ ನಡೆಸಿಕೊಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸುದೀಪ ಅವರನ್ನು ಬಿಗ್ ಬಾಸ್ ಸ್ಪರ್ಧಿಗಳು ಬಹಳ ಮಿಸ್ ಮಾಡಿಕೊಂಡಿದ್ದರು. ಆದರೆ ನೆನ್ನೆ ಮತ್ತು ಮೊನ್ನೆಯ ಸಂಚಿಕೆಯಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

sudeep bbk9 | ಒಂದು ವಾರ ಬಿಗ್ ಬಾಸ್ ತಪ್ಪಿಸಿಕೊಂಡಿದ್ದಕ್ಕಾಗಿ ಸುದೀಪ್ ಗೆ ಶಾಕ್ ಕೊಟ್ಟ ವಾಹಿನಿ. ಕಟ್ ಮಾಡಿದ ಸಂಭಾವನೆ ಅದೆಷ್ಟು ಕೋಟಿ ಗೊತ್ತೇ??
ಒಂದು ವಾರ ಬಿಗ್ ಬಾಸ್ ತಪ್ಪಿಸಿಕೊಂಡಿದ್ದಕ್ಕಾಗಿ ಸುದೀಪ್ ಗೆ ಶಾಕ್ ಕೊಟ್ಟ ವಾಹಿನಿ. ಕಟ್ ಮಾಡಿದ ಸಂಭಾವನೆ ಅದೆಷ್ಟು ಕೋಟಿ ಗೊತ್ತೇ?? 2

ಅವರಷ್ಟು ಲವಲವಿಕೆಯಿಂದ ಮತ್ತೊಬ್ಬರು ಶೋ ನಡೆಸಿಕೊಡಲಾರರು. ಬೇರೆ ಭಾಷೆಗಳ ನಿರೂಪಕರಿಗಿಂತಲೂ ಕೂಡ ಕನ್ನಡದ ಬಿಗ್ ಬಾಸ್ ನಲ್ಲಿ ಸುದೀಪ ಅವರು ಹೆಚ್ಚು ಪ್ರೀತಿಯಿಂದ ಹಾಗೆ ಅಷ್ಟೇ ಜವಾಬ್ದಾರಿಯಿಂದ ಸ್ಪರ್ಧಿಗಳ ಜೊತೆಗೆ ನಡೆದುಕೊಳ್ಳುತ್ತಾರೆ. ಸ್ಪರ್ಧಿಗಳಿಗೂ ಅಷ್ಟೇ, ಸುದೀಪ್ ಎಂದರೆ ಬಹಳ ಗೌರವ ಮತ್ತು ಅಚ್ಚುಮೆಚ್ಚು. ಇದೆಲ್ಲದರ ನಡುವೆಯೂ ಕಳೆದ ವಾರ ಬಿಗ್ ಬಾಸ್ ತಪ್ಪಿಸಿಕೊಂಡಿದ್ದಕ್ಕಾಗಿ ಸುದೀಪ ಅವರಿಗೆ ದೊಡ್ಡ ಮೊತ್ತದ ಹಣ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ. ಅವರು ಒಂದು ಕಂತಿಗೆ ಸಾಕಷ್ಟು ಹಣ ಪಡೆಯುತ್ತಾರೆ. ಒಂದು ಸಂಚಿಕೆ ಅವರು ತಪ್ಪಿಸಿಕೊಂಡಿದ್ದಕ್ಕಾಗಿ ಬರೋಬರಿ 9 ಕೋಟಿ ಹಣವನ್ನು ಬಿಗ್ ಬಾಸ್ ನಿಂದ ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು ಅವರು ಕಳೆದ ವಾರ ಶೋ ನಿರೂಪಿಸದ ಕಾರಣ 9 ಕೋಟಿ ಹಣದಿಂದ ವಂಚಿತರಾಗಿದ್ದಾರೆ.

Comments are closed.